Ration Card: ರೇಷನ್ ಕಾರ್ಡ್ ಇರೋರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಏನು ಅಂದ್ರೆ, ರೇಷನ್ ಕಾರ್ಡ್ಗೆ ಆಧಾರ್ ಲಿಂಕ್ (Aadhar link) ಮಾಡುವ ದಿನಾಂಕವನ್ನು ಮುಂದಕ್ಕೆ ವಿಸ್ತರಣೆ ಮಾಡಲಾಗಿದೆ. ಹೌದು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಜೂನ್ 30ಕ್ಕೆ ನಿಗದಿಯಾಗಿತ್ತು ಆದ್ರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ಮತ್ತೆ ಈ ಅವಕಾಶವನ್ನು ಮಾಡಿಕೊಟ್ಟಿದೆ.
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲಿಲ್ಲ ಅಂದ್ರೆ ಏನ್ ಆಗತ್ತೆ?
ಒಂದು ರೇಷನ್ ಕಾರ್ಡ್ ನಲ್ಲಿ ಮನೆಯ ಸದಸ್ಯರು ಎಲ್ಲರು ಇರುತ್ತಾರೆ, ಆ ಸಧಸ್ಯರ ಆಧಾರ್ ಲಿಂಕ್ ರೇಷನ್ ಕಾಡ್ ಗೆ ಲಿಂಕ್ ಮಾಡಿಸಲಿಲ್ಲ ಅಂದ್ರೆ ಆ ಸದಸ್ಯರ ಹೆಸರು ರೇಷನ್ ಕಾರ್ಡ್ ನಿಂದ ಡಿಲೀಟ್ ಆಗಲಿದೆ, ಹಾಗಾಗಿ ತಪ್ಪದೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಆಧಾರ್ ಲಿಂಕ್ ರೇಷನ್ ಕಾರ್ಡ್ಗೆ ಮಾಡಿಸಿ.
ಮುಂಚೆ ತರಹ ಹೊಸ ರೇಷನ್ ಕಾರ್ಡ್ ಪಡೆಯುವುದು ಅಷ್ಟೊಂದು ಸುಲಭವಿಲ್ಲ ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಕೂಡ ಕಷ್ಟ ಇದೆ. ವರ್ಷದಲ್ಲಿ 2 ಅಥವಾ 3 ಬಾರಿ ಅಷ್ಟೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಈ ಮಾಹಿತಿಯನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.