ಶನಿ ಮತ್ತು ಗುರುವಿನ ಜೋಡಿ ಮಕರ ರಾಶಿಯವರಿಗೆ ಈ ತಿಂಗಳು ಹೇಗಿರಲಿದೆ ಗೊತ್ತೇ

0 1

ಮಕರ ರಾಶಿ ಭವಿಷ್ಯ 2021 ರ ಮೂಲಕ ನಾವು ಮಕರ ರಾಶಿಚಕ್ರದ ಸ್ಥಳೀಯರಿಗಾಗಿ ವರ್ಷ 2021 ವಿಶೇಷವಾಗಿ ಏನು ತರಲಿದೆ ಎಂದು ತಿಳಿಯುತ್ತೇವೆ. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಮಕರ ರಾಶಿಚಕ್ರದ ಸ್ಥಳೀಯರು ಈ ವರ್ಷ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ರಾಶಿಯಲ್ಲಿ ಶನಿ ಮತ್ತು ಗುರುವಿನ ಜೋಡಿ ನಿಮಗೆ ಅದೃಷ್ಟದ ಬೆಂಬಲವನ್ನು ಒದಗಿಸುತ್ತದೆ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ನೀವು ನಿರಂತರವಾಗಿ ಮುಂದುವರಿಯುತ್ತಿರಿ ಆದರೆ ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಎಂದಿಗೂ ಇಳಿಸಬಾರದು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಜೀವನವನ್ನು ನೋಡಿದರೆ, ಈ ವರ್ಷ ಹಣಕಾಸಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗಲಿವೆ. ವರ್ಷದ ಆರಂಭವು ಎಷ್ಟು ಕಷ್ಟವಾಗಿರುತ್ತೋ , ವರ್ಷದ ಅಂತ್ಯವು ಆರ್ಥಿಕವಾಗಿ ಅಷ್ಟೇ ಉತ್ತಮವಾಗಿರಲಿದೆ. ವರ್ಷದ ಮಧ್ಯದಲ್ಲಿ ಹಣ ಗಳಿಸಲು ರಾಹುವು ನಿಮಗೆ ಅನೇಕ ಅವಕಾಶಗಳನ್ನು ನೀಡಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಈ ವರ್ಷ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ.

ಮಕರ ರಾಶಿ ಭವಿಷ್ಯ 2021 ರ ವರ್ಷ 2021 ಶಿಕ್ಷಣಕ್ಕೆ ಉತ್ತಮವೆಂದು ಕಾಣುತ್ತಿದೆ. ಈ ಸಮಯದಲ್ಲಿ ರಾಹುವು ವಿದ್ಯಾರ್ಥಿಗಳಿಗೆ ಅವರ ಹಿಂದಿನ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ. ಇದರಿಂದ ಅವರು ಪ್ರತಿಯೊಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ಸ್ಥಳೀಯರು ಸಹ ಈ ವರ್ಷ ಶುಭ ಸುದ್ಧಿಯನ್ನು ಪಡೆಯಬಹುದು. ಆದರೆ ಇದಕ್ಕಾಗಿ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸಿ ನಿರಂತರವಾಗಿ ಪ್ರಯತ್ನಿಸುವ ಅಗತ್ಯವಿದೆ. ಗ್ರಹಗಳ ಸ್ಥಾನದ ಕಾರಣದಿಂದಾಗಿ ಕುಟುಂಬ ಜೀವನದಲ್ಲಿ ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಆರಂಭದ ತಿಂಗಳುಗಳಲ್ಲಿ ಮಂಗಳ ಗ್ರಹವು ನಾಲ್ಕನೇ ಮನೆಯಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ, ಕುಟುಂಬ ಸಂತೋಷದ ಕೊರತೆಯನ್ನು ಅನುಭವಿಸುವಿರಿ, ಮತ್ತೊಂದೆಡೆ ನಿಧಾನವಾಗಿ ಸಮಯದೊಂದಿಗೆ ಪರಿಸ್ಥಿತಿಗಳು ಸುಧಾರಿಸುವುದನ್ನು ಸಹ ಕಾಣಲಾಗುತ್ತದೆ. ಮಂಗಳ ದೇವರು ಈ ವರ್ಷ ಕುಟುಂಬ ಜೀವನದಲ್ಲಿ ನಿಮಗೆ ಕಷ್ಟವನ್ನು ನೀಡುವ ಮಾಡಲಿದ್ದಾರೆ. ಆದರೆ ಗುರು ಗ್ರಹವೀಣೆ ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು.

ವಿವಾಹಿತರ ಬಗ್ಗೆ ಮಾತನಾಡಿದರೆ, ಈ ವರ್ಷ ಅವರು ಸ್ವಲ್ಪ ಕಡಿಮೆ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಶನಿ ದೇವರ ದೃಷ್ಟಿ ನಿಮಗೆ ಒತ್ತಡದೊಂದಿಗೆ ವಿವಾಹಿತ ಜೀವನದಲ್ಲಿ ಅನೇಕ ಸವಾಲುಗಳನ್ನು ನೀಡುವ ಕೆಲಸ ಮಾಡಲಿದ್ದಾರೆ. ಇದರೊಂದಿಗೆ ಕೆಂಪು ಗ್ರಹ ಮಂಗಳನ ಸಂಚಾರವು ಏಳನೇ ಮನೆಯಲ್ಲಿರುವುದರಿಂದ ಸಂಗಗತಿಯೊಂದಿಗೆ ನಿಮ್ಮ ವಿವಾದದ ಸಾಧ್ಯತೆ ಇದೆ. ಆದರೆ ಮಕ್ಕಳ ಬದಿಗೆ ಸಮಯ ಉತ್ತಮವಾಗಿರಲಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿ ಜೀವನಕ್ಕೆ ಈ ವರ್ಷವೂ ಅತ್ಯಂತ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಐದನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು, ಪ್ರತಿ ಪ್ರೇಮ ಪರೀಕ್ಷೆಯಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ಇದರಿಂದಗಾಗಿ ನೀವಿಬ್ಬರು ಮದುವೆಯಂತಹ ದೊಡ್ಡ ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು. ಜನವರಿ, ಫೆಬ್ರವರಿ,ಏಪ್ರಿಲ್ ಮತ್ತು ಮೇ ತಿಂಗಳುಗಳ ಸಮಯವೂ ನಿಮಗೆ ಹೆಚ್ಚು ಉತ್ತಮವಾಗಿರಲಿವೆ. ಆದರೆ ಮಾರ್ಚ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರೀತಿಪಾತ್ರರೊಂದಿಗೆ ಸಣ್ಣ ಪುಟ್ಟ ವಿವಾದದ ಸಾಧ್ಯತೆ ಇದೆ. ಶನಿ ದೇವರ ಶುಭ ಸ್ಥಾನವು ಈ ವರ್ಷ ನಿಮ್ಮ ಆರೋಗ್ಯದಲ್ಲಿ ಹೆಚ್ಚು ಸಕಾರಾತ್ಮಕವಾಗಿ ಪರಿಣಾಮವನ್ನು ಬೀರಲಿದೆ. ಆದ್ದರಿಂದ ಈ ವರ್ಷ ನೀವು ಹೆಚ್ಚು ಆರೋಗ್ಯಕರವಾಗಿ ಅನುಭವಿಸುವಿರಿ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಆರ್ಥಿಕ ಜೀವನದಲ್ಲಿ ವರ್ಷ 2021 ಕೆಲವು ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ಸಾಬೀತುಪಡಿಸಬಹುದು. ವಿಶೇಷವಾಗಿ ಕೆಲವು ವೆಚ್ಚಗಳಿಂದ ವರ್ಷದ ಆರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ.

Leave A Reply

Your email address will not be published.