ಮಳೆ ಇಲ್ಲದೆ ಬೆಳೆ ನಾಶವಾಗಿದೆ. ಇನ್ನು ಕೆಲವು ಸರ್ತಿ ಮಳೆ ಹೆಚ್ಚಿ ಬೆಳೆಹಾನಿ ಆಗಿದೆ. ಬೆಳೆಹಾನಿ ಆದ್ರೆ, ಅದಕ್ಕೆ ಹಣ ಜಮೆ ಆಗುತ್ತೇ. ಹೌದು 33 ಲಕ್ಷ ರೈತರಿಗೆ ₹11,000 ಬೆಳೆಹಾನಿ ಪರಿಹಾರ ಜಮೆ ಆಗಿದೆ. ಈ ಹಣ ರೈತರ ಖಾತೆಗೆ ಜಮೆ ಆಗಿದ್ಯಾ ಇಲ್ವ ಪರೀಕ್ಷೆ ಮಾಡಿಕೊಳ್ಳಿ.
ಕೇಂದ್ರ ಸರ್ಕಾರದಿಂದ ಬಂದ ಬರ ಪರಿಹಾರವನ್ನು (drought relief fund) ರೈತರ ಖಾತೆಗೆ ಬೇಗ ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾಡನಾಡಿರುವ ಕಂದಾಯ ಸಚಿವರು ಕೇಂದ್ರ ಸರ್ಕಾರದ 3,454 ಕೋಟಿ ರೂಪಾಯಿ ಕೊಟ್ಟಿದೆ, ಈಗಾಗಲೇ ರಾಜ್ಯ 33.60 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಜಮೆ ಆಗಿದೆ. ಪ್ರಸ್ತುತ ಕೇಂದ್ರ ಸರ್ಕಾರದಿಂದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಪ್ರತಿ ರೈತರಿಗೆ 11,000 ಹಣ ಜಮಾ ಮಾಡಲಾಗುವುದು. ಕೇಂದ್ರ ಸರ್ಕಾರದಿಂದ ಬಂದ ಪೂರ ಹಣವನ್ನು ರೈತರಿಗೆ ನೀಡಲಾಗುವುದು. ಕುಡಿಯುವ ನೀರು, ಜಾನುವಾರುಗಳ ಮೇವು ಇದ್ಯಾವುದಕ್ಕೂ ಈ ಹಣವನ್ನು ಉಪಯೋಗ ಮಾಡುವುದಿಲ್ಲ. ಅದನ್ನು ರಾಜ್ಯದ ಬೊಕ್ಕಸದಿಂದಲೇ ನಿಭಾಯಿಸಬಹುದು.
ಹಣ ಖಾತೆಗೆ ಜಮೆ ಆಗಿರುವುದನ್ನು ಪರೀಕ್ಷೆ ಮಾಡುವ ವಿಧಾನ :-
ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಮತ್ತು FID ಫ್ರೂಟ್ಸ್ ತಂತ್ರಾಂಶದಲ್ಲಿ ಇರುವ ಅಂಕಿ ಅಂಶಗಳ ಆಧಾರದ ಮೇಲೆ ಬೆಳೆ ಪರಿಹಾರದ ದುಡ್ಡನ್ನು ನೇರವಾಗಿ ರೈತರ ಬ್ಯಾಂಕ್ ಅಕೌಂಟ್’ಗೆ ಜಮೆ ಮಾಡಲಾಗುತ್ತದೆ. ರೈತರು ಅವರ ಜಮೀನಿನ ನಿಖರವಾದ ವಿಸ್ತೀರ್ಣವನ್ನು FID ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ – ಪಹಣಿ ಜೋಡಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹಿಂದೆಯಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ. ಅದಕ್ಕೆ, ಅನುಸಾರವಾಗಿ ಪರಿಹಾರದ ಹಣ ಕೊಡುವ ವ್ಯವಸ್ಥೆ ಇತ್ತು.
ಸರ್ಕಾರ 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಲೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು FID ಫ್ರೂಟ್ಸ್’ನಲ್ಲಿ ನೋಂದಾವಣೆ ಆಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಸಾರವಾಗಿ ನೇರವಾಗಿ ರೈತರ ಬ್ಯಾಂಕ್ ಅಕೌಂಟ್’ಗೆ ಹಣ ಜಮಾ ಮಾಡಲಾಗುವುದು. ಅದರಿಂದ, ರೈತರು ಅವರ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟು ಹೋಗದಂತೆ ಎಲ್ಲಾ ಸರ್ವೇ ನಂಬರ್’ಗಳನ್ನು ನೋಂದಾವಣೆ ಮಾಡಿಸಿಕೊಳ್ಳಲು ಹೇಳಲಾಗಿದೆ.https://fruitspmk.karnataka.gov.in/MISReport/FarmerDeclarationReport.aspx
ಮೊದಲಿಗೆ ಮೇಲೆ ಹೇಳಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಇರುವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ವೀಕ್ಷಿಸು ಮೇಲೆ ಕ್ಲಿಕ್ ಮಾಡಿ.
ನಂತರ ಒಂದು FID ಫ್ರೂಟ್ಸ್ ತಂತ್ರಾಂಶ ಇರುವ ರೈತರ ಪಟ್ಟಿ ಪ್ರಕಟವಾಗುತ್ತದೆ. ಅದರಲ್ಲಿ ಯಾವ ರೈತರ ಹೆಸರು ಇರುತ್ತದೆಯೋ ಅವರಿಗೆ ಬೆಳೆಹಾನಿ ಪರಿಹಾರ ಸಿಗುತ್ತದೆ.
ಹಣ ಖಾತೆಗೆ ಜಮಾ ಆಗಿದ್ದರೆ ಅದರ ಸ್ಟೇಟಸ್ ಈ ರೀತಿ ಪರೀಕ್ಷೆ ಮಾಡಿ :-
https://parihara.karnataka.gov.in/service89/PaymentDetailsReport.aspx
ಮೊದಲಿಗೆ ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಇರುವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಪೇಮೆಂಟ್ ಸಕ್ಸಸ್ ಕೇಸ್ಸ್ (payment success cases) ಸೆಲೆಕ್ಟ್ ಮಾಡಿ. ಗೆಟ್ ರಿಪೋರ್ಟ್ಸ್ (get reports) ಮೇಲೆ ಕ್ಲಿಕ್ ಮಾಡಿದರೆ. ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರಕುತ್ತದೆ. ನಂತರ ವ್ಯೂ ಸ್ಟೇಟಸ್ (view status) ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ಸಿಗುತ್ತದೆ.