ರಾಜಕುಮಾರ್ ಅವರ ಮೂವರು ಮಕ್ಕಳಲ್ಲಿ ಶಿವಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೊ ಎಂದೆ ಖ್ಯಾತಿ ಪಡೆದಿದ್ದಾರೆ. ಶಿವಣ್ಣ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ರಾಜಕುಮಾರ್ ಫ್ಯಾಮಿಲಿಗೆ ಇತ್ತೀಚಿಗೆ ಅಪ್ಪು ಅವರನ್ನು ಕಳೆದುಕೊಂಡು ಒಂದು ಕೈ ಕಳೆದುಕೊಂಡಂತೆ ಆಗಿದೆ ಇದೀಗ ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಚೇತರಿಸಿಕೊಂಡಿದ್ದಾರೆ. ಹಾಗಾದರೆ ಶಿವಣ್ಣ ಅವರ ಆರೋಗ್ಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಶಿವಣ್ಣನ ಆರೋಗ್ಯದಲ್ಲಿ ಏರುಪೇರು ಕಂಡುಬಂದಿರುವುದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು ನಂತರ ಶಕ್ತಿಧಾಮಕ್ಕೆ ವಾಪಸಾಗಿದ್ದಾರೆ. ಶಿವಣ್ಣ ಅವರು ಕೆಲವು ದಿನಗಳಿಂದ ವೇದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಜೊತೆಗೆ ಖಾಸಗಿ ವಾಹಿನಿಯೊಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಮೈಸೂರಿನಲ್ಲಿರುವ ಶಕ್ತಿಧಾಮದ ಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪುನೀತ್ ಅವರು ಶಕ್ತಿಧಾಮವನ್ನು ನೋಡಿಕೊಳ್ಳುತ್ತಿದ್ದರು ಆದರೆ ಪುನೀತ್ ಅವರು ಇಲ್ಲದ ಕಾರಣ ಶಿವಣ್ಣ ಅವರು ಅದರ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಶಿವಣ್ಣ ಅವರು ಕೆಲಸದ ಕಾರಣದಿಂದ ಮೈಸೂರು, ಬೆಂಗಳೂರು ಶೂಟಿಂಗ್ ಸೆಟ್ ಹೀಗೆ ಹಲವು ಕಡೆ ಓಡಾಡುತ್ತಿದ್ದರು. ಈ ಕಾರಣಕ್ಕಾಗಿ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಕಂಡುಬಂದಿತು. ಶಿವಣ್ಣ ಅವರಿಗೆ ಜ್ವರ, ಮೈಕೈನೋವು ಕಾಣಿಸಿಕೊಂಡಿತು. ಮೈಕೈ ನೋವು ಕಾಣಿಸಿಕೊಂಡಾಗ ನಿರ್ಲಕ್ಷ ಮಾಡುವ ಹಾಗಿಲ್ಲ ಆದ್ದರಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಭೇಟಿ ನೀಡಿ ಹೃದಯದ ಪರೀಕ್ಷೆ ಮಾಡಲಾಯಿತು ವೈದ್ಯರು ಯಾವುದೆ ಸಮಸ್ಯೆ ಇಲ್ಲ ಎಂದು ಹೇಳಿದ ನಂತರ ಶಿವಣ್ಣ ಅವರು ಶಕ್ತಿಧಾಮಕ್ಕೆ ವಾಪಸ್ ಬಂದರು. ಈಗ ಅವರ ಆರೋಗ್ಯದಲ್ಲಿ ಯಾವುದೆ ಸಮಸ್ಯೆ ಇಲ್ಲ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ಇದರಿಂದ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನವಾಯಿತು. ನಿಜಕ್ಕೂ ಭಯವಾಗುತ್ತದೆ ಇತ್ತೀಚಿಗೆ ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ.

ರಾಜಕುಮಾರ್ ಅವರ ಕುಟುಂಬದವರ ಹೆಲ್ತ್ ಹಿಸ್ಟರಿ ಬಗ್ಗೆ ಬಹಳ ಜನರಿಗೆ ಗೊತ್ತಿದೆ. ಶಿವಣ್ಣ ಅವರಿಗೆ 2015 ರಲ್ಲಿ ಲಘು ಹೃದಯಾಘಾತ ಆಗಿದ್ದು ಸರ್ಜರಿ ಮಾಡಲಾಗಿದೆ ಈ ಕಾರಣಕ್ಕೆ ಆತಂಕ ಕಂಡುಬರುತ್ತದೆ. ಶಿವಣ್ಣ ಅವರ ಕುಟುಂಬದ ಸದಸ್ಯರಿಗೆ ಸಹಜವಾಗಿ ಆತಂಕವಾಗಿತ್ತು ಏಕೆಂದರೆ ಶಿವಣ್ಣ ಅವರ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆವಹಿಸಬೇಕಾಗಿದೆ. ಹಾಗೆಯೆ ಶಿವಣ್ಣ ಅವರು ಕೂಡ ಸಮಸ್ಯೆ ಕಂಡು ಬಂದ ತಕ್ಷಣ ಆಸ್ಪತ್ರೆಗೆ ಹೋದರು. ಪುನೀತ್ ಅವರು ತಕ್ಷಣ ಎಚ್ಚರಿಕೆ ವಹಿಸಿದರೆ ಉಳಿಯುತ್ತಿದ್ದರೊ ಏನೊ ಎನ್ನುವ ಪ್ರಶ್ನೆ ಈಗಲೂ ಅಭಿಮಾನಿಗಳಲ್ಲಿ ಇದೆ ಹಾಗೆಯೆ ಪುನೀತ್ ಅವರಿಂದ ಬಹುಶಃ ಬಹಳಷ್ಟು ಜನರು ಪಾಠ ಕಲಿತಿದ್ದಾರೆ ಎನ್ನಬಹುದು.

ಶಿವಣ್ಣ ಅವರು ಈಗಲೂ ಎನರ್ಜಿಟಿಕ್ ಹೀರೊ ಅನೇಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿ ಬಳಗವನ್ನು ಹೊಂದಿದ್ದು ಖಾಸಗಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಜನರ ಮುಂದೆ ಬಂದಿದ್ದಾರೆ. ಶಿವಣ್ಣ ಅವರ ಹೆಂಡತಿ ಗೀತಾ, ಮಕ್ಕಳು ನಿರೂಪಮಾ ಹಾಗೂ ನಿವೇದಿತಾ ಅವರು ಶಿವಣ್ಣ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಶಿವಣ್ಣ ಅವರು ನೂರುಕಾಲ ಸುಖವಾಗಿ ಬಾಳಲಿ ಜನರಿಗೆ ಹೆಚ್ಚಿನ ಮನೋರಂಜನೆ ಹಾಗೂ ಅವರಿಂದ ಒಳ್ಳೆಯ ಕೆಲಸಗಳಾಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!