ಬುದ್ಧಿವಂತರು ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಎಲ್ಲರೂ ಬುದ್ಧಿವಂತರಾಗಿರುವುದಿಲ್ಲ. ಹಾಗೆಯೇ ಎಲ್ಲರೂ ದಡ್ಡರಾಗಿರುವುದಿಲ್ಲ. ಬುದ್ಧಿವಂತರ ಗುಣಗಳ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬುದ್ಧಿವಂತರ ಗುಣಗಳು ಹೀಗಿವೆ. ಮೊದಲನೆಯದಾಗಿ ಬುದ್ಧಿವಂತರು ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ: ಕೆಲವರು ಆಯ್ಕೆ ಮಾಡಿ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಟೀ ಮಾಡಬೇಕು ಅಂದರೆ ಪುಡಿಯನ್ನು ಹಾಕಿ ಕುದಿಸಿ ಫಿಲ್ಟರ್ ಮಾಡಬೇಕಾಗುತ್ತದೆ. ಹಾಗೆಯೇ ಇವರು ಕೂಡ ವ್ಯಕ್ತಿಗಳನ್ನು ಅಳೆದು ಆಯ್ಕೆ ಮಾಡಿ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಇವರು ತುಂಬಾ ಒಳ್ಳೆಯವರು ಎಂದು ಅನಿಸಿದರೆ ಮಾತ್ರ ಸ್ನೇಹ ಮಾಡುತ್ತಾರೆ. ಯಾರಾದರೂ ವ್ಯಕ್ತಿ ಬಂದರೆ ಅಷ್ಟು ಸುಲಭವಾಗಿ ಹತ್ತಿರವಾಗುವುದಿಲ್ಲ.
ಎರಡನೆಯದಾಗಿ ಚಾಕ್ಲೆಟ್ ತುಂಬಾ ಇಷ್ಟಪಡುತ್ತಾರೆ:ಇವರಿಗೆ ಚಾಕ್ಲೆಟ್ ಎಂದರೆ ತುಂಬಾ ಇಷ್ಟ ಆಗಿರುತ್ತದೆ. ಹೆಚ್ಚಾಗಿ ಕಾಫೀ ಫ್ಲೇವರ್ ಇಷ್ಟಪಡುತ್ತಾರೆ. ಇವರಷ್ಟು ಮತ್ಯಾರೂ ಇಷ್ಟಪಡುವುದಿಲ್ಲ.
ಮೂರನೆಯದಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ: ಕೆಲವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದೇ ಇಲ್ಲ. ಆದರೆ ಬುದ್ಧಿವಂತರು ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ. ಮನುಷ್ಯ ಯಾವಾಗ ತನ್ನ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುತ್ತಾನೋ ಆಗ ಮಾತ್ರ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯ. ತನ್ನ ತಪ್ಪನ್ನು ಒಪ್ಪಿಕೊಳ್ಳದೇ ಇರುವುದು ಮನುಷ್ಯನ ಕೆಟ್ಟಗುಣ.
ನಾಲ್ಕನೆಯದಾಗಿ ಒಬ್ಬೊಬ್ಬರೇ ಮಾತಾಡಿಕೊಳ್ಳುತ್ತಿರುತ್ತಾರೆ: ಒಬ್ಬೊಬ್ಬರೇ ಮಾತನಾಡಿಕೊಂಡರೆ ಹುಚ್ಚ ಎನ್ನುತ್ತಾರೆ. ಆದರೆ ಹೆಚ್ಚಿನ ಸಮಯದಲ್ಲಿ ಹೆಚ್ಚಾಗಿ ಮಲಗುವ ಮುನ್ನ ಇವರ ಬೆಸ್ಟ್ ಫ್ರೆಂಡ್ ಇವರೇ ಆಗಿರುತ್ತಾರೆ. ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. ತಮಗೆ ತಾವೇ ಮೋಟಿವೇಶನ್ ಮಾಡಿಕೊಳ್ಳುತ್ತಾರೆ. ಇದು ನಮ್ಮೊಳಗಿನ ಧ್ವನಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತದೆ.
ಐದನೆಯದಾಗಿ ಬುದ್ಧಿವಂತರು ಆಲಸಿಗಳು ಆಗಿರುತ್ತಾರೆ: ಇವರು ಬಹಳ ಆಲಸಿಗಳು ಆಗಿರುತ್ತಾರೆ. ಹೆಚ್ಚಾಗಿ ಮಲಗುತ್ತಾರೆ. ಮಲಗಿಕೊಂಡೇ ಮೊಬೈಲ್ ಒತ್ತುತ್ತಾರೆ. ನನ್ನ ಕೆಲಸವನ್ನು ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಏಕಾಗ್ರತೆ ವಹಿಸುತ್ತಾರೆ. ಯಾವುದೇ ರೀತಿಯ ಕಾರಣಕ್ಕೂ ಯಾವುದೇ ಕೆಲಸ ಇವರಿಗೆ ದೊಡ್ಡದು ಎಂದು ಅನಿಸುವುದೇ ಇಲ್ಲ. ಅದಕ್ಕೇ ಬಿಲ್ ಗೇಟ್ಸ್ ಅವರು ಹೇಳಿದ್ದಾರೆ “ನಾನು ಯಾವಾಗಲೂ ಆಲಸಿಗಳನ್ನೇ ಆರಿಸಿಕೊಳ್ಳುತ್ತೇನೆ. ಏಕೆಂದರೆ ಆಲಸಿಗಳು ಶಾರ್ಟ್ ಕಟ್ ನ್ನು ಹುಡುಕುತ್ತಾರೆ”ಎಂದು.