Gruhalakshmi 11 Installment: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಜಮಾನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 11 ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡಿದ್ಯ? ಇಲ್ವ?. ಅದರ ಮಾಹಿತಿಯನ್ನು ತಿಳಿಯೋಣ ಬನ್ನಿ.
ಮೇ ತಿಂಗಳ ಪ್ರಾರಂಭದಲ್ಲೇ 10 ನೇ ಕಂತಿನ ಹಣ ಬಿಡುಗಡೆ ಆಗಿದ್ದು. ಅದು, ಮಹಿಳೆಯರ ಅಕೌಂಟಿಗೆ ಜಮೆ ಆಗಿದೆ. ಜೂನ್ ತಿಂಗಳಿನಲ್ಲಿ ಬರಬೇಕಿರುವ 11 ನೇ ಕಂತಿನ ಹಣ ಇನ್ನು ಬಿಡುಗಡೆ ಆಗಿಲ್ಲ. ಸರ್ಕಾರ ಇಲ್ಲಿಯವರೆಗೂ 2,000ದಂತೆ ಫಲಾನುಭವಿ ಮಹಿಳೆಯರ ಖಾತೆಗೆ 20,000 ಜಮಾ ಮಾಡಿದೆ.
11 ನೇ ಕಂತಿನ ಹಣವನ್ನು ಸರ್ಕಾರ ಜೂನ್ 4 ನೇ ತಾರೀಖು ಬಿಡುಗಡೆ ಮಾಡುತ್ತದೆ ಎನ್ನುವ ಅಪ್ಡೇಟ್ಸ್ ( updates ) ಸಿಗುತ್ತಿದೆ. ಜೂನ್ ತಿಂಗಳ ಕೊನೆಯಲ್ಲಿ ಎಲ್ಲಾ ಮಹಿಳೆಯರ ಖಾತೆಗೆ 11 ನೇ ಕಂತಿನ ಹಣ ಬಂದು ಜಮೆ ಆಗುವ ಆಶ್ವಾಸನೆಯನ್ನು ಸರ್ಕಾರ ನೀಡಿದೆ. ಸದ್ಯಕ್ಕೆ ಕೆಲವೊಂದು ನಿಯಮಗಳನ್ನು ಎಲೆಕ್ಷನ್ ಕಮಿಷನ್ ಮಾಡಿರುವುದರಿಂದ ಅದನ್ನು ಚುನಾವಣಾ ಫಲಿತಾಂಶ ಬರುವ ತನಕ ಪಾಲನೆ ಮಾಡಲೇಬೇಕು. ಅದರಿಂದ, 11 ನೇ ಕಂತಿನ ಹಣ ಈ ತಿಂಗಳ ಕೊನೆಯ ಒಳಗೆ ಜಮೆ ಆಗುವ ಸಾಧ್ಯತೆ ಇದೆ.
ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಸರ್ಕಾರ ಮೇಲುಗೈ ಸಾಧಿಸದೆ ಇದ್ದಲ್ಲಿ, ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಬರುವುದಿಲ್ಲ ಎನ್ನುವುದು ಸುಳ್ಳು ಅಷ್ಟೇ. ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಹಣ ನೀಡುವುದಾಗಿ ಭರವಸೆಯನ್ನು ನೀಡಿರುವುದರಿಂದ ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ.
ಈ ವಿಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಅದರಿಂದ, ಮಹಿಳೆಯರು ಹಣ ಜಮೆ ಆಗುವುದರ ವಿಚಾರವಾಗಿ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಜೂನ್ ತಿಂಗಳ ಕೊನೆಯಲ್ಲಿ ಮಹಿಳೆಯರು ಒಂದು ಬಾರಿ ಅವರ ಬ್ಯಾಂಕ್ ಖಾತೆಯನ್ನು ಪರೀಕ್ಷೆ ಮಾಡಿಕೊಂಡರೆ ಹಣ ಜಮೆ ಆಗಿರುವುದರ ಮಾಹಿತಿ ಸಿಗುತ್ತದೆ.