Aries Horoscope 2024: ಮೇ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಜನಿಸಿದವರ ರಾಶಿ ಭವಿಷ್ಯ ಹೇಗಿರುತ್ತದೆ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ನಷ್ಟವೇನು ಹಾಗೂ ಮೇಷ ರಾಶಿಯವರು ಮೇ ತಿಂಗಳಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮೇಷ ರಾಶಿಯವರಿಗೆ (Aries Horoscope) ಗುರು ಜನ್ಮ ರಾಶಿಯಲ್ಲಿ ಇದ್ದನು ಮೇ ಒಂದನೆ ತಾರೀಖಿಗೆ ಗುರು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಆಗ ಮೇಷ ರಾಶಿಯವರಿಗೆ ಎರಡನೆ ಸ್ಥಾನದಲ್ಲಿ ಗುರು ಇರುತ್ತಾನೆ ಇದರಿಂದ ಮೇಷ ರಾಶಿಯವರಿಗೆ ಕೆಲವು ಅನುಕೂಲಗಳಾಗುತ್ತವೆ. ಗುರುವಿನಿಂದ ಮೇಷ ರಾಶಿಯವರಿಗೆ ಧನ ಲಾಭವಾಗುತ್ತದೆ. ಮೇಷ ರಾಶಿಯ ವಿವಾಹವಾಗದೆ ಇರುವವರಿಗೆ ಈ ಸಮಯದಲ್ಲಿ ವಿವಾಹ ಯೋಗ ಇರುತ್ತದೆ. ಸಂತಾನಕ್ಕಾಗಿ ಕಾಯುತ್ತಿರುವ ಮೇಷ ರಾಶಿಯವರಿಗೆ ಸಂತಾನಯೋಗವು ಲಭಿಸುತ್ತದೆ. ಮೇಷ ರಾಶಿಯವರಿಗೆ ದನ ಹಾಗೂ ದ್ರವ್ಯ ಲಾಭವಾಗುತ್ತದೆ ಹೊಸದಾಗಿ ಮನೆ, ಆಸ್ತಿ, ವಾಹನ ಆಭರಣಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಮೇಷ ರಾಶಿಯವರು ತಮ್ಮ ಮಾತಿನಿಂದ ಕಾರ್ಯ ಸಾಧನೆ ಮಾಡಿ ಗೆಲುವನ್ನು ಸಾಧಿಸುತ್ತಾರೆ.

ಶನಿ ಕುಂಭ ರಾಶಿಯಲ್ಲಿದ್ದು ಮೇಷ ರಾಶಿಯವರಿಗೆ ಲಾಭ ಸ್ಥಾನದಲ್ಲಿರುತ್ತಾನೆ. ಶನಿ ಲಾಭ ಸ್ಥಾನದಲ್ಲಿ ಇರುವುದರಿಂದ ನಾನಾ ರೀತಿಯ ಸುಖ ಪ್ರಾಪ್ತಿಯಾಗುತ್ತದೆ ಹಾಗೂ ಕೀರ್ತಿ ಸಿಗುತ್ತದೆ. ಮೇಷ ರಾಶಿಯವರು ಕೃಷಿಕರಾಗಿದ್ದರೆ ಈ ಸಮಯದಲ್ಲಿ ಕೃಷಿಯಲ್ಲಿ ಉತ್ತಮ ಲಾಭ ಗಳಿಸುತ್ತಾರೆ. ಮೇಷ ರಾಶಿಯ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಸಿಗುತ್ತದೆ, ಧನ ಧಾನ್ಯ ಪ್ರಾಪ್ತಿಯಾಗುತ್ತದೆ. ರಾಹು ಮೇಷ ರಾಶಿಯವರಿಗೆ 12ನೆ ಸ್ಥಾನದಲ್ಲಿದ್ದಾನೆ ರಾಹುವಿನಿಂದ ದನ ಹಾನಿ ಹಾಗೂ ನಿದ್ರಾ ನಾಶ ಉಂಟಾಗುತ್ತದೆ, ಮಾನಸಿಕ ನೆಮ್ಮದಿ ಇರುವುದಿಲ್ಲ, ಮನೆಯಲ್ಲಿರುವವರಿಗೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. 12 ನೆ ಸ್ಥಾನದಲ್ಲಿ ಪಾಪಗ್ರಹಗಳು ಅಂದರೆ ಕುಜ, ರಾಹು, ಕೇತು, ಶನಿ ಗ್ರಹಗಳು ಇದ್ದರೆ ದುರ್ ವ್ಯಯ ಯೋಗ ಉಂಟಾಗುತ್ತದೆ ಅಂದರೆ ಅನಾವಶ್ಯಕ ಖರ್ಚಾಗುತ್ತದೆ ಜೊತೆಗೆ ಬಂಧು ಮಿತ್ರರ ನಡುವೆ ಮನಸ್ತಾಪ ಉಂಟಾಗುತ್ತದೆ.

ಮೇಷ ರಾಶಿಯವರಿಗೆ ಕೇತು ಆರನೆ ಸ್ಥಾನದಲ್ಲಿದ್ದಾನೆ ಇದರಿಂದ ಒಳ್ಳೆಯ ಫಲಗಳನ್ನು ಕೊಡುತ್ತಾನೆ ಸುಖವನ್ನು ಕೊಡುತ್ತಾನೆ ಶತ್ರು ನಾಶ ಉಂಟಾಗುತ್ತದೆ. ಉದ್ಯೋಗದಲ್ಲಿ ಅಥವಾ ವ್ಯಾಪಾರದಲ್ಲಿ ಏಳಿಗೆ ಉಂಟಾಗುತ್ತದೆ ಧನ ಲಾಭವಾಗುತ್ತದೆ. ಮೇಷ ರಾಶಿಯ ನೂತನವಾಗಿ ಬಿಸಿನೆಸ್ ಪ್ರಾರಂಭ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಮುಂದಿನ ಮಾರ್ಚ್ 29ನೆ ತಾರೀಖಿನಂದು ಶನಿ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಅಂದಿನಿಂದ ಮೇಷ ರಾಶಿಯವರಿಗೆ ಸಾಡೇಸಾತ್ ಪ್ರಾರಂಭವಾಗುತ್ತದೆ. ಸಾಡೇಸಾತಿನ ಪರಿಣಾಮ ಸಾಡೇಸಾತ್ ಪ್ರಾರಂಭವಾಗುವ 6 ರಿಂದ 7 ತಿಂಗಳ ಮೊದಲಿನಿಂದಲೆ ಪ್ರಾರಂಭವಾಗುತ್ತದೆ ಹೀಗಾಗಿ ಮೇಷ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲ ಮೇಷ ರಾಶಿಯವರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!