Gruhalakshmi Money: ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರದಿಂದ ಪ್ರತಿ ತಿಂಗಳಿಗೆ 2,000 ರೂ. ಹಣ ಪಾವತಿ ಯಾಗುತ್ತಿದ್ದು, ಇದೆ ಹಣದಿಂದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅತ್ತೆ ಮತ್ತು ಸೊಸೆ ಮಾಲಧಾರ ಓಣಿಯ ಈ ಮಹಿಳೆಯರು ಕೊಡಿಟ್ಟ ಹಣದಿಂದ ಕೊಳವೆ ಬಾವಿ ಕೊರೆಸಿದ್ದಾರೆ, ಇವರ ಅದೃಷ್ಟ ಕೊರೆಸಿದ ಬೋರವೆಲ್ ನಿಂದ ಒಳ್ಳೆಯ ನೀರು ಬಿದ್ದಿದ್ದು ಇದರಿಂದ ಇಡೀ ಕುಟುಂಬ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಹೌದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44,000 ಸಾವಿರ ರೂ. ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಒಟ್ಟು 60,000 ಸಾವಿರ ರೂಪಾಯಿ ಖರ್ಚು ಆಗಿದೆ. ಅದರ ಗೃಹಲಕ್ಷ್ಮಿ ಯೋಜನೆಯ 44,000 ಸಾವಿರ ರೂ. ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣ ಮಗ ನೀಡಿದ್ದಾನೆ ಎಂದು ಮಾಬುಬೀ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಗೃಹಲಕ್ಷ್ಮಿ ಹಣದಿಂದ ಮನೆಯಲಿ tv ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕೆ, ಹಾಗೂ ಆಸ್ಪತ್ರೆ, ಸಂಘ, ಚೀಟಿ ಮುಂತಾದ ಅಗತ್ಯಕ್ಕೆ ಉಪಯೋಗವಾಗುತ್ತಿದೆ ಅನ್ನೋದು ಜನರ ಅಭಿಪ್ರಾಯವಾಗಿದೆ.