Gemini Horoscope July 2024 Prediction: ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಮಿಥುನ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜುಲೈ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಹಲವು ವಿಷಯದಲ್ಲಿ ಅನುಕೂಲಗಳಿರುತ್ತದೆ. ಜುಲೈ ತಿಂಗಳ ಪ್ರಾರಂಭದಲ್ಲಿ ಉತ್ತಮ ಆದಾಯ ಹಾಗೂ ಧೈರ್ಯ ಅಧಿಕವಾಗಿ ಬರುತ್ತದೆ. ಈ ರಾಶಿಯವರು ಜುಲೈ ತಿಂಗಳಲ್ಲಿ ಪ್ರತಿಯೊಂದು ಕೆಲಸವನ್ನು ಉತ್ಸಾಹದಿಂದ ಪೂರ್ಣಗೊಳಿಸುತ್ತಾರೆ, ಕಠಿಣ ಪರಿಶ್ರಮದಿಂದ ಪೂರ್ಣ ಫಲಿತಾಂಶ ಸಿಗುತ್ತದೆ. ಮಿಥುನ ರಾಶಿಯವರ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ಕೆಲಸದ ನಿಮಿತ್ತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವ ಸಂದರ್ಭ ಬರಬಹುದು. ವ್ಯಾಪಾರ ಮಾಡುತ್ತಿರುವವರಿಗೆ ಉತ್ತಮ ಪ್ರಗತಿ ಇರುತ್ತದೆ ಉದ್ಯೋಗ ಮಾಡುವವರಿಗೂ ಲಾಭವಿದೆ. ಮಿಥುನ ರಾಶಿಯವರಿಗೆ ಗುರು ಬಲದಿಂದಲೂ ವ್ಯಾಪಾರದಲ್ಲಿ ಲಾಭ ಇದೆ ಹಾಗೂ ಬೇರೆ ರಾಜ್ಯಗಳಿಗೆ ಹೋಗಿ ವ್ಯಾಪಾರ ಮಾಡುವವರಿಗೆ ಅನುಕೂಲವಿದೆ.

ಮಿಥುನ ರಾಶಿಯವರು ಶ್ರೀಮಂತರಿಂದಲೂ ಬೆಂಬಲ ಪಡೆಯುತ್ತಾರೆ. ಹಣಕಾಸಿನ ವಿಷಯವನ್ನು ನೋಡುವುದಾದರೆ ದಿನದಿಂದ ದಿನಕ್ಕೆ ಇವರ ಗಳಿಕೆ ಹೆಚ್ಚಾಗುತ್ತದೆ ಹಾಗೂ ಧೈರ್ಯವನ್ನು ಹೆಚ್ಚಿಸುತ್ತದೆ. ಈ ತಿಂಗಳಲ್ಲಿ ಧಾರ್ಮಿಕ ಕೆಲಸಕ್ಕಾಗಿ ಹಣವನ್ನು ಖರ್ಚು ಮಾಡುತ್ತಾರೆ ಇದರಿಂದ ಖರ್ಚು ಹೆಚ್ಚಾಗಬಹುದು. ಮಿಥುನ ರಾಶಿಯವರ ಆರೋಗ್ಯದ ಬಗ್ಗೆ ನೋಡುವುದಾದರೆ ಈ ರಾಶಿಯ ಅಧಿಪತಿ ಬುಧನು ಮಾಸದ ಆರಂಭದಲ್ಲಿ ಎರಡನೆ ಮನೆಯಲ್ಲಿ ಇರುವುದರಿಂದ ಆರೋಗ್ಯ ಸುಧಾರಿಸುತ್ತದೆ ಆದರೂ ಆರೋಗ್ಯದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಕಂಡುಬರುತ್ತದೆ ಕೊಲೆಸ್ಟ್ರಾಲ್ ಹೆಚ್ಚಾಗುವುದು ಅಥವಾ ರಕ್ತ ಒತ್ತಡಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಾಣಿಸುತ್ತದೆ ತಕ್ಷಣವೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಮಿಥುನ ರಾಶಿಯವರ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಒಂದು ರೀತಿಯಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಹೆಚ್ಚಾಗುತ್ತದೆ ಇನ್ನೊಂದು ಕಡೆ ಅಹಂಕಾರದ ಘರ್ಷಣೆ ಕಾಣಿಸುತ್ತದೆ ಹೀಗಾಗಿ ಸಂಬಂಧವನ್ನು ನಿಭಾಯಿಸಬೇಕು ಬಿರುಕು ಬರದಂತೆ ನೋಡಿಕೊಳ್ಳಬೇಕು. ಈ ತಿಂಗಳಲ್ಲಿ ಕೆಲಸದ ನಿಮಿತ್ತ ಬೇರೆಯವರೊಂದಿಗೆ ಸಮಯ ಕಳೆಯುವುದರಿಂದ ಕುಟುಂಬದವರಿಗೆ ಸಮಯ ಕೊಡಲು ಕಷ್ಟವಾಗುತ್ತದೆ ಮನೆಯಲ್ಲಿ ಒಗ್ಗಟ್ಟಿನ ಕೊರತೆ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಮಿಥುನ ರಾಶಿಯವರು ಶ್ರೀಹರಿ ವಿಷ್ಣುವಿನ ಆರಾಧನೆಯನ್ನು ಮಾಡಬೇಕು ಇಲ್ಲವಾದರೆ ಶುಕ್ರ ಗ್ರಹದ ಬೀಜ ಮಂತ್ರವನ್ನು ಪಠಿಸಬೇಕು ಹಾಗೂ ದೇವರ ಆಶೀರ್ವಾದ ಇದ್ದರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!