Annabhagya Scheme Money: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳುತ್ತಾ ಬರುತ್ತಿದೆ. ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು, ಅದೇ ರೀತಿ 5 ಯೋಜನೆಗಳಲ್ಲಿ 4 ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು, 5ನೇ ಯೋಜನೆ ಈ ವರ್ಷಾಂತ್ಯಕ್ಕೆ ಜಾರಿಗೆ ಬರಲಿದೆ. ಪ್ರಸ್ತುತ ಮಹಿಳೆಯರಿಗೆ ಮತ್ತು ಜನರಿಗೆ ಅನುಕೂಲ ಆಗುವ 4 ಯೋಜನೆಗಳು ಜಾರಿಗೆ ಬಂದಿದೆ.
ಎಲ್ಲಾ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡಬಹುದಾದ ಶಕ್ತಿ ಯೋಜನೆ, ಮನೆಯನ್ನು ನಡೆಸಿಕೊಂಡು ಹೋಗುವ ಗೃಹಿಣಿಯರಿಗೆ ಸಹಾಯ ಮಾಡಲು ತಿಂಗಳಿಗೆ ₹2000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಲಾಗಿತ್ತು.
ಆದರೆ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದೆ, 5 ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿಯ ಬದಲು ಜನರಿಗೆ ಹಣ ನೀಡುವ ನಿರ್ಧಾರ ಮಾಡಿತು ಸರ್ಕಾರ. ಅನ್ನಭಾಗ್ಯ ಯೋಜನೆಯ ಹಣ 3 ತಿಂಗಳು ಈಗಾಗಲೇ ಜನರ ಖಾತೆಗೆ ಜಮೆ ಆಗಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಈ ಮೂರು ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಜನರ ಖಾತೆಗೆ ಬಂದಿದ್ದು, ಒಂದು ವೇಳೆ ನಿಮ್ಮ ಅಕೌಂಟ್ ಗೆ ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ ಇಲ್ಲವಾ ಎನ್ನುವುದನ್ನು ತಿಳಿಯುವುದು ಈಗ ಸುಲಭ.
Annabhagya Scheme Money
ನಿಮ್ಮ ಮೊಬೈಲ್ ಇಂದಲೇ ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ ಇಲ್ಲವಾ ಎನ್ನುವುದನ್ನು ತಿಳಿದುಕೊಳ್ಳಬಹುದು. ಅನ್ನಭಾಗ್ಯ ಯೋಜನೆಗೆ ರಿಜಿಸ್ಟರ್ ಮಾಡಿಸಿಕೊಂಡಿರುವವರು ನಿಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಅಥವಾ ಇಲ್ಲವಾ ಎನ್ನುವುದನ್ನು ನೀವು https://ahara.kar.nic.in/Home/EServices ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.
ಮೇಲೆ ನೀಡಿರುವ ಲಿಂಕ್ ಓಪನ್ ಮಾಡಿದರೆ, ಅಲ್ಲಿನ ಹೋಮ್ ಪೇಜ್ ನಲ್ಲಿ ಸ್ಟೇಟಸ್ ಎನ್ನುವ ಒಂದು ಆಯ್ಕೆ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ, ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ.. ಇಲ್ಲಿ ನಿಮ್ಮ ಜಿಲ್ಲೆ ಯಾವುದು ಎನ್ನುವುದನ್ನು ನೀವು ಸೆಲೆಕ್ಟ್ ಮಾಡಬೇಕು. ಈಗ ನಿಮ್ಮ ಫೋನ್ ಸ್ಕ್ರೀನ್ ಮೇಲೆ ಇನ್ನಷ್ಟು ಆಯ್ಕೆಗಳನ್ನು ನೋಡುತ್ತೀರಿ, ಈಗ DBT ಅಥವಾ ನೇರ ನಗದು ವರ್ಗಾವಣೆ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ..
ಬಳಿಕ ನೀವು ಯಾವ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಎನ್ನುವುದನ್ನು ತಿಳಿಯಬೇಕೋ, ಆ ತಿಂಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಈಗ ನಿಮ್ಮ ರೇಶನ್ ಕಾರ್ಡ್ ನಂಬರ್ ಎಂಟ್ರಿ ಮಾಡಬೇಕು. ಬಳಿಕ ಅಲ್ಲೇ ಬರುವ ಕ್ಯಾಪ್ಚ ಕೋಡ್ ಅನ್ನು ಕೂಡ ಹಾಕಿ, ಗೋ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ನಿಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಅಥವಾ ಇಲ್ಲವಾ ಎನ್ನುವುದು ನಿಮಗೆ ಗೊತ್ತಾಗುತ್ತದೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಇದ್ದರೆ, ಅದರಲ್ಲಿ ಎಷ್ಟು ಜನರ ಹೆಸರು ಇರುತ್ತದೆಯೋ, ಅಷ್ಟು ಜನರಿಗೆ 5ಕೆಜಿ ಅಕ್ಕಿಯ ಹಣವನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇಲ್ಲಿ 5ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ, 5ಕೆಜಿ ಅಕ್ಕಿಗೆ 170 ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ 4 ಜನ ಇದ್ದರೆ, ಎಲ್ಲರಿಗೂ ಸೇರಿ ₹680 ರೂಪಾಯಿ ಖಾತೆಗೆ ಜಮೆ ಆಗುತ್ತದೆ. ಇದನ್ನೂ ಓದಿ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಯಾಕೆ ಬಂದಿಲ್ಲ ಗೊತ್ತಾ? 2ನೇ ಕಂತಿನ ಹಣ ಯಾವಾಗ ಬರುತ್ತೆ ಇಲ್ಲಿದೆ ಕಂಪ್ಲೀಟ್ ಮಾಹಿತಿ