ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಪಡಿತರ ಕುಟುಂಬಗಳಿಗೆ ಉಚಿತ ಅಕ್ಕಿ ಮತ್ತು ಗೋಧಿಯನ್ನು ಪಡಿತರ ಅಂಗಡಿಗಳ ಮೂಲಕ ಸರ್ಕಾರ ಕೊಡುತ್ತಿದ್ದು. ಇನ್ನು ಮುಂದೆ ಅಕ್ಕಿ ಮತ್ತು ಗೋಧಿಗೆ ದರ ನಿಗದಿ ಮಾಡಬೇಕೆಂದು ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ಸುದ್ದಿ ಕೇಳಿಬರುತ್ತಿದೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಬಿಪಿಎಲ್ ಕಾರ್ಡುದಾರರಿಗೆ ಅನ್ನದಾನ ಯೋಜನೆಯಡಿ ಪಡಿತರ ಅಂಗಡಿಗಳ ಮೂಲಕ ಉಚಿತ ಅಕ್ಕಿಯನ್ನು ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ಬಿಪಿಎಲ್ ಕಾರ್ಡುದಾರರು ಅಕ್ಕಿ ಮತ್ತು ಗೋಧಿಗೆ ಹಣ ಪಾವತಿಸಬೇಕಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ರೇಷನ್ ಅಂಗಡಿಗಳ ಮೂಲಕ ಉಚಿತವಾಗಿ ವಿತರಿಸುತ್ತಿರುವ ಪ್ರತಿ ಕೆಜಿ ಅಕ್ಕಿ ಮತ್ತು ಗೋಧಿಗೆ 2 ಅಥವಾ 3 ರೂಪಾಯಿಯಂತೆ ದರ ನಿಗದಿಪಡಿಸಲು ಸರ್ಕಾರ ಚಿಂತಿಸಿದೆ. ಈ ಯೋಜನೆಯ ಬಗ್ಗೆ ಪ್ರಯೋಜನ, ನಷ್ಟದ ಬಗ್ಗೆ ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಸರ್ಕಾರಕ್ಕೆ ಕೆಲವು ಸಲಹೆ ನೀಡಿದ್ದಾರೆ. ಅವರ ಪ್ರಕಾರ ಉಚಿತ ಅಕ್ಕಿ ನೀಡುವುದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಆದ್ದರಿಂದ ಕನಿಷ್ಟ ದರ ನಿಗದಿ ಮಾಡುವುದು ಸೂಕ್ತ ಹಾಗಾಗಿ ದರ ನಿಗದಿ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಚರ್ಚೆಯ ನಂತರ ನಿರ್ಧಾರವಾದರೆ ಹೊಸ ಯೋಜನೆ ಬಜೆಟ್ ನಲ್ಲಿ ಸೇರ್ಪಡೆಯಾಗಲಿದೆ. ನಮ್ಮ ರಾಜ್ಯದಲ್ಲಿ ಒಟ್ಟು 1,17,00,728 ಬಿಪಿಎಲ್ ಕಾರ್ಡ್ ಗಳಿವೆ. 3,90,47,574 ಬಿಪಿಎಲ್ ಕಾರ್ಡ್ ಸದಸ್ಯರಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು 1.95 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಉಚಿತ ವಿತರಣೆ ಮಾಡಲಾಗುತ್ತಿದೆ. ಉಚಿತವಾಗಿ ನೀಡುತ್ತಿರುವ ಅಕ್ಕಿಗೆ ಕೆಜಿಗೆ 3 ರೂಪಾಯಿಯಂತೆ ದರ ನಿಗದಿ ಮಾಡಿದರೆ ತಿಂಗಳಿಗೆ 58 ಕೋಟಿ ರೂಪಾಯಿ ಸರ್ಕಾರಕ್ಕೆ ಆದಾಯ ಬರಲಿದೆ. ಅಕ್ಕಿಯಿಂದ ಬರುವ ಆದಾಯದಲ್ಲಿ ಅಕ್ಕಿಯ ಜೊತೆಗೆ ಇತರೆ ಪೌಷ್ಟಿಕಾಂಶ ಆಹಾರವನ್ನು ಬಡವರಿಗೆ ನೀಡುವುದರಿಂದ ಅಪೌಷ್ಟಿಕ ಸಮಸ್ಯೆ ನಿವಾರಣೆಯಾಗುತ್ತದೆ.
ಅಕ್ಕಿಗೆ ದರ ನಿಗದಿ ಮಾಡಿದರೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದನ್ನು ತಡೆಯಬಹುದು. ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 30 ರೂಪಾಯಿಯಂತೆ ಖರೀದಿಸಿ ರಾಜ್ಯಕ್ಕೆ ಪ್ರತಿ ತಿಂಗಳು 3 ರೂಪಾಯಿಯಂತೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುತ್ತಿದೆ. ಇದರೊಂದಿಗೆ ಸಾಗಾಣಿಕೆ ವೆಚ್ಚ, ಹಮಾಲಿ ವೆಚ್ಚ ಸೇರಿದಂತೆ ಸರ್ಕಾರ ಪ್ರತಿತಿಂಗಳು 159 ಕೋಟಿ ವೆಚ್ಚ ಮಾಡುತ್ತಿದೆ. ಕೊರೋನ ವೈರಸ್ ನಿಂದ ಸರ್ಕಾರಕ್ಕೆ ಭಾರಿ ನಷ್ಟ ಆಗಿದ್ದು ಉಚಿತ ಅಕ್ಕಿಗೆ ಕಡಿಮೆ ದರ ನಿಗದಿ ಮಾಡುವುದರಿಂದ ಸರ್ಕಾರಕ್ಕೆ ಆಗುವ ಖರ್ಚು ಕಡಿಮೆಯಾಗುತ್ತದೆ. ಸರ್ಕಾರ ಅಕ್ಕಿಗೆ ದರ ನಿಗದಿ ಮಾಡುತ್ತದೆಯೋ, ಇಲ್ಲವಾ, ಮಾಡಿದರೆ ಎಷ್ಟು ರೂಪಾಯಿ ನಿಗದಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಮಾಹಿತಿಯನ್ನು ಬಿಪಿಎಲ್ ಕಾರ್ಡುದಾರರಿಗೆ ತಿಳಿಸಿ.