ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆ ಅನ್ನಭಾಗ್ಯ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಆದರೆ ಅಷ್ಟು ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ 5ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ಕೊಡುವ ನಿರ್ಧಾರ ಮಾಡಿತು.
ಅನ್ನಭಾಗ್ಯ ಯೋಜನೆಯ ಹಣ ಈಗಾಗಲೇ ಜನರನ್ನು ತಲುಪುತ್ತಿದೆ. 3 ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಕೂಡ ಜನರ ಖಾತೆಗೆ ಜಮೆ ಆಗಿದೆ. ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಕೂಡ ಇನ್ನು ಕೆಲವು ಜನರಿಗೆ ಹಣ ಜಮೆ ಆಗಿಲ್ಲ. ಇದಕ್ಕೆ ಕಾರಣ ಗೃಹಲಕ್ಷ್ಮಿ ಯೋಜನೆಯ ಹಾಗೆ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿಲ್ಲದೆ ಇರುವುದು, ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿರದೆ ಇರುವುದು ಇಂಥ ಕಾರಣಗಳಿವೆ.
ಒಂದು ವೇಳೆ ನಿಮ್ಮ ಅಕೌಂಟ್ ಗೆ ಹಣ ಜಮೆ ಆಗಿದ್ಯಾ ಇಲ್ಲವ ಎನ್ನುವುದನ್ನು ಸ್ಟೇಟಸ್ ಚೆಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಂಬರ್ ಹಾಕಿ, ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ ಎಂದು ಚೆಕ್ ಮಾಡಬಹುದು. ಒಂದು ವೇಳೆ ನಿಮಗೆ PAV not yet received ಎಂದು ಬಂದರೆ ಚಿಂತೆ ಮಾಡಬೇಡಿ.
PAV ಎಂದರೆ Pay Adjustment Vocher ಎಂದು ಅರ್ಥ, ಈ ರೀತಿ ಬಂದಿದ್ದರೆ ನಿಮ್ಮ ಬ್ಯಾಂಕ್ ಖಾತೆಯ ವಿವರ ನಿಮ್ಮ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಹೆಸರು, ಎಷ್ಟು ಹಣ ಜಮೆ ಆಗಿದೆ ಎನ್ನುವ ಪೂರ್ತಿ ಮಾಹಿತಿಯನ್ನು ನೋಡಬಹುದು. ಈಯ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ ಎನ್ನುವುದರ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡುವುದು ಎಂದು ಈಗ ತಿಳಿಯೋಣ..
ಮೊದಲಿಗೆ ನೀವು ಆಹಾರ ಮತ್ತು ನಾಗರೀಕ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, https://ahara.kar.nic.in/lpg/ ಇದು ಅಧಿಕೃತ ಲಿಂಕ್ ಆಗಿದೆ.
ನಂತರ ನಿಮ್ಮ ಜಿಲ್ಲೆಯ ಹೆಸರಿನ ಲಿಂಕ್ ಕ್ಲಿಕ್ ಮಾಡಿ.
ಬಳಿಕ ಡಿಬಿಟಿ ಸ್ಟೇಟಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಬಳಿಕ ರೇಶನ್ ಕಾರ್ಡ್ ನಂಬರ್ ಹಾಕಿ, Go ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ, ಎಷ್ಟು ಹಣ ಅಕೌಂಟ್ ಗೆ ಬಂದಿದೆ ಎಂದು ಗೊತ್ತಾಗುತ್ತದೆ. ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಬಹುದು.