ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿದೆ. ಬಹುತೇಕ ಜನರು ಇಂತಹ ಯೋಜನೆಯ ಮಾಹಿತಿಯನ್ನು ತಿಳಿದಿದ್ದರೂ ಕೂಡ ಇದರ ಪ್ರಯೋಜನವನ್ನು ಪೊಡೆದಿರುವುದಿಲ್ಲ ಹಾಗಾಗಿ ಈ ಯೋಜನೆಯ ಮಾಹಿತಿಯನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಈ ಯೋಜನೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಈ ಯೋಜನೆಯನ್ನು ಆರ್ಯ ವೈಶ್ಯ ವಾಹಿನಿ/ಆಹಾರ ವಾಹಿನಿ ಯೋಜನೆ ಎಂಬುದಾಗಿ ಕರೆಯಲಾಗುತ್ತದೆ. ಈ ಬಾರಿ ಆರ್ಯ ವೈಶ್ಯ ವಾಹಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಅಭ್ಯರ್ಥಿಯು ಯೆಲ್ಲೋ ಬೋರ್ಡ್​ ಉಳ್ಳ ಆಟೋ, ಟ್ರಕ್, ಕಾರ್ ಇತ್ಯಾದಿಯನ್ನು ಖರೀದಿಸಬಹುದು.

ಅಷ್ಟೇ ಅಲ್ಲದೆ ಅರ್ಜಿದಾರರು ಯಾವುದಾದರೂ ಬ್ಯಾಂಕ್‍ನಲ್ಲಿ ಸಾಲ ಪಡೆಯಬಹುದು ಹಾಗೂ ನಿಗಮದಿಂದ 1 ಲಕ್ಷ ರೂವರೆಗೆ ಸಬ್ಸಿಡಿಯನ್ನು ನೀಡಲಾಗುವುದು. ಅರ್ಜಿದಾರರು ವಾಹನವನ್ನು Fabrication ಮಾಡಿಸಿ ಮೊಬೈಲ್‍ ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಲ್ಲಿ ಹೆಚ್ಚುವರಿಯಾಗಿ 1 ಲಕ್ಷ ರೂ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಗೆ ಅರ್ಹರು ಯಾರು ಇದನ್ನು ಅರ್ಜಿಸಲ್ಲಿಸುವುದು ಹೇಗೆ ತಿಳಿಯಿರಿ.

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿ ಒಳಗಿರಬೇಕು.ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು.
ಮಹಿಳೆಯರಿಗೆ ಶೇ.33ರಷ್ಟು, ವಿಶೇಷಚೇತನರಿಗೆ ಶೇ.5ರಷ್ಟು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ಶೇ.5ರಷ್ಟು ಮೀಸಲಾತಿ ಇರುತ್ತದೆ. ಒಂದು ಕುಟುಂಬದಲ್ಲಿ ಒಂದು ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ.ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಡ್ರೈವಿಂಗ್ ಲೈಸೆನ್ಸ್ ಉಳ್ಳ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡುವುದು.

ಈ ಯೋಜನೆಯನ್ನು ಪಡೆಯಲು ಸಾಮಾನ್ಯ ಅರ್ಹತೆಗಳು:-
ಆರ್ಯ ವೈಶ್ಯ ಅರ್ಜಿದಾರರು “ನಮೂನೆ-ಜಿ” ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು.) ಅರ್ಜಿದಾರರು ಕರ್ನಾಟಕ ರಾಜ್ಯವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ಆಧಾರ್‍ಗೆ ಜೋಡಣೆ ಮಾಡಿರಬೇಕು (Seeding with bank account)

ಸಂಪರ್ಕ ವಿವರ:
ನಿಗಮದ ಸಹಾಯವಾಣಿ: 94484 51111 (ಬೆಳಿಗ್ಗೆ:10.00 ರಿಂದ ಸಂಜೆ:5.30 ರವರೆಗೆ ಸಂಪರ್ಕಿಸಬಹುದಾಗಿದೆ. ಆರ್ಯ ವೈಶ್ಯ ನಿಗಮದ ಯೋಜನೆಗಳಿಗೆ ಜುಲೈ 12 ರಿಂದ ಆನ್​ಲೈನ್​ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಆಗಸ್ಟ್​ 31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕ್ ಭೇಟಿ ನೀಡಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!