ತನ್ನನ್ನು ದೊಡ್ಡ ಸ್ಟಾರ್ ಮಾಡಿದ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದು ಯೋಚನೆ ಮಾಡುತ್ತಾರೆ ಆದರೆ ಎಲ್ಲರೂ ಈ ರೀತಿ ಯೋಚನೆ ಮಾಡುವುದಿಲ್ಲ. ಆದರೆ ಇಲ್ಲಿ ಒಬ್ಬ ನಟ ತನ್ನಲ್ಲಿರುವ ಎಪ್ಪತ್ತು ಕೋಟಿ ಬೆಲೆಬಾಳುವ ಮನೆಯನ್ನು ಅನಾಥ ಮಕ್ಕಳಿಗಾಗಿ ಬರೆದುಕೊಟ್ಟು ಇಡೀ ಚಿತ್ರರಂಗವೇ ಬಾಯಿಬಿಟ್ಟು ನೋಡಿಕೊಳ್ಳುವಂತೆ ಮಾಡಿದ್ದಾರೆ. ಇಷ್ಟಕ್ಕೂ ಈ ನಟ ಯಾರು ಯಾವ ಕಾರಣಕ್ಕಾಗಿ ಅಷ್ಟು ಬೆಲೆಬಾಳುವ ಮನೆಯನ್ನು ಅನಾಥ ಮಕ್ಕಳಿಗಾಗಿ ಕೊಟ್ಟಿದ್ದಾರೆ ಎನ್ನುವುದನ್ನು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳೋಣ.
ತನ್ನ ಬಳಿ ಇರುವ ಎಪ್ಪತ್ತು ಕೋಟಿ ಬೆಲೆಬಾಳುವ ಮನೆಯನ್ನು ಅನಾಥ ಮಕ್ಕಳಿಗಾಗಿ ಬರೆದುಕೊಟ್ಟ ಖ್ಯಾತ ನಟ ಬೇರೆ ಯಾರು ಅಲ್ಲ ತೆಲುಗು ಚಿತ್ರರಂಗದ ಖ್ಯಾತ ನಟ ಸೂರ್ಯ. ಇವರ ತಂದೆಯು ಕೂಡ ಒಬ್ಬ ನಟನಾಗಿದ್ದರು. ತನ್ನ ತಂದೆ ಒಬ್ಬ ನಟನಾಗಿ ಪ್ರಸಿದ್ಧಿ ಹೊಂದಿದ್ದರು ಕೂಡ ಸೂರ್ಯ ಅವರ ಆರಂಭದ ದಿನಗಳಲ್ಲಿ ಒಂದು ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ 720 ರೂಪಾಯಿ ಗೆ ಕೆಲಸವನ್ನು ಮಾಡಿದ್ದರು. ಈಗ ತೆಲುಗು ಚಿತ್ರರಂಗದಲ್ಲಿ ಟಾಪ್ ನಟ ಆಗಿರುವ ಸೂರ್ಯ ಅವರು ತನ್ನ ಅಭಿಮಾನಿಗಳಿಗೆ ತುಂಬಾ ಗೌರವ ನೀಡುತ್ತಾರೆ. ಇತ್ತೀಚಿಗೆ ತನ್ನ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಬೇಡಿ ಎಂದು ಬೇಡಿಕೊಂಡರು. ಸೂರ್ಯ ಮತ್ತು ಅವರ ತಮ್ಮ ಕಾರ್ತಿ ಇಬ್ಬರು ಮದುವೆಯಾದ ನಂತರವೂ ಕೂಡ ಪೋಷಕರ ಜೊತೆ ಒಟ್ಟಿಗೆ ಒಂದೇ ಮನೆಯಲ್ಲಿ ಇದ್ದಾರೆ. ಒಂದೇ ನಗರದಲ್ಲಿದ್ದು ಬೇರೆ ಬೇರೆ ಮನೆಗಳಲ್ಲಿ ವಾಸಿಸುವುದು ಇವರಿಗೆ ಇಷ್ಟವಿಲ್ಲ. ಜೀವನಪೂರ್ತಿ ಒಂದೇ ಮನೆಯಲ್ಲಿ ತಂದೆ-ತಾಯಿ ಇಬ್ಬರ ಜೊತೆ ವಾಸಿಸಲು ಇಷ್ಟಪಡುತ್ತಾರೆ.
ನಟ ಸೂರ್ಯ ಚೆನ್ನೈನ ಪ್ರತಿಷ್ಠಿತ ಏರಿಯಾ ಒಂದರಲ್ಲಿ ತುಂಬು ಕುಟುಂಬದ ಜೊತೆ ವಾಸವಿದ್ದರು. ಆದರೆ ಮುಂದೆ ಇವರ ಕುಟುಂಬ ಬೆಳೆಯುತ್ತಾ ಹೋದಂತೆ ಇವರ ಅವಿಭಕ್ತ ಕುಟುಂಬಕ್ಕೆ ಆ ಮನೇ ಸರಿ ಹೋಗಲಿಲ್ಲ. ಹಾಗಾಗಿ ಇವರ ಕುಟುಂಬಕ್ಕೆ ಸರಿ ಹೋಗುವ ಇನ್ನೊಂದು ಹೊಸ ಮನೆಯನ್ನು ಕಟ್ಟಿಸಿ ಈಗ ಎಲ್ಲರೂ ಅದೇ ಮನೆಯಲ್ಲಿ ವಾಸ ಮಾಡುತ್ತಾ ಇದ್ದಾರೆ. ಇದರ ಮಧ್ಯೆ ಹಳೆಯ ಮನೆಯನ್ನು ಮಾರಾಟ ಮಾಡಲು ಇಷ್ಟ ಪಡದೆ 70 ಕೋಟಿ ಬೆಲೆ ಬಾಳುವ ತಮ್ಮ ಹಳೆಯ ಮನೆಯನ್ನು ಅನಾಥ ಮಕ್ಕಳಿಗೆ ಬರೆದುಕೊಟ್ಟಿದ್ದಾರೆ. ಮಾನವೀಯ ಮೌಲ್ಯಗಳನ್ನು ಮರೆತು ಹಣದ ಹಿಂದೆ ಓಡುವ ಜನರ ಮಧ್ಯೆ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವ ನಟ ಸೂರ್ಯ ಅವರನ್ನ ಎಲ್ಲರೂ ಮೆಚ್ಚಲೇಬೇಕು. ಕಷ್ಟದಲ್ಲಿ ಇರುವವರ ಸಹಾಯಕ್ಕೆ ಸದಾಕಾಲ ಬರುವ ಸೂರ್ಯ ಅವರು ಸಾಕಷ್ಟು ಅನಾಥ ಮಕ್ಕಳನ್ನು ಸಾಕುತ್ತಾ ಇದ್ದಾರೆ. 70 ಕೋಟಿ ಬೆಲೆ ಬಾಳುವ ಮನೆಯನ್ನು ಬೇರೆ ಯಾರಿಗೋ ಬಿಟ್ಟು ಕೊಡುವುದು ಸುಲಭ ಏನೂ ಅಲ್ಲ. ಯಾರೂ ಇಲ್ಲದ ಅನಾಥ ಮಕ್ಕಳಿಗಾಗಿ ತಾನಿದ್ದೇನೆ ಎಂದು ಅವರ ಜೊತೆಯಾಗಿ ನಿಂತಿದ್ದಾರೆ ಸೂರ್ಯ.