ಆರ್ .ಸಿ.ಬಿ ತಂಡದಲ್ಲಿ ಒಳ್ಳೊಳ್ಳೆಯ ಆಟಗಾರರು ಇದ್ದಾರೆ. ವಿರಾಟ್ ಕೊಹ್ಲಿಯ ಬಗ್ಗೆ ಮಾತೇ ಇಲ್ಲ. ಎ.ಬಿ.ಡಿ. ವಿಲಿಯರ್ಸ್, ಮೊಹಮ್ಮದ್ ಸಿರಾಜ್ ಇಂತಹ ಇನ್ನೂ ಒಳ್ಳೊಳ್ಳೆಯ ಆಟಗಾರರನ್ನು ಆರ್.ಸಿ.ಬಿ ಹೊಂದಿದೆ.ಇವರುಗಳ ಜೊತೆ ದೇವದತ್ತ ಪಡಿಕ್ಕಲ್ ಎಂಬ ಆಟಗಾರ ಕೂಡ ಇದ್ದಾರೆ. ಅವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ತಂಡಕ್ಕೆ ಆಧಾರವಾದ ಆರ್ .ಸಿ.ಬಿ. ದೇವದತ್ತ ಪಡಿಕ್ಕಲ್ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರಸಕ್ತ ಐ.ಪಿ.ಎಲ್. ಆವೃತ್ತಿಯಲ್ಲಿ ಅರ್ಧ ಶತಕ ಬಾರಿಸಿದ ಇವರು ಐದು ಅರ್ಧ ಶತಕ ಬಾರಿಸಿದ ಆಟಗಾರ ಎಂಬ ಬಿರುದನ್ನು ಪಡೆದಿದ್ದಾರೆ. ರಾಷ್ಟ್ರೀಯ ತಂಡದ ಪರವಾಗಿ ಆಡದೇ ಶಿಖರ್ ಧವನ್ ಹೆಸರಲ್ಲಿದ್ದ 12 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಶಿಖರ್ ಧವನ್ 2008ರಲ್ಲಿ ಡೆಲ್ಲಿ ಕ್ಯಾಪಿಟಲ್ ಪರವಾಗಿ ಆಡುವಾಗ ನಾಲ್ಕು ಅರ್ಧ ಶತಕ ಬಾರಿಸಿದ್ದರು.
ಇವರ ನಂತರದ ಸ್ಥಾನದಲ್ಲಿ ಶ್ರೇಯಸ್ ಐಯ್ಯರ್ ಇದ್ದರು. ಆದರೆ ಈಗ ದೇವದತ್ತ ಪಡಿಕ್ಕಲ್ ಅವರು ಇವರುಗಳಿಗಿಂತ ಒಂದು ಜಾಸ್ತಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಟೂರ್ನಿಯಲ್ಲಿ 472 ರನ್ ಗಳನ್ನು ಗಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿಕೆಟ್ ಒಪ್ಪಿಸುತ್ತಿರುವುದು ಆರ್ .ಸಿ.ಬಿ. ತಂಡಕ್ಕೆ ದೊಡ್ಡ ನಷ್ಟವಾಗಿದೆ. ಉತ್ತಮ ಆಟ ಆಡುವ ಇವರು ಪಂದ್ಯದ ಕೊನೆಯವರೆಗೆ ಆಡಿದರೆ ಬಹಳ ಒಳ್ಳೆಯದಾಗುತ್ತಿತ್ತು.