ರಾಜಕೀಯ ಮುತ್ಸದ್ದಿ ರಮೇಶ್ ಜಾರಕಿಹೊಳಿ ಅವರ ಜೀವನದ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ರಮೇಶ್ ಜಾರಕಿಹೊಳಿ ಅವರು ೧೯೬೦ ರಲ್ಲಿ ಬೆಳಗಾವಿಯಲ್ಲಿ ಇವರ ಜನನ. ರಮೇಶ್ ಜಾರಕಿಹೊಳಿ ಅವರ ತಂದೆ ಲಕ್ಷ್ಮಣ್ ರಾವ್ ಜಾರಕಿಹೊಳಿ ಒಬ್ಬ ದೊಡ್ಡ ಬಿಸ್ನೆಸ್ ವ್ಯಕ್ತಿ. ಪ್ರಸ್ತುತ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪಕ್ಷದ ಕಡೆಯಿಂದ ಗೋಕಾಕ್ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ನೀರಾವರಿ ಮಂತ್ರಿ ಆಗಿ ಆಯ್ಕೆ ಆಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರ ಕುಟುಂಬದ ಬಗ್ಗೆ ನೋಡುವುದಾದರೆ, ಇವರಿಗೆ ಸಂತೋಷ್ ಹಾಗೂ ಅಮರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸಂತೋಷ್ ಅವರು ೨೦೧೬ ರಲ್ಲಿ ಅಂಬಿಕಾ ಎಂಬವರನ್ನು ವಿವಾಹ ಆಗಿದ್ದಾರೆ. ಎಂ ಟೇಕ್ ಓದಿರುವ ಸಂತೋಷ್ ಅವರ ಪತ್ನಿ ಅಂಬಿಕಾ ಸತೀಶ್ ಜಾರಕಿಹೊಳಿ ಅವರ ಹೆಂಡತಿಯ ಸಂಬಂಧಿಕರು ಎನ್ನುವ ಸುದ್ದಿ ಇದೆ.
ಸಂತೋಷ್ ಜಾರಕಿಹೊಳಿ ಅವರು ಈಗ ತಮ್ಮ ತಂದೆಯ ಶುಗರ್ ಫ್ಯಾಕ್ಟರಿಯನ್ನು ನೋಡಿಕೊಳ್ಳುತ್ತಾ ಇದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರ ಮುಂದಿನ ವಾರಸುದಾರ ಎಂದೇ ಕರೆಸಿಕೊಳ್ಳುತ್ತಿರುವ ಅವರ ಎರಡನೇ ಮಗ ಅಮರ್ ಈಗ ಅವರೂ ಸಹ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಮರ್ ಈಗಾಗಲೇ ಬೆಳಗಾವಿಯ ಹಾಲು ಒಕ್ಕೂಟ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಹಾಗೂ ರಮೇಶ್ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮಿ ಎಂದೇ ಹೇಳುವ ಶುಗರ್ ಫ್ಯಾಕ್ಟರಿ ಅಲ್ಲಿ ಕೂಡಾ ಬೋರ್ಡ್ ಆಫ್ ಡೈರೆಕ್ಟರ್ ಆಗಿಯು ಕೂಡಾ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.
ಇನ್ನು ೨೦೧೯ ರ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ಅಮರ್ ಅವರು ಚುನಾವಣೆಗೆ ನಿಲ್ಲಬೇಕಾಗಿತ್ತು. ರಮೇಶ್ ಜಾರಕಿಹೊಳಿ ಅವರು ತಮ್ಮ ಎರಡನೇ ಮಗನನ್ನು ಚುನಾವಣೆಗೆ ನಿಲ್ಲಿಸಲು ಸಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಕೂಡಾ ಕೊನೆ ಕ್ಷಣದಲ್ಲಿ ಈ ಯೋಜನೆಯಿಂದ ರಮೇಶ್ ಜಾರಕಿಹೊಳಿ ಅವರು ಹಿಂದೆ ಸರಿದಿದ್ದಾರೆ. ಆದರೆ ಮುಂಬರುವ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಎರಡನೇ ಮಗ ಅಮರ್ ಅವರನ್ನು ಚುನಾವಣೆಗೆ ನಿಲ್ಲಿಸುವ ಎಲ್ಲಾ ಸಾಧ್ಯತೆಗಳೂ ಇವೆ. ರಮೇಶ್ ಜಾರಕಿಹೊಳಿ ಅವರದ್ದೆ ಕ್ಷೇತ್ರವಾದ ಗೋಕಾಕ್ ನಲ್ಲಿ ಅಮರ್ ಅವರಿಗೆ ಕೂಡಾ ಒಳ್ಳೆಯ ಹೆಸರು ಇದ್ದು , ತಂದೆಯಂತೆಯೇ ಬೆಳೆಯುವುದು ಅಮರ್ ಅವರ ಆಸೆಯಾಗಿದೆ.
ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ