ಉದ್ಯೋಗದ ನಿರೀಕ್ಷೆಯಲ್ಲಿರುವ ಹೆಣ್ಣುಮಕ್ಕಳಿಗೆ ಅಂಗನವಾಡಿ ಇಲಾಖೆಯಿಂದ ಉದ್ಯೋಗಾವಕಾಶ, ಹೌದು PUC ಹಾಗೂ SSLC ಪಾಸ್ ಆಗಿರುವ ಹೆಣ್ಣುಮಕ್ಕಳಿಗೆ ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಬರುವಂತ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಕರೆಲಾಯಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಅಷ್ಟೇ ಅಲ್ಲದೆ ನಮ್ಮ ಟೆಲಿಗ್ರಾಮ್ ಹಾಗೂ ವಾಟ್ಸಾಪ್ ಗ್ರೂಪ್ ಸೇರಿ ಪ್ರತಿದಿನ ಅಪ್ಡೇಟ್ ವಿಷಯಗಳನ್ನು ಪಡೆಯಿರಿ..
ರಾಜ್ಯದಲ್ಲಿ ಖಾಲಿ ಇರುವ 13,593 ಅಂಗನವಾಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸೂಚಿಸಿದ್ದಾರೆ.
ಹುದ್ದೆಯ ವಿವರ ಹೀಗಿದೆ:
ಅಂಗನವಾಡಿ ಕಾರ್ಯಕರ್ತೆಯರು : 4,180
ಅಂಗನವಾಡಿ ಸಹಾಯಕಿಯರು : 9,411
ಒಟ್ಟು ಖಾಲಿ ಹುದ್ದೆಗಳು : 13,593
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
ಉತ್ತರ ಕನ್ನಡ ಜಿಲ್ಲೆ: 344
ಬೆಳಗಾವಿ ಜಿಲ್ಲೆ: 313
ಕಲಬುರಗಿ ಜಿಲ್ಲೆ: 299
ಹಾವೇರಿ ಜಿಲ್ಲೆ : 152
ಇನ್ನೂ ಉಳಿದ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರೀಯೆ ಪ್ರಾರಂಭಗೊಳ್ಳಲಿದೆ. ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಮೀಸಲಾತಿ ಹೊಂದಿರುವವರಿಗೆ ವಯೋಮಿತಿಯಲ್ಲಿ ಸಡಲಿಕೆ ಇರುತ್ತೆ
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು:
ನಿವಾಸಿ ದೃಡೀಕರಣ ಪತ್ರ
SSLC/PUC ಅಂಕಪಟ್ಟಿ
ಮೀಸಲಾತಿಗಾಗಿ ಜಾತಿ ಪ್ರಮಾಣ ಪತ್ರ
ಆತ್ಮಹತ್ಯೆ ಮಾಡಿಕೊಂಡ ರೈತರ ಹೆಂಡತಿ ಆಗಿದ್ದಲ್ಲಿ ಸ್ಥಳೀಯ ಎಸಿ ಅವರಿಂದ ಪಡೆದ ಪ್ರಮಾಣ ಪತ್ರ
ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ
ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ
ವಿದ್ಯಾರ್ಹತೆ ಪ್ರಮಾಣ ಪತ್ರ
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ?
ಅಂಗನವಾಡಿ ಕಾರ್ಯಕರ್ತೆ : PUC ಪಾಸ್
ಅಂಗನವಾಡಿ ಸಹಾಯಕಿ : 10th ಪಾಸ್
ವೇತನ: ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 12,000 ರೂಪಾಯಿ ಹಾಗೂ ಸಹಾಯಕಿಯರಿಗೆ 8,000 ರೂಪಾಯಿ ಸಂಬಳ ನೀಡಲಾಗುತ್ತಿದೆ
ಈ ಹುದ್ದೆಗೆ online ಮೂಲಕ ಅರ್ಜಿಯನ್ನು ಸಲ್ಲಿಸಬೇಕು
ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ