ಮತ್ತೊಂದು ವೇಗವಾಗಿ ಹರಡುವ ಹೊಸ ವೈರಸ್ ಪತ್ತೆ, ನಿರ್ಲಕ್ಷ್ಯ ಬೇಡ ಎಚ್ಚರಿಕೆ ವಹಿಸಿ

0 0

ಇಂಗ್ಲೆಂಡ್​ನಲ್ಲಿ ಹೊಸ ಪ್ರಭೇದದ ಕೊರೊನಾ ಪತ್ತೆಯಾಗಿದೆ. ಕೊರೊನಾಗಿಂತಲೂ ಹೊಸ ವೈರಾಣು ಬಹು ಬೇಗನೇ ಹರಡುತ್ತೆ. ಬ್ರಿಟನ್​ನಿಂದ ರಾಜ್ಯಕ್ಕೆ 138 ಪ್ರಯಾಣಿಕರು ಕೊರೊನಾ ನೆಗೆಟಿವ್​ ರಿಪೋರ್ಟ್ ಇಲ್ಲದೆ ಬಂದಿದ್ದಾರೆ. ಇವರನ್ನು ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗುತ್ತೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕೇಂದ್ರ ಸರ್ಕಾರವೂ ವಿಶೇಷ ನಿಗಾ ಇಡುವಂತೆ ಸೂಚಿಸಿದೆ ಎಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್​ ಹೇಳಿದರು. ಇಂಗ್ಲೆಂಡ್​ನಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾಗಿದೆ. ಕೊರೋನಾಗಿಂತಲೂ ಹೊಸ ವೈರಾಣು ಬಹು ಬೇಗನೇ ಹರಡುತ್ತೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್​ ಹೇಳಿದ್ದಾರೆ.

ಬ್ರಿಟನ್​ನಲ್ಲಿ ಕರೋನ ಪ್ರಭೇದದ ವೈರಾಣು ಪತ್ತೆಯಾಗಿರು ಬಗ್ಗೆ ಮುಂಜಾಗ್ರತಾ ಕ್ರಮವಹಿಸುವ  ಬಗ್ಗೆ ತಿಳಿಸಲು ಸಚಿವ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹೊಸ ಪ್ರಭೇದದ ವೈರಾಣು ಪತ್ತೆಯಾದ ಕಾರಣಕ್ಕೆ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೊನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಎಲ್ಲರೂ ದಯವಿಟ್ಟು ಮಾಸ್ಕ್ ಧರಿಸಬೇಕೆಂದು ಸುಧಾಕರ್ ಮನವಿ ಮಾಡಿದರು. ಸರ್ಕಾರಕ್ಕೆ ಜನರ ರಕ್ಷಣೆಯೇ ಮುಖ್ಯ ಎಂದ ಸುಧಾಕರ್,​ ಕೊರೊನಾದ ಹೊಸ ಪ್ರಭೇದ ಬರುತ್ತಿರುವ ಹಿನ್ನೆಲೆ ಎಚ್ಚರಿಕೆ ಇರಲಿ. ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು. ವಿದೇಶದಿಂದ ಬಂದವರು RTPCR ಟೆಸ್ಟ್​ ಮಾಡಿಸಿಕೊಳ್ಳಬೇಕು. ಮೂರು ದೇಶಗಳಲ್ಲಿ ಹೊಸ ಪ್ರಬೇಧ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರು ಕ್ವಾರಂಟೈನ್​ಗೆ ಒಳಗಾಗಬೇಕು. ಶಾಲೆಗಳ ಆರಂಭದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಕೊರೊನಾ ಹೊಸ ಪ್ರಬೇಧದ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ರೋಗಲಕ್ಷಣದಲ್ಲಿ ಬದಲಾವಣೆ ಇಲ್ಲ, ತೀವ್ರತೆಯೂ ಇಲ್ಲ. ಕೊರೊನಾ ಹೊಸ ಪ್ರಬೇಧದಲ್ಲಿ ಹರಡುವಿಕೆ ಗುಣ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕೊರೊನಾ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಆದರೆ, ಕೊರೊನಾ ಹೊಸ ಪ್ರಬೇಧದ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸುಧಾಕರ್​ ಹೇಳಿದರು. ಇಂಗ್ಲೆಂಡ್ ನಲ್ಲಿ ಕೊರೊನಾ ರೂಪಾಂತರ ಪ್ರಭೇದ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶ ಪಾಲಿಸಲು ರಾಜ್ಯ ಸರ್ಕಾರ ಸಿದ್ಧ. ನಾಗರಿಕ ವಿಮಾನಯಾನ ಇಲಾಖೆಯಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಇಂಗ್ಲೆಂಡ್​ನಿಂದ ಭಾರತಕ್ಕೆ ಬರುವ ವಿಮಾನಗಳು ತಾತ್ಕಾಲಿಕವಾಗಿ ರದ್ದಾಗಿದೆ. ನಾಳೆಯಿಂದ ಡಿಸೆಂಬರ್ 31ರವರೆಗೆ ವಿಮಾನ ಹಾರಾಟ ಬಂದ್ ಆಗಿದೆ.ವಿದೇಶದಿಂದ ಬರೋರಿಗೆ 7 ದಿನ ಹೋಂ ಐಸೋಲೇಷನ್ ಕಡ್ಡಾಯದ ಜೊತೆಗೆ ಈಗಾಗಲೇ ಆಗಮಿಸುತ್ತಿರುವವರಿಗೆ ಕಡ್ಡಾಯವಾಗಿ ಏರ್‌ಪೋರ್ಟ್‌ಗಳಲ್ಲಿ RTPCR ಟೆಸ್ಟ್ ಮಾಡಿಸಬೇಕು. RTPCR ಟೆಸ್ಟ್​ನಲ್ಲಿ ಪಾಸಿಟಿವ್​ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್, ಐಸೋಲೇಷನ್ ಮಾಡಬೇಕು. ಇದಲ್ಲದೆ, ವಿದೇಶದಿಂದ ಬರೋರಿಗೆ 7 ದಿನ ಹೋಂ ಐಸೋಲೇಷನ್ ಕಡ್ಡಾಯ ಎಂದು ಸುಧಾಕರ್​ ಹೇಳಿದರು. ಏರ್‌ಪೋರ್ಟ್‌ಗಳಲ್ಲಿ ಟೆಸ್ಟ್‌ಗೆ ಸಿದ್ಧತೆ ಮಾಡಿಕೊಳ್ಳಲು ನಾಗರಿಕ ವಿಮಾನಯಾನ ಇಲಾಖೆಯಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಅಂತಾ ಹೇಳಿದರು. ಇದಕ್ಕೂ ಮುನ್ನ, ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸಚಿವ ಸುಧಾಕರ್ ಇಂಗ್ಲೆಂಡ್​ನಲ್ಲಿನ ಕೊರೊನಾ ರೂಪಾಂತರ ಪ್ರಬೇಧ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಭಾಗಿಯಾಗಿದ್ದರು.

ನಾಳೆ ರಾತ್ರಿಯಿಂದ ಬ್ರಿಟನ್ ವಿಮಾನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಡಿಸೆಂಬರ್ 31ರವರೆಗೆ ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಭಾರತ ಮಾತ್ರವಲ್ಲದೆ 30 ದೇಶಗಳು ಬ್ರಿಟನ್​ಗೆ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ. ನಾಳೆಯೊಳಗೆ ಬ್ರಿಟನ್​ನಿಂದ ಬರುವವರು ಕಡ್ಡಾಯವಾಗಿ RTPCR​ ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.ಬ್ರಿಟನ್​ನಲ್ಲಿ ಹೊಸ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಿಂದಾಗಿ ಈ ಕ್ರಮ ಜರುಗಿಸಲಾಗಿದೆ. ಬ್ರಿಟನ್ ನಲ್ಲಿ ಕೊರೊನಾ ವೈರಸ್​ ಎರಡನೇ ಅಲೆಯ ಭೀತಿ ಎದುರಾಗಿದೆ. ರೂಪಾಂತರಗೊಂಡಿರುವ ಕೊರೊನಾ ವೈರಸ್​ ಸಾಕಷ್ಟು ಅಪಾಯಕಾರಿ ಎನ್ನುವ ವಾದವನ್ನು ತಜ್ಞರು ಮುಂದಿಡುತ್ತಿದ್ದಂತೆ ವಿಶ್ವದ ಷೇರು ಮಾರುಕಟ್ಟೆ ಇಳಿಕೆ ಹಾದಿ ಹಿಡಿದೆ. ಭಾರತದ ಷೇರು ಮಾರುಕಟ್ಟೆ ಕೂಡ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹೊಸ ಪ್ರಭೇದ ಪತ್ತೆ, ಭಾರತವೂ ಸೇರಿದಂತೆ 30 ದೇಶಗಳಿಂದ ವಿಮಾನಯಾನ ರದ್ದು ಮಾಡಲಾಗಿದೆ.

ಬ್ರಿಟನ್ನಿಂದದ ರಾಜ್ಯಕ್ಕೆ 138 ಪ್ರಯಾಣಿಕರು ಕೊರೊನಾ ನೆಗೆಟಿವ್​ ರಿಪೋರ್ಟ್ ಇಲ್ಲದೆ ಬಂದಿದ್ದಾರೆ. ಇವರನ್ನು ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕೇಂದ್ರ ಸರ್ಕಾರವೂ ವಿಶೇಷ ನಿಗಾ ಇಡುವಂತೆ ಸೂಚಿಸಿದೆ ಎಂದು ವಿವರಿಸಿದರು. ರೋಗಲಕ್ಷಣದಲ್ಲಿ ಬದಲಾವಣೆ ಇಲ್ಲ, ತೀವ್ರತೆಯೂ ಇಲ್ಲ. ಕೊರೋನಾ ಹೊಸ ಪ್ರಬೇಧದಲ್ಲಿ ಹರಡುವಿಕೆ ಗುಣ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕೊರೋನಾ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸುಧಾಕರ್​ ತಿಳಿಸಿದರು.

Leave A Reply

Your email address will not be published.