ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಕೆ ಸ್ವವರಂಬಿ ಸಾರಥಿ 2024 ಕರ್ನಾಟಕಕ್ಕೆ ಆನ್‌ಲೈನ್ ಅರ್ಜಿ ಪ್ರಾರಂಭವಾಗಿದೆ. ಇಂದು ನಾವು ಈ ಯೋಜನೆಯ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. ತ್ವರಿತ ಮಾಹಿತಿಗಾಗಿ, ದಯವಿಟ್ಟು ಎಲ್ಲಾ ಮಾಹಿತಿಯನ್ನು ಸಂಕ್ಷಿಪ್ತವಾಗಿ ಓದಿ ಮತ್ತು ಅರ್ಥಮಾಡಿಕೊಳ್ಳಿ.

ಈ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ / ಪಡೆದ ಟ್ಯಾಕ್ಸಿ /ಗೂಡ್ಸ್ ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಠ ರೂ. 3,00,000/- ರ ವರೆಗೆ, ಪ್ರಯಾಣಿಕ ಆಟೋ ರಿಕ್ಷಾ ಖರೀದಿಸಲು ಗರಿಷ್ಠ ರೂ. 75,000/- ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು. ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಈ ಯೋಜನೆಯ ವಿವರ ಹೀಗಿದೆ:
ಅರ್ಜಿಸಲ್ಲಿಸಲು ಯಾರೆಲ್ಲ ಅರ್ಹರು? ಹಿಂದುಳಿದ ವರ್ಗ ಪ್ರ-1, 2ಎ,3ಎ,ಮತ್ತು 3ಬಿ,
ವಾಹನದ ಪರವಾನಗಿ: ಲಘುವಾಹನ /ಲೈಟ್
ವಾಹನದ ವಿವರಗಳು : ಟೂರಿಸ್ಟ್ ಅಥವಾ ಗೂಡ್ಸ್ ವಾಹನಗಳು

ಸಾಲದ ವಿವರ:
ಘಟಕ ವೆಚ್ಚ: ಶೇ.50% ರಷ್ಟು
ಸಹಾಯಧನ : 3 ಲಕ್ಷ ರೂಗಳು
ನಾಲ್ಕು ಚಕ್ರ ವಾಹನ ಖರೀದಿಗೆ: ಹಳದಿ ಬೋರ್ಡ್ ಕಡ್ಡಾಯ

ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು
ಆಧಾರ ಕಾರ್ಡ್
ರೇಷನ್ ಕಾರ್ಡ್
ಜಾತಿ ಮತ್ತು ಅಧಾಯ
ಡ್ರೈವಿಂಗ್ ಲೈಸೆನ್ಸ್
ಬ್ಯಾಂಕ್ ಪಾಸ್ ಬುಕ್
ಇತ್ತೀಚಿನ ಭಾವ ಚಿತ್ರ

ಯಾವೆಲ್ಲ ನಿಗಮದಲ್ಲಿ ಸಾರಥಿ ಯೋಜನೆಗೆ ಅರ್ಜಿಸಲ್ಲಿಸಬಹುದು ?
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
ಉಪ್ಪಾರ ಅಭಿವೃದ್ಧಿ ನಿಗಮ
ಮರಾಠ ಅಭಿವೃದ್ಧಿ ನಿಗಮ
ವಿಶ್ವಕರ್ಮಾ ಅಭಿವೃದ್ಧಿ ನಿಗಮ
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
ಸವಿತಾ ಸಮಾಜ ಅಭಿವೃದ್ಧಿ ನಿಗಮ
ಅಲೆಮಾರಿ ಅರೆ- ಅಲೆಮಾರಿ ಅಭಿವೃದ್ಧಿ ನಿಗಮ
ಒಕ್ಕಲಿಗ ಅಭಿವೃದ್ಧಿ ನಿಗಮ

ಈ ಯೋಜನೆಯ ಸೌಲಭವನ್ನು ಪಡೆಯಲು ಇಚ್ಛಿಸುವವರು, ನಿಮ್ಮ ಹತ್ತಿರದ ಗ್ರಾಂ ಒನ್, ಕರ್ನಾಟಕಒನ್ ಅಥವಾ ಆನ್ಲೈನ್ ಸೆಂಟರ್ ನಲ್ಲಿ ಅರ್ಜಿಸಲ್ಲಿಸಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!