Anganwadi Jobs 2024 Davanagere District: ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ದಾವಣಗೆರೆ ಜಿಲ್ಲೆಯಲ್ಲಿದೆ ಉದ್ಯೋಗಾವಕಾಶ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ದಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ ಆಗಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಆಸಕ್ತರು ಅರ್ಜಿಹಾಕಿ ಈ ಹುದ್ದೆಯ ಸದುಪಯೋಗ ಪಡೆದುಕೊಳ್ಳಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಪ್ರತಿದಿನ ಜಾಬ್ ನ್ಯೂಸ್ ಸೇರಿದಂತೆ ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.

ಹುದ್ದೆಗಳ ವಿವರ ಹೀಗಿದೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
ಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆಹಾಗೂ ಸಹಾಯಕಿಯರು
ಹುದ್ದೆಗಳ ಸಂಖ್ಯೆ : 237
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್

ಹುದ್ದೆಗಳ ಸಂಖ್ಯೆ:
ಅಂಗನವಾಡಿ ಕಾರ್ಯಕರ್ತೆಯರು-34
ಮಿನಿ ಅಂಗನವಾಡಿ ಕಾರ್ಯಕರ್ತೆ-4
ಅಂಗನವಾಡಿ ಸಹಾಯಕಿಯರ ಹುದ್ದೆ-198
ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ: http://karnemakaone.kar.nic.in/abcd/
ಅರ್ಜಿಸಲ್ಲಿಸುವ ದಿನಾಂಕ: ಈಗಾಗಲೇ ಅರ್ಜಿಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ
ಅರ್ಜಿಸಲ್ಲಿಸುವ ಕೊನೆಯ ದಿನಾಂಕ: ಸೆಪ್ಟೆಂಬರ್ 9 ಕೊನೆಯ ದಿನವಾಗಿದೆ

ಹೆಚ್ಚಿನ ಮಾಹಿತಿಗಾಗಿ:
ದಾವಣಗೆರೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ 08192-263219,
ಹರಿಹರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ 08192-241431,
ಜಗಳೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ 08196-227132,
ಹೊನ್ನಾಳಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ 08188-251283,
ಚನ್ನಗಿರಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ 08189-228010 ಸಂಪರ್ಕಿಸಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!