2024 ಸಪ್ಟೆಂಬರ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ಹಾಗೂ ಕೊನೆಯ ರಾಶಿ ಮೀನ ರಾಶಿಯ ಸಪ್ಟೆಂಬರ್ ತಿಂಗಳ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ರವಿಯು ಕ್ರಮವಾಗಿ ಆರನೆ ಮತ್ತು ಏಳನೆ ಮನೆ ಕುಜ ಗ್ರಹನು ನಾಲ್ಕನೆ ಮನೆ ಬುಧ ಗ್ರಹನು ಐದು ಮತ್ತು ಆರನೆ ಮನೆ ಗುರು ಮೂರನೆ ಮನೆ ಶುಕ್ರ ಗ್ರಹ ಏಳು ಹಾಗೂ ಎಂಟನೇ ಮನೆ ಶನಿ ಗ್ರಹ ಹನ್ನೆರೆಡನೇ ಮನೆ ಸ್ವಕ್ಷೇತ್ರ ಕುಂಭ ರಾಶಿಯಲ್ಲಿ ರಾಹು ಜನ್ಮ ಕ್ಷೇತ್ರ ಮೀನ ರಾಶಿಯಲ್ಲಿಯೂ ಕೇತು ಸಪ್ತಮಭಾವ ಕನ್ಯಾ ರಾಶಿಯಲ್ಲಿ ಸಂಚಾರ ಮಾಡುತ್ತಾರೆ. ರವಿಯು 6ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ರೋಗರುಜನೆಗಳು ನಿವಾರಣೆಯಾಗಿ ಆರೋಗ್ಯವನ್ನು ಸುಧಾರಿಸುತ್ತಾನೆ, ಶತ್ರುಗಳ ನಾಶವನ್ನು ಮಾಡುತ್ತಾನೆ ಆದರೆ ಮೀನ ರಾಶಿಯವರು ತಮ್ಮ ತೀಕ್ಷ್ಣ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕು ರವಿಯು ಏಳನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಪ್ರಯಾಣ ಮಾಡಬೇಕಾಗುತ್ತದೆ ಇದರಿಂದ ಆಯಾಸವಾಗಿ ಉದರ ಸಂಬಂಧಿ ಸಮಸ್ಯೆಗಳು ಬರುತ್ತದೆ. ಆಹಾರ ನೀರಿನ ವ್ಯತ್ಯಯದಿಂದ ಆರೋಗ್ಯ ಹಾಳಾಗುತ್ತದೆ, ಮಕ್ಕಳ ಹಾಗೂ ತಂದೆ ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಕುಜನು ವಾತಾವರಣ ವ್ಯತ್ಯಯದಿಂದ ಜ್ವರ ರಕ್ತ ಸಂಬಂಧಿ ಖಾಯಿಲೆಗಳನ್ನು ಸೂಚಿಸುತ್ತಾನೆ. ಮೀನ ರಾಶಿಯ ಸ್ತ್ರೀಯರಿಗೆ ಮುಟ್ಟಿನ ಸಮಸ್ಯೆ ಹಾಗೂ ಹಾರ್ಮೋನ್ ವ್ಯತ್ಯಾಸದಿಂದ ಸಂತಾನ ಹೀನತೆಯನ್ನು ಅನುಭವಿಸಬೇಕಾಗಬಹುದು, ವಿವಾಹ ವಿಳಂಬವಾಗುತ್ತದೆ. ಬುಧನು ಐದನೇ ಮನೆಯಲ್ಲಿ ಸಂಚರಿಸುತ್ತಿದ್ದಾಗ ವಿದ್ಯಾರ್ಥಿಗಳಿಗೆ ಪ್ರಗತಿ ಈ ರಾಶಿಯವರಿಗೆ ಮಕ್ಕಳಿಂದ ಸುಖ ಮತ್ತು ನೆಮ್ಮದಿ ಇರುತ್ತದೆ. ಬುಧನು ಆರನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಪತಿ ಪತ್ನಿಯರ ನಡುವೆ ಜಗಳ ಉಂಟಾಗುತ್ತದೆ ಕೆಲಸದ ಸ್ಥಳದಲ್ಲಿ ಒತ್ತಡ ಇರುತ್ತದೆ ವಿದ್ಯಾರ್ಥಿಗಳಿಗೆ ಕೂಡ ಒತ್ತಡವಿರುತ್ತದೆ. ಮಾನಸಿಕ ಅಚಂಚಲತೆಯು ಕೂಡ ಕಾಣಿಸುತ್ತದೆ. ಗುರುವಿನಿಂದ ಸ್ಥಾನನಷ್ಟ ಕಾರ್ಯದಲ್ಲಿ ವಿಘ್ನ ಗುರುಬಲಕ್ಕಾಗಿ ಮೀನ ರಾಶಿಯವರು ದೇವತಾ ಆರಾಧನೆಯನ್ನು ಮಾಡಬೇಕು. ಗುರು ಹಿರಿಯರ ಆಶೀರ್ವಾದವನ್ನು ಪಡೆದುಕೊಂಡರೆ ಒಳ್ಳೆಯದಾಗುತ್ತದೆ.

ಶುಕ್ರನು 7ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಸ್ತ್ರೀಯರಿಂದ ಹಾನಿ ಸ್ತ್ರೀಯರಿಂದ ಕಲಹ ಶುಕ್ರನು ಎಂಟನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಆಭರಣ ನಷ್ಟ, ಸುಖ ಶಾಂತಿ ನಷ್ಟ ಧನ ವ್ಯಯವನ್ನು ಮಾಡಿಸುತ್ತಾನೆ. ಮೀನ ರಾಶಿಯ ಸ್ತ್ರೀಯರು ಅಲಂಕಾರಿಕ ವಸ್ತುಗಳ ವ್ಯಾಪಾರ ಮಾಡುತ್ತಿದ್ದರೆ ಕಾಳಜಿ ವಹಿಸಬೇಕು. ಶನಿ 12ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಅನೇಕ ದುಃಖವನ್ನು ಸಾಲಬಾಧೆ ವ್ಯಾಪಾರ ವ್ಯವಹಾರದಲ್ಲಿ ಕಷ್ಟ ಕೋರ್ಟು ವ್ಯವಹಾರಗಳಲ್ಲಿ ಅಪಜಯ ಇರುತ್ತದೆ. ರಾಹುಗ್ರಹನಿಂದ ಮಾನಸಿಕ ಅಶಾಂತಿ, ಸಂತಾನ ಹೀನತೆ ಸಂತಾನಕ್ಕಾಗಿ ಸರ್ಪ ಶಾಂತಿ ಮಾಡಿಸುವುದು ಒಳ್ಳೆಯದು. ಕೇತುವಿನಿಂದ ದಾಂಪತ್ಯ ವಿರಸನ ಕಂಡುಬರುತ್ತದೆ ಸಾಹಸ ಕ್ರೀಡೆಯಲ್ಲಿ ಇರುವವರಿಗೆ ಜಯ ಮೀನ ರಾಶಿಯ ಅವಿವಾಹಿತರಿಗೆ ವಿವಾಹ ವಿಳಂಬವಾಗುತ್ತದೆ. ಸಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಉತ್ತಮ ದಿನಾಂಕಗಳೆಂದರೆ 10, 20, 22ಹಾಗೂ 26 ನೆ ತಾರೀಖು ಮೀನ ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಪಚ್ಚೆ ಬಿಳಿ ಹಾಗೂ ಬಿಳಿ ಪಚ್ಚೆ ಬಣ್ಣಗಳಾಗಿವೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!