ಸರ್ಕಾರದಿಂದ ಉಚಿತ ಮನೆ ನಿರ್ಮಾಣಕ್ಕಾಗಿ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಅಂದರೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ವಿವಿಧ ಆಶ್ವಾಸನೆಗಳನ್ನು ನೀಡಿದೆ. ಕರ್ನಾಟಕ ಜನರಿಗೆ ಅನುಕೂಲ ಆಗುವಂತೆ ಎಷ್ಟೋ ಯೋಜನೆಗಳನ್ನು ಜಾರಿ ಕೂಡ ಮಾಡಿದೆ. ಇಂದು ರಾಜೀವ್ ಗಾಂಧಿ ವಸತಿ ಯೋಜನೆಯ ಬಗ್ಗೆ ತಿಳಿಯೋಣ.
ಮನೆ ನಿರ್ಮಾಣ ಮಾಡಲು ತಗುಲುವ ಪೂರ್ತಿ ವೆಚ್ಚ 7.5 ಲಕ್ಷ. 3.5 ಲಕ್ಷ ಕೇಂದ್ರ ಸರ್ಕಾರದ ಸಹಾಯಧನ, ₹3 ಲಕ್ಷ ರಾಜ್ಯ ಸರ್ಕಾರ ಭರಿಸಲಿರುವ ಹಣ, ₹1 ಲಕ್ಷ ಫಲಾನುಭವಿಗಳು ಭರಿಸಬೇಕಾದ ಹಣ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಆವಾಸ್ (ನಗರ) ವಸತಿ ಯೋಜನೆಯ ಕೆಳಗೆ. 52,189 ಮನೆಗಳು ನಿರ್ಮಾಣ ಆಗುತ್ತವೆ.
ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ಇಲ್ಲದ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ಮನೆ ನಿರ್ಮಾಣ ಮಾಡಿಕೊಡಲು ಇರುವ ಯೋಜನೆ. ಈ ಯೋಜನೆಯನ್ನು ಈಗ ಕರ್ನಾಟಕ ರಾಜ್ಯ ಸರ್ಕಾರ ಜಾರಿ ಮಾಡಿದೆ. ರಾಜೀವ್ ಗಾಂಧಿ ವಸತಿ ಯೋಜನೆಯು ವಾಸ ಮಾಡಲು ವಸತಿ ಇಲ್ಲದ ಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕೆ, ಯಾವ ವಿಧಾನದಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು ಮತ್ತು ಯಾವ ದಾಖಲೆಗಳ ಅಗತ್ಯ ಇದೆ ಎಂದು ತಿಳಿಯೋಣ.
ಅಗತ್ಯ ಇರುವ ದಾಖಲೆಗಳು :-
- ಪಡಿತರ ಚೀಟಿ
- ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಪುಸ್ತಕ
- ಮರಣ ಪ್ರಮಾಣ ಪತ್ರ ಮತ್ತು ಇತರೆ….
ಅರ್ಜಿಸಲ್ಲಿಕೆಮಾಡುವವಿಧಾನ:
https://ashraya.karnataka.gov.in/nannamane/index. ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ, ವಾಸ ಮಾಡುವ ಜಿಲ್ಲೆ, ತಾಲೂಕು ಮತ್ತು ಹೋಬಳಿ ಆಯ್ಕೆ ಮಾಡಲು ಅಲ್ಲಿ ಆಯ್ಕೆ ಇರುತ್ತವೆ. ತದನಂತರ, ನಿವಾಸ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ಹಾಗು ಅರ್ಜಿದಾರರ ಸರಿಯಾದ ಎಲ್ಲಾ ದಾಖಲೆಗಳ ಜೊತೆ ಸಲ್ಲಿಕೆ ಮಾಡಬೇಕು. ನಂತರ ನಮ್ಮ ಮನೆ ಎನ್ನುವುದನ್ನು ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಕೆ ಮಾಡಿದ ಬಳಿಕ ಫಲಿತಾಂಶವನ್ನು ಕೆಲವೇ ದಿನಗಳಲ್ಲಿ ಆನ್ಲೈನ್ ಮೂಲಕ ಹೇಳಲಾಗುತ್ತದೆ.
ಇದರಿಂದ ವಸತಿ ಇಲ್ಲದ ಜನರಿಗೆ ಮನೆ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಹತ್ತಿರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಚಾರಿಸಬೇಕು ಹಾಗೂ ಯೋಜನೆಯ ಬಗ್ಗೆ ಇನ್ನೂ, ಹೆಚ್ಚಿನ ಮಾಹಿತಿಯನ್ನು ಅಲ್ಲಿಂದ ಪಡೆದುಕೊಳ್ಳಬಹುದು.