ಇದೇ ಅಕ್ಟೋಬರ್ 15 ರ ನಂತರ ಹಂತ-ಹಂತವಾಗಿ ಶಾಲಾ-ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶಾಲಾ ಕಾಲೇಜುಗಳ ಆರಂಭದ ಸಲುವಾಗಿ ಮಾರ್ಗಸೂಚಿಯನ್ನು ಸಹ ಬಿಡುಗಡೆ ಮಾಡಿದೆ. ಶಾಲಾ ಕಾಲೇಜುಗಳ ಆರಂಭಿಕೆಯ ಕುರಿತಾದದ ಪುಟ್ಟ ಮಾಹಿತಿ ಇದೆ. ಏನು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕೊರೋನಾ ಆರಂಭ ಆದಾಗಿನಿಂದ ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಶೈಕ್ಷಣಿಕ ಕ್ಷೇತ್ರವನ್ನೂ ಹಂತ-ಹಂತವಾಗಿ ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿ ಅನುಮತಿಯನ್ನು ನೀಡಿದೆ. ಇದರ ಬೆನ್ನಲ್ಲೇ ದೇಶದಾದ್ಯಂತ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವಂತ 8,000 ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದರ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರ ಬಗ್ಗೆ ಈಗಾಗಲೇ ಆರ್ಮಿ ಪಬ್ಲಿಕ್ ಶಾಲೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ದಿನಾಂಕ 20-10-2020 ರ ಒಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.  ಸಿ ಬಿ ಎಸ್ ಇ ಪಠ್ಯದಿಂದ ಅನುಮೋದನೆಗೊಂಡಿರುವ 137 ಆರ್ಮಿ ಪಬ್ಲಿಕ್ ಶಾಲೆಗಳು ದೇಶದ ವಿವಿಧ ಪ್ರದೇಶಗಳಲ್ಲಿ ಇವೆ. ಇಂತಹ ಶಾಲೆಗಳಲ್ಲಿ ಖಾಲಿ ಇರುವಂತ 8,000 ಶಿಕ್ಷಕರ ನೇಮಕಕ್ಕೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಆರ್ಮಿ ಪಬ್ಲಿಕ್ ಶಾಲೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರರು ಕೆಲವು ಅರ್ಹತೆಗಳನ್ನು ಹೊಂದಿರಬೇಕು. ಅರ್ಜಿದಾರರು ಹೊಂದಿರಬೇಕಾದ ಅರ್ಹತೆಗಳು ಹಾಗೂ ಅವರ ವಿದ್ಯಾರ್ಹತೆಗಳು ಈ ರೀತಿಯಾಗಿವೆ. ಅರ್ಜಿದಾರರು ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಪೋಸ್ಟ್ ಗ್ರಾಜುಯೇಟ್, ಬಿ.ಎಸ್ಸಿ, ಬಿಸಿಎ, ಎಂಸಿಎ, ಎಂಎಸ್ಸಿ, ಪದವಿ, ಗ್ರಾಜುಯೇಷನ್, ಬಿಎ ಬಿ.ಎಡ್, ಬಿಎಸ್ಸಿ ಬಿ.ಎಡ್, ಡಿ.ಎಡ್, ಬಿ.ಎಡ್ ಪದವಿಯನ್ನು ಪಡೆದಿರಬೇಕು. ಅರ್ಜಿ ಸಲ್ಲಿಸುವವರ ವಯಸ್ಸು 40 ವರ್ಷ ಮೇಲ್ಪಟ್ಟು ಹಾಗೂ 57 ವರ್ಷದ ಒಳಗೆ ಇರಬೇಕು. ಇನ್ನು ಆಯ್ಕೆಯ ಪ್ರಕ್ರಿಯೆ ನೋಡುವುದಾದರೆ , ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಇನ್ನು ಅರ್ಜಿ ಸಲ್ಲಿಸುವವರು ಅರ್ಜಿಯನ್ನು ಸಲ್ಲಿಸಲು 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು http://aps-csb.in/Candidate/GeneralInstructions.aspx ಈ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *