ಬಾಲ ಜ್ಯೋತಿಷಿ ಅಭಿಗ್ಯ ಅನಂದ್ ಕರೋನವನ್ನು ತಡೆಗಟ್ಟುವುದಕ್ಕೆ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದಾರೆ ಅವುಗಳನ್ನು ನೀವು ಅನುಸರಿಸಿದಲ್ಲಿ ಕರೋನ ಬರುವುದನ್ನು ತಡೆಗಟ್ಟಬಹುದು. ಕರೋನಾ ಕುರಿತಾಗಿ ಭವಿಷ್ಯವನ್ನು ನುಡಿದಿದ್ದ ಅಭಿಗ್ಯ ಈಗ ಹೇಗೆ ಕರೋನವನ್ನು ತಡೆಗಟ್ಟಬಹುದು ಎಂಬ ಟಿಪ್ಸ್ ಗಳನ್ನು ನೀಡಿದ್ದಾರೆ. ಆ ಟಿಪ್ಸ್ ಗಳಲ್ಲಿ ಏನಿದೆ ಎಂಬುದನ್ನು ನಾವಿಂದು ನೋಡೋಣ.
ಮೊದಲನೆಯದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅದು ಹೇಗೆಂದರೆ ಕೆಮಿಕಲ್ ಸೋಪುಗಳನ್ನು ಬಳಸಬೇಡಿ ಅದರ ಬದಲು ನಿಂಬೆಹಣ್ಣಿನ ರಸವನ್ನು ತೆಗೆದ ನಂತರ ಉಳಿಯುವ ಸಿಪ್ಪೆಗೆ ಸ್ವಲ್ಪ ಅರಿಶಿಣ ಬೆರೆಸಿ ನಿಮ್ಮ ಕೈ ತೋಳೆಯುವುದಕ್ಕೆ ಬಳಸಬೇಕು. ಪ್ರತಿದಿನ ಅಲೋವೆರಾ ಸೇವನೆ ಮಾಡುವುದು ಒಳ್ಳೆಯದು. ಬೇವಿನ ರಸವನ್ನು ಸೇವನೆ ಮಾಡಿ ಅರಿಶಿನ ಶುಂಠಿ ನಿಮ್ಮ ದೇಹಕ್ಕೆ ಅವಶ್ಯವಾಗಿ ಸೇವನೆ ಮಾಡಲೇಬೇಕಾಗಿರುವದ್ದು. ತೆಂಗಿನ ಎಣ್ಣೆಯನ್ನು ಬಳಸಿ ಎಣ್ಣೆಯನ್ನು ಬಳಸುವುದರಿಂದ ಕಿವಿಗೆ ಗಾಳಿ ಹೋಗುವುದು ಬ್ಲಾಕ್ ಆಗುತ್ತದೆ ಆದ್ದರಿಂದ ಎಣ್ಣೆ ಬಳಸುವುದು ಒಳ್ಳೆಯದು.
ಇನ್ನು ಅತಿಮುಖ್ಯವಾಗಿ ಫ್ರಿಜ್ ನಲ್ಲಿ ಇಟ್ಟಂತಹ ಅಡುಗೆಗಳನ್ನು ಮತ್ತೆ ಬಳಸಬೇಡಿ ಮೈಕ್ರೋ ವೆವ್ ಮಾಡಿ ನಂತರ ಅಡುಗೆಯನ್ನು ತಿನ್ನಬೇಡಿ. ರಿಫೈಂಡ್ ಎಣ್ಣೆಗಳ ಬಳಕೆಯನ್ನು ಕಡಿಮೆ ಮಾಡಬೇಕು ಸಕ್ಕರೆ ಬದಲು ಬೆಲ್ಲವನ್ನು ಬಳಸಿ. ದೂಳಿನಿಂದ ದೇಹವನ್ನ ದೂರವಿಡಬೇಕು ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಾಲಿನ್ಯ ಹೆಚ್ಚಾಗಿರುತ್ತದೆ ಅಂತಹ ಧೂಳಿನಿಂದ ದೂರವಿರಿ ನಿಮ್ಮ ಗಂಟಲಿನಲ್ಲಿ ತಂಡಿ ಆಗುವುದಕ್ಕೆ ಬಿಡಬೇಡಿ.
ಬೆಚ್ಚನೆಯ ಪದಾರ್ಥಗಳನ್ನು ಸೇವಿಸಿ. ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ ವಿಟಮಿನ್-ಸಿ ನಮ್ಮ ದೇಹಕ್ಕೆ ಹೋಗಬೇಕು ಅದರಿಂದ ನೆಲ್ಲಿಕಾಯಿ ಸೇವನೆ ಮಾಡುವುದು ಅತಿ ಉತ್ತಮ. ವಿಶೇಷವಾಗಿ ಮಕ್ಕಳು ಮೊಬೈಲ್ ಬಳಕೆಯಿಂದ ಕಡಿಮೆ ಮಾಡಬೇಕು ಇದರಿಂದ ಪರಿಸರಕ್ಕೂ ತೊಂದರೆ ಆಗುತ್ತದೆ ಇದರ ಬದಲಾಗಿ ಗಿಡಗಳನ್ನು ನೆಟ್ಟು ಪರಿಸರದೊಂದಿಗೆ ಸ್ನೇಹ ಬೆಳೆಸಿ ಭೂಮಿ ಮತ್ತು ಮಣ್ಣಿಗೆ ಹತ್ತಿರದಲ್ಲಿದ್ದು ಕೆಲಸವನ್ನು ಮಾಡಿ ಭೂಮಿಯಲ್ಲಿ ಹಲವಾರು ಆಂಟಿ ಬ್ಯಾಕ್ಟೀರಿಯಾ ಗುಣಗಳಿವೆ ಅವು ನಿಮ್ಮ ಕೈಗೆ ಸೇರುವುದರಿಂದ ದೇಹಕ್ಕೆ ಒಳ್ಳೆಯದಾಗುತ್ತದೆ.
ಇನ್ನು ಆದಷ್ಟು ಅರಿಶಿಣ ಪುಡಿಯನ್ನು ಮನೆಯಲ್ಲಿಯೇ ಮಾಡಿ ಅದಕ್ಕೆ ಅಲೋವೆರಾ ಬೇವು ಮತ್ತು ಅಮೃತಬಳ್ಳಿಯನ್ನು ಸೇರಿಸಿ ಈ ನಾಲ್ಕಕ್ಕೆ ಜೇನು ತುಪ್ಪವನ್ನು ಸೇರಿಸಿ ಅದನ್ನು ಸೇವನೆ ಮಾಡಬೇಕು. ಹಾಗೆ ಗೋ ಮೂತ್ರ ಅಥವಾ ಗಂಜಲ ಎಂದು ಹೇಳುತ್ತವೆ ಇದರ ಬಳಕೆ ಮಾಡಿ ಇದು ದೇಹಕ್ಕೆ ಒಳ್ಳೆಯದು.ಸೂರ್ಯೋದಯಕ್ಕಿಂತ ತೊಂಬತ್ತು ನಿಮಿಷ ಮೊದಲು ಎದ್ದೆಳಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಗಾಳಿ ಶುದ್ಧವಾಗಿರುತ್ತದೆ.
ಪ್ರಾಣಾ ಯಾಮ ಮಾಡುವುದರಿಂದ ಲಂಕ್ಸ್ ಗೆ ಆಮ್ಲಜನಕ ಚೆನ್ನಾಗಿ ಪೂರೈಕೆ ಆಗುತ್ತದೆ. ಮತ್ತು ನೀವು ಸ್ನಾನ ಮಾಡುವ ನೀರು ಹೆಚ್ಚು ಬಿಸಿಯಾಗಿರಬಾರದು. ಸ್ನಾನದ ನೀರಿಗೆ ಬೇವನ್ನು ಬೆರೆಸಿ ಸ್ನಾನ ಮಾಡುವುದರಿಂದ ದೇಹಕ್ಕೆ ಒಳ್ಳೆಯದು. ಯೋಗಾಸನ ಸೂರ್ಯ ನಮಸ್ಕಾರವನ್ನು ತಪ್ಪದೆ ಮಾಡಿ ಒಂದು ಗಂಟೆಗಳ ಕಾಲ ಸೂರ್ಯನ ಬಿಸಿಲನ್ನು ನಿಮ್ಮ ದೇಹಕ್ಕೆ ಕೊಡಿ ಎಳೆಯ ಬಿಸಿಲಿನಲ್ಲಿ ವಿಟಮಿನ್ ಡಿ ಇರುತ್ತದೆ. ಅದನ್ನ ನಿಮ್ಮ ದೇಹ ಸೇವಿಸಬೇಕು ಶುಂಠಿ ಬೆಳ್ಳುಳ್ಳಿಯನ್ನು ಸೇವಿಸಬೇಕು.
ರಾಸಾಯನಿಕ ಬಳಸಿ ಮಾಡಿರುವ ಸೊಳ್ಳೆ ಬತ್ತಿಗಳನ್ನು ಬಳಸಬೇಡಿ ಸೊಳ್ಳೆ ಕಾಟ ಹೆಚ್ಚಿದ್ದರೆ ಧೂಪವನ್ನು ಬಳಸಿ. ಇನ್ನು ಯಾವ ದೇವರ ಮಂತ್ರ ಫಟನೆ ಒಳ್ಳೆಯದು ಎಂದು ನೋಡುವುದಾದರೆ ಗರುಡ ದಂಡಕ ಶ್ರೀ ನರಸಿಂಹ ಕವಚ ಆದಿತ್ಯ ಹೃದಯ ವಿಷ್ಣು ಸಹಸ್ರ ನಾಮ ಈ ಸ್ತೋತ್ರಗಳ ಪಠಣ ಮಾಡುವುದು ಒಳ್ಳೆಯದು. ಈ ರೀತಿಯಾಗಿ ಬಾಲ ಜ್ಯೋತಿಷಿ ಅಭಿಜ್ಞಾ ಆನಂದ್ ಕರೋನಾದಿಂದ ದೂರ ಇರುವುದಕ್ಕಾಗಿ ಜನರಿಗೆ ಒಂದಿಷ್ಟು ಉಪಯೋಗವಾಗುವಂತಹ ಮಾಹಿತಿಯನ್ನು ತಿಳಿಸಿದ್ದಾರೆ ಇವುಗಳನ್ನು ನೀವು ಕೂಡ ಪಾಲಿಸಿ ಮತ್ತು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ. video credit for Karnataka tv