ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ರೇಷನ್ ವಿತರಣೆ ಮಾಡುತ್ತಿತ್ತು ಅದರಲ್ಲಿ ಅಕ್ಕಿ ಗೋದಿ ರಾಗಿ ಸೇರಿದಂತೆ ವಿವಿಧ ದವಸ ದಾನ್ಯಗಳನ್ನು ವಿತರಣೆ ಮಾಡುತ್ತಿದ್ದ ಸರ್ಕಾರ ಬರು ಬರುತ್ತಾ ಕೆಲವೊಂದು ಬದಲಾವಣೆ ಮಾಡುತ್ತ ದವಸ ದಾನ್ಯಗಳನ್ನು ವಿತರಣೆ ಮಾಡುವುದು ಕಡಿಮೆ ಮಾಡಿ ಇದೀಗ ಕಳೆದ ಹಲವು ತಿಂಗಳಿಂದ ರೇಷನ್ ಅಕ್ಕಿ ಬದಲಿಗೆ ಹಣವನ್ನು ಪಾವತಿ ಮಾಡುತ್ತಿತ್ತು ಆದ್ರೆ ಇದೀಗ ಈ ಹಣ ಕೊಡುವುದನ್ನು ಕೂಡ ನಿಲ್ಲಿಸಲು ಮುಂದಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಹೌದು ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರಿಗೆ ನಗದು ಅಥವಾ ಅಕ್ಕಿ ಬದಲಿಗೆ ಬೇಳೆಕಾಳು, ಸಕ್ಕರೆ ಅಥವಾ ಖಾದ್ಯ ತೈಲವನ್ನು ವಿತರಿಸಲು ಸರ್ಕಾರ ಯೋಜಿಸಿದೆ ಎಂದು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಂಗಳವಾರ ಹೇಳಿದ್ದಾರೆ.
ಅನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ನೀಡಲಾಗುವುದು. ಇತ್ತೀಚಿನ ಸಮೀಕ್ಷೆಯ ಪ್ರಕಾರ, 93% ಬಿಪಿಎಲ್ ಕಾರ್ಡುದಾರರು ಬೇಳೆಕಾಳುಗಳು, ಸಕ್ಕರೆ ಮತ್ತು ಅಡುಗೆ ಎಣ್ಣೆಯನ್ನು ಬಯಸುತ್ತಾರೆ. ಹೀಗಾಗಿ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.
ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದ ಮುನಿಯಪ್ಪ, ಬಡವರಿಗೆ ವಿತರಿಸಲು ರಾಜ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿಯನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು. “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ, ಕೇಂದ್ರವು ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ನೀಡುತ್ತದೆ. ರಾಜ್ಯ ಸರ್ಕಾರ ಅನ್ನಭಾಗ್ಯದಡಿ ಹೆಚ್ಚುವರಿ ಅಕ್ಕಿ ನೀಡಿದರೆ ಭಾಗ್ಯಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ’ ಎಂದರು. ಇನ್ನು ಮುಂದಿನ ದಿನಗಳಲ್ಲಿ ಈ ಅನ್ನಭಾಗ್ಯ ಯೋಜನೆಯಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಅನ್ನೋದನ್ನ ಜನ ಸಾಮಾನ್ಯರು ಕಾದು ನೋಡಬೇಕಾಗಿದೆ.