ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ ಜನಪ್ರಿಯತೆಯನ್ನು ಗಳಿಸಿದ ಕೆಲವೆ ಕೆಲವು ಜೋಡಿಗಳಲ್ಲಿ ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ನಟಿಸಿದ ಚಂದನ್ ಹಾಗೂ ಕವಿತಾ ಗೌಡ ಅವರ ಜೋಡಿಯು ಜನಪ್ರಿಯ ಜೋಡಿಯಾಗಿದೆ. ಇದೆ ಜೋಡಿ ನಿಜವಾದ ಜೀವನದಲ್ಲಿಯೂ ಮದುವೆಯಾಗಿ ಒಂದು ವರ್ಷದೊಳಗೆ ಹೊಸ ಮನೆಯನ್ನು ಕಟ್ಟಿ ಗೃಹಪ್ರವೇಶವನ್ನು ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಹಾಗೂ ಕವಿತಾ ಗೌಡ ಜೋಡಿ ಜನರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದಿತ್ತು ಹಾಗೆಯೆ ಇವರಿಬ್ಬರೂ ನಿಜ ಜೀವನದಲ್ಲಿಯೂ ಕಳೆದ ವರ್ಷ ಮೇ ತಿಂಗಳಿನಲ್ಲಿ ಎರಡು ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾದರು. ಇವರು ಮದುವೆಯಾಗಿ ಒಂದು ವರ್ಷದೊಳಗೆ ಹೊಸ ಮನೆಯನ್ನು ಖರೀದಿಸಿ ಗೃಹ ಪ್ರವೇಶವನ್ನು ಮಾಡಿದ್ದಾರೆ. ಚಂದನ್ ಹಾಗೂ ಕವಿತಾ ಅವರ ಮನೆ ಗೃಹ ಪ್ರವೇಶಕ್ಕೆ ಕುಟುಂಬದವರು, ಸ್ನೇಹಿತರು ಭಾಗಿಯಾಗಿದ್ದರು.
ಚಂದನ್ ಹಾಗೂ ಕವಿತಾ ಅವರು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ, ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದರಂತೆ ತಮ್ಮ ಹೊಸ ಮನೆಯ ಗೃಹ ಪ್ರವೇಶದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಧಾಕಲ್ಯಾಣ, ಲಕ್ಷ್ಮೀಬಾರಮ್ಮ, ಸರ್ವ ಮಂಗಳ ಮಾಂಗಲ್ಯೆ ಧಾರವಾಹಿಗಳಲ್ಲಿ ಹಾಗೂ ರವಿಚಂದ್ರನ್ ಅವರ ಸಿನಿಮಾದಲ್ಲಿಯೂ ನಟಿಸಿದ ಚಂದನ್ ಅವರು ಫೆಬ್ರವರಿ ತಿಂಗಳಿನಲ್ಲಿ ಹೊಸ ಮನೆಯನ್ನು ಖರೀದಿಸಿ ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಚಂದನ್ ಅವರು ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಖರೀದಿ ಮಾಡಿದ್ದೇನೆ ಎಂದು ಕ್ಯಾಪ್ಷನ್ ಇಟ್ಟಿದ್ದರು. ಮನೆಯೂ ಚಂದನ್ ಹಾಗೂ ಕವಿತಾ ಅವರ ಅಭಿರುಚಿಗೆ ತಕ್ಕಂತೆ ಇದ್ದು ಐಷಾರಾಮಿಯಾಗಿದೆ. ಚಂದನ್ ಅವರು ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ಅವರ ಒಡೆತನದಲ್ಲಿ ಹೋಟೆಲ್ ಕೂಡ ನಡೆಯುತ್ತಿದೆ. ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೆಲವು ತಿಂಗಳು ಮಾತ್ರ ನಟಿಸಿ ಹೊರಬಂದು ಬೇರೆಬೇರೆ ಧಾರವಾಹಿಗಳಲ್ಲಿ ಬ್ಯೂಸಿಯಾದರು.
ಕವಿತಾ ಅವರು ಕೆಲವು ವರ್ಷಗಳ ಕಾಲ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ ನಂತರ ಹೊರಬಂದು ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ನಟಿಸಿದರು. ಚಂದನ್ ಹಾಗೂ ಕವಿತಾ ಅವರ ನಡುವಿನ ಸ್ನೇಹ ಪ್ರೀತಿಯಾಗಿ ಬೆಳೆದು ಮನೆಯವರ ಒಪ್ಪಿಗೆಯೊಂದಿಗೆ ವಿವಾಹವಾಯಿತು. ಚಂದನ್ ಹಾಗೂ ಕವಿತಾ ಕಷ್ಟಪಟ್ಟು ದುಡಿದ ಹಣದಲ್ಲಿ ಮನೆಯನ್ನು ಖರೀದಿಸಿ ಗೃಹಪ್ರವೇಶವನ್ನು ಅದ್ದೂರಿಯಾಗಿ ನಡೆಸಿದರು. ಈ ಮೂಲಕ ಚಂದನ್ ಹಾಗೂ ಕವಿತಾ ಅವರಿಗೆ ಶುಭಾಶಯ ತಿಳಿಸೋಣ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.