Raghava Lawrence: ತೋರಿಕೆಗೆ ಸಹಾಯ ಮಾಡುವರು ಎಷ್ಟೋ ಜನರು, ತಮಿಳ್’ನಲ್ಲಿ ಹಾರರ್ ಸಿನಿಮಾ ಅಂದ್ರೆ ಮೊದಲು ನೆನಪಾಗೋದೆ ರಾಘವ ಲಾರೆನ್ಸ್. ಕಾಂಚನ 1, 2, 3, ಚಂದ್ರಮುಖಿ -2, ಸ್ಟೈಲ್, ಮುನಿ ಇತ್ಯಾದಿ. ಸಿನಿಮಾದಲ್ಲಿ ನಟಿಸಿ ಫೆಮಸ್ ಆಗಿರುವ ಈ ನಟ. ಬಡ ರೈತರಿಗೆ 10 ಮಹೀಂದ್ರಾ ಟ್ರಾಕ್ಟರ್ ಉಡುಗೊರೆಯಾಗಿ ನೀಡಿದ್ದಾರೆ ಜೊತೆಗೆ ವಿಶೇಷ ಚೇತನ ವ್ಯಕ್ತಿಗಳಿಗೆ ದ್ವಿ ಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾಲಿವುಡ್ ನಟ ರಾಘವ ಲಾರೆನ್ಸ್‌ (Raghava Lawrence) ಅವರಿಗೆ, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಡ್ಯಾನ್ಸ್ ಕೊರಿಯೋಗ್ರಾಫರ್‌ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು, ತೆಲುಗು ಸಿನಿಮಾದ ಮುಖಾಂತರ ಆಕ್ಟಿಂಗ್ ಕೆರಿಯರ್ ಪ್ರಾರಂಭ ಮಾಡಿದ್ದರು. ಈ ದಿನ ಇವರು ಕೇವಲ ಸ್ಟಾರ್ ಆಗಿ ಮಾತ್ರವಲ್ಲದೆ, ನಿಜ ಬದುಕಿನಲ್ಲಿ ಸಹ ಎಷ್ಟೋ ಜನಕ್ಕೆ ಸಹಾಯ ಹಸ್ತ ನೀಡುವ ಮುಖಾಂತರ ಆದರ್ಶಪ್ರಾಯ ವ್ಯಕ್ತಿ ಆಗಿದ್ದಾರೆ. 2015ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಿಧನರಾದ ನಂತರ ಅವರ ಗೌರವಾರ್ಥವಾಗಿ ನಟ ರಾಘವ ಲಾರೆನ್ಸ್ ಚಾರಿಟಬಲ್ ಟ್ರಸ್ಟ್​ವೊಂದನ್ನು ಸ್ಥಾಪಿಸಿ ರೂ.1 ಕೋಟಿ ದೇಣಿಗೆಯನ್ನು ನೀಡಿದ್ದರು.

ಸದ್ಯ, ಜೀವನ ಕಟ್ಟಿಕೊಳ್ಳಲು ಹೊರಡುವ ಶ್ರಮಿಕರನ್ನು ಗುರುತಿಸಿ, ಅವರಿಗೆ ಸಹಾಯವನ್ನು ಮಾಡುತ್ತಿರುತ್ತಾರೆ. ಬುಧವಾರ ಬಡ ರೈತರಿಗೆ 10 ಮಹೀಂದ್ರಾ ಟ್ರಾಕ್ಟರ್‌ಗಳನ್ನು ಉಡೊಗೊರೆಯಾಗಿ ಕೊಟ್ಟಿದ್ದಾರೆ. ಈ ಕುರಿತು ಅವರ ‘ಎಕ್ಸ್’ ಅಕೌಂಟ್’ನಲ್ಲಿ ಸ್ವತಃ ನಟ ರಾಘವ ಲಾರೆನ್ಸ್ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಕಾರ್ಮಿಕರ ದಿನಾಚರಣೆಯಂದು, ಅವರ ಚಾರಿಟಬಲ್ ಟ್ರಸ್ಟ್ ಮುಖಾಂತರ ‘ಸೇವೆಯೇ ದೇವರು’ ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.

ದೇಶದ ಬೆನ್ನೆಲುಬಾಗಿ ಇರುವ ರೈತರಿಗೆ ಅವರ ಸ್ವಂತ ಡುಡ್ಡಿನಲ್ಲಿ ಮೊದಲಿಗೆ 10 ಟ್ರ್ಯಾಕ್ಟರ್’ಗಳನ್ನು ನೀಡಲಾಗಿದೆ. ಅಗತ್ಯ ಇರುವ ಜನರಿಗೆ ಸೇವೆ ಸಲ್ಲಿಸುವ ಈ ನಿಸ್ವಾರ್ಥ ಪಯಣದಲ್ಲಿ ಎಲ್ಲರೂ ಬಂದು ಸೇರಿ’ ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ. ನಟ ರಾಘವ ಲಾರೆನ್ಸ್ ಮಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತುಂಬ ವೈರಲ್ ಆಗಿದೆ ನೆಟ್ಟಿಗರು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ‘ನಿಜವಾಗಿಯೂ ನಿಮ್ಮಿಂದ ಒಂದು ಬದಲಾವಣೆ ಆಗುತ್ತದೆ ಲಾರೆನ್ಸ್ ಸರ್… ಸೂಪರ್’ ಎಂದು ಹೊಗಳಿದ್ದಾರೆ.

76,000 ಹೆಚ್ಚಿನ ಜನರು ವಿಡಿಯೋವನ್ನು ವೀಕ್ಷಣೆ ಮಾಡಿದ್ದು, 5 ಸಾವಿರದಷ್ಟು ಲೈಕ್ ಪಡೆದುಕೊಂಡಿದೆ.
ಹೋದ ತಿಂಗಳು ಸಹ ನಟ ರಾಘವ ಲಾರೆನ್ಸ್, ವಿಶೇಷ ಚೇತನ ಸಾಧಕರಿಗೆ 13 ಸ್ಕೂಟರ್‌ಗಳನ್ನು ಉಡೊಗೊರೆಯಾಗಿ ನೀಡುರುವ ವಿಡಿಯೋ ಜಾಸ್ತಿ ವೈರಲ್ ಆಗಿತ್ತು. ಈ ಬಗ್ಗೆ ಅವರ ಇನ್ಸ್ಟಾಗ್ರಾಮ್ ಅಕೌಂಟ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸುದ್ದಿಗೋಷ್ಠಿಯಲ್ಲಿ ವಿಶೇಷ ಚೇತನ ಯುವಕರು ತುಂಬ ಧೈರ್ಯದಿಂದ ‘ಮಲ್ಲಕಂಬ’ ಪ್ರದರ್ಶಿದ್ದರು ಎಂದು ಹೇಳಿದ್ದೆ. ಅವರ ದೃಢಸಂಕಲ್ಪ, ಶ್ರಮವನ್ನು ನೋಡಿ ನನಗೆ ಹೆಚ್ಚು ಹೆಮ್ಮೆ ಹಾಗು ಸಂತಸ ಆಗಿದೆ ‘ ಎಂದಿದ್ದರು.

ಸಂತಸದಿಂದ ‘ಅವರಿಗೆ ಸ್ಕೂಟರ್ ಮತ್ತು ಮನೆಯನ್ನು ನಿರ್ಮಾಣ ಮಾಡಿ ಕೊಡುವುದಾಗಿ ಆಶ್ವಾಸನೆ ನೀಡಿದ್ದೆ. ಅದರ ಭಾಗವಾಗಿ ಮೊದಲಿಗೆ 13 ಸ್ಕೂಟರ್‌ಗಳನ್ನು ನೀಡುವ ನನ್ನ ಮಾತನ್ನು ಪೂರೈಸಿದ್ದೇನೆ. ಎಲ್ಲ ಸ್ಕೂಟರ್‌ಗಳನ್ನು ತ್ರಿಚಕ್ರ ವಾಹನಗಳಾಗಿ ಪರಿವರ್ತಿಸಲಾಗುವುದು. ಅವರಿಗೆ, ಭರವಸೆ ನೀಡಿರುವ ಕಾರಣ ಅತಿ ಬೇಗವಾಗಿ ಮನೆಯನ್ನು ಕಟ್ಟಿಸಿ ಕೊಡುತ್ತೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಹಾಗು ಬೆಂಬಲ ಬೇಕು’ ಎಂದು ಬರೆದುಕೊಂಡಿದ್ದರು.

ನಟ ರಾಘವ ಲಾರೆನ್ಸ್‌ ಉಡುಗೊರೆಯಾಗಿ ನೀಡಿರುವ ಮಹೀಂದ್ರಾ 575 ಡಿ (Mahindra 575 DI) ಟ್ರಾಕ್ಟರ್ ವಿಶೇಷತೆಗಳ ಕುರಿತು ಹೇಳುವುದಾದರೆ, ಇದು ರೂ.6.80 ಲಕ್ಷದಿಂದ ರೂ.7.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 45 ಹೆಚ್‌ಪಿ – 2,730 ಸಿಸಿ ಡೀಸೆಲ್ ಎಂಜಿನ್ ಒಳಗೊಂಡಿದ್ದು, 8ಎಸ್+ 2ಆರ್ ಗೇರ್‌’ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. ಜೊತೆಗೆ ಡ್ರೈ ಡಿಸ್ಕ್ ಬ್ರೇಕ್ ಅನ್ನು ತನ್ನದಾಗಿಸಿಕೊಂಡಿದೆ. ಇದು ಒಬ್ಬ ಸಮಾಜದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ. ನಟ ರಾಘವ ಲಾರೆನ್ಸ್ ಅವರು ಕೇವಲ ಅವರ ಸಿನೆಮಾಗೆ ವಿಶೇಷ ಚೇತನ ವ್ಯಕ್ತಿಗಳನ್ನು ಬಳಸಿಕೊಂಡಿಲ್ಲ. ಅವರು ಅವರಿಗಾಗಿ ಏನಾದ್ರೂ ಮಾಡಲೇಬೇಕು ಎಂದು ಪಣ ತೊಟ್ಟಿದ್ದಾರೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!