ಎನ್ ಜೆ ದೇವರಾಜರೆಡ್ಡಿ ಅಂತರ್ಜಲ ತಜ್ಞ ಇವರು ಜಿಯೊ ರೇನ್ ವಾಟರ್ ಬೋರ್ಡ್ ನ ಮುಖ್ಯಸ್ಥರು ಆಗಿದ್ದರು. ಇವರು ಸುಮಾರು ರಾಜ್ಯಾದ್ಯಂತ 20000 ಕ್ಕೂ ಅಧಿಕ ಬೋರ್ ವೆಲ್ ಕೊರೆಸಿದ್ದಾರೆ. ಹತ್ತಿರದಲ್ಲಿರುವ ಬೋರ್ವೆಲ್ ಇನ್ನೊಂದು ಬೋರ್ವೆಲ್ ಗೆ ಲಿಂಕ್ ಆಗುತ್ತದೆಯಾ ಎಂಬ ಪ್ರಶ್ನೆ ಹಲವು ರೈತರಲ್ಲಿದೆ. ರೈತರ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿ ನೋಡೋಣ
ರೈತರಿಗೆ ಬೋರ್ವೆಲ್ ಗೆ ಇನ್ನೊಂದು ಬೋರ್ವೆಲ್ ಲಿಂಕ್ ಆದರೆ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ನಮ್ಮ ಪಕ್ಕದ ಜಮೀನಿನಲ್ಲಿ ಬೋರ್ ಹಾಕಿಸುತ್ತಿದ್ದಾರೆ ಎಂದರೆ ಭಯವಾಗುತ್ತದೆ, ನಮ್ಮ ಬೋರ್ ಡ್ರೈ ಆಗುತ್ತದೆ ಎಂಬ ಯೋಚನೆ ಬರುತ್ತದೆ. ತಜ್ನರ ಪ್ರಕಾರ ನಮ್ಮ ಕರ್ನಾಟಕ ರಾಜ್ಯದಲ್ಲಿ ಭೂಮಿಯ ಒಳಗೆ ಅಗ್ನಿ ಶಿಲೆಯಿಂದ ಆಗಿರುವ ಪ್ರದೇಶಗಳು, ಜಲಜಶಿಲೆಯಿಂದ ಆಗಿರುವ ಪ್ರದೇಶಗಳು ಇವೆ, ರೂಪಾಂತರ ಶಿಲೆಗಳಿಂದ ಆಗಿರುವ ಪ್ರದೇಶಗಳಿವೆ.
ಗಟ್ಟಿ ಶೀಲಾವಲಯ ಪ್ರದೇಶದಲ್ಲಿ ಮೊದಲೆಲ್ಲಾ 50 ರಿಂದ 60 ಅಡಿ ಗೆ ಸಿಗುವ ನೀರು ಇತ್ತೀಚಿನ ದಿನಗಳಲ್ಲಿ ವಾಟರ್ ಸಾಮರ್ಥ್ಯ ಕಡಿಮೆ ಆಗಿದೆ ಹೀಗಾಗಿ ಪಕ್ಕದ ಜಮೀನಿನಲ್ಲಿ ಇರುವ ಬೋರ್ ಗೆ ನಮ್ಮ ಬೋರ್ ಲಿಂಕ್ ಆದರೆ ಈ ಬೋರ್ ನ ನೀರು ಫೇಲ್ಯೂರ್ ಆಗುತ್ತದೆ ಎಂಬ ಯೋಚನೆ ಬರುತ್ತದೆ.
ತಜ್ನರ ಪ್ರಕಾರ ಉದಾಹರಣೆಗೆ ವಿಜಯಪುರ ಜಿಲ್ಲೆಯಲ್ಲಿ ಒಬ್ಬ ರೈತ ಅವನ ಬಳಿ ಹತ್ತು ಎಕರೆ ಜಮೀನಿದೆ ಎಂಭತ್ತರ ದಶಕದಲ್ಲಿ ಬೋರ್ ಕೊರೆಸುತ್ತಾರೆ ಎಂಭತ್ತರ ದಶಕದಲ್ಲಿ ನೂರು ಅಡಿಗೆ ನಾಲ್ಕು ಇಂಚು ನೀರು ಬರುತ್ತದೆ ನಂತರ 2000 ನೇ ಇಸವಿಯಲ್ಲಿ ಮತ್ತೊಂದು ಬೋರ್ವೆಲ್ ಕೋರೆಸುತ್ತಾರೆ ನಾನೂರು ಅಡಿಗೆ ನೀರು ಬರುತ್ತದೆ ನಂತರ 2005ನೆ ಇಸವಿಯಲ್ಲಿ ಮತ್ತೊಂದು ಬೋರ್ ಕೊರೆಸಿ 800 ಅಡಿ ಆಳಕ್ಕೆ ಹೋಗುತ್ತಾರೆ 2023ರಲ್ಲಿ 1500 ಅಡಿ ಆಳಕ್ಕೆ ಹೋಗುತ್ತಾರೆ. ಒಂದೊಂದು ಕೊಳವೆ ಬಾವಿಯಲ್ಲಿ ಡಿಫರೆಂಟ್ ಡೆಪ್ತನಲ್ಲಿ ನೀರು ಬರುತ್ತದೆ.
ಕೆಲವು 1500 ಆಳದಲ್ಲಿ ನೀರು ಬರಬಹುದು ಈ ಬೋರ್ವೆಲ್ ಪಕ್ಕ ಇರುವ ಬೋರ್ ವೆಲ್ ನಲ್ಲಿ 80 ಅಡಿಗೆ ನೀರು ಬಂದರುವ ನಿದರ್ಶನಗಳಿವೆ. ಕೆಲವೊಬ್ಬರು ನಮ್ಮ ಜಮೀನಿನ ಪಕ್ಕದ ಬೋರ್ವೆಲ್ ನಲ್ಲಿ 6 ಇಂಚು ನೀರು ಬರುತ್ತದೆ ಆ ಬೋರ್ವೆಲ್ ಗೆ ಲಿಂಕ್ ಕೊಡಿ ಎಂದು ಕೇಳುತ್ತಾರೆ ಆದರೆ ಇನ್ನೊಂದು ಬೋರ್ವೆಲ್ ಗೆ ಲಿಂಕ್ ಕೋಡಲು ಸಾಧ್ಯವಿಲ್ಲ ಏಕೆಂದರೆ ಈ ಜಲವೆ ಬೇರೆ ನಿಮ್ಮ ಜಲವೆ ಬೇರೆ, ಕಲ್ಲಿನ ಸೀಳು ಹಾಗೂ ಬಿರುಕುಗಳಲ್ಲಿ ಸಂಗ್ರಹವಾಗಿರುವ ಜಲವನ್ನು ಅಂತರ್ಜಲ ಎಂದು ಕರೆಯುತ್ತಾರೆ.
ಬಾದಾಮಿ, ಬನಶಂಕರಿ ಜಲಜಶಿಲೆ ಇರುವ ಪ್ರದೇಶದಲ್ಲಿ ಎಲ್ಲ ಕಡೆ ಒಂದೆ ರೀತಿಯ ಕಲ್ಲುಗಳು ಇರುವ ಪ್ರದೇಶದಲ್ಲಿ ಎಲ್ಲಿ ಬೋರ್ ಕೊರೆದರೂ 80 ಅಡಿಗೆ ನೀರು ಬರುತ್ತದೆ ಅಂತಹ ಪ್ರದೇಶದಲ್ಲಿ ಕೆಲವು ಕೊಳವೆ ಬಾವಿಗಳು ಲಿಂಕ್ ಆಗಬಹುದು ನೂರಕ್ಕೆ 5 ಪರ್ಸೆಂಟ್ ಲಿಂಕ್ ಆಗುತ್ತದೆ. ನಮ್ಮ ಜಮೀನಿನಲ್ಲಿ ಕೊರೆದ ಬೋರವೆಲ್ ಗೆ ಪಕ್ಕದ ಜಮೀನಿನಲ್ಲಿ ಕೊರೆದ ಬೋರವೆಲ್ ಲಿಂಕ್ ಆಗುತ್ತದೆ ಎನ್ನುವುದನ್ನು ಬಿಟ್ಟು ನಮ್ಮ ಜಮೀನಿನ ಬೋರ್ವೆಲ್ ಗೆ ಬರಪೂರ ಮಳೆ ನೀರು ತುಂಬಿಸುವ ಕೆಲಸ ಮಾಡಬೇಕು. ನಾವು ಭೂಮಿಯಿಂದ ಎಷ್ಟು ನೀರು ತೆಗೆಯುತ್ತೇವೆ ಅದರ ನಾಲ್ಕು ಪಟ್ಟು ನೀರನ್ನು ತುಂಬುವ ಕೆಲಸ ಮಾಡಿದರೆ ಜಮೀನಿಗೆ ನೀರಿನ ಸಮಸ್ಯೆ ಬರುವುದಿಲ್ಲ. ಭೂಮಿಯಲ್ಲಿ ಅಂತರಜಾಲ ಮಟ್ಟ ಕುಸಿದ್ದಾಗ ಜಮೀನಿನಲ್ಲಿ ನೀರಿನ ಸಮಸ್ಯೆ ಬರುತ್ತದೆ, ಬೋರವೆಲ್ ಲಿಂಕ್ ಆಗುವ ಸಂಭವವಿದೆ. ಭೂಮಿಯಲ್ಲಿ ಜಲಸ್ತರವನ್ನು ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕು.
ನಮ್ಮ ಕರ್ನಾಟಕ ರಾಜ್ಯದಲ್ಲಿ ಬೋರವೆಲ್ ಕೊರೆದ ಪ್ರಾರಂಭಿಕ ಹಂತದಲ್ಲಿ ಒಂದು ಕೊಳವೆ ಬಾವಿಯಿಂದ 800 ಅಡಿ ದೂರದಲ್ಲಿ ಇನ್ನೊಂದು ಬೋರವೆಲ್ ಇರಬಾರದು ಎಂಬ ರೂಲ್ಸ್ ಇತ್ತು ಕ್ರಮೇಣ ಈ ಕಾನೂನನ್ನು ಬ್ರೇಕ್ ಮಾಡಿಲಾಯಿತು ಹತ್ತಿರ ಹತ್ತಿರದಲ್ಲಿ ಬೋರ್ವೆಲ್ ಗಳನ್ನು ಕೊರೆಯಲಾಯಿತು. ಒಂದು ಬೋರ್ವೆಲ್ ಇನ್ನೊಂದು ಬೋರವೆಲ್ ಗೆ 6 ಅಡಿ ಅಂತರವಿರುತ್ತದೆ ಆದರೂ ಒಂದು ಬೋರವೆಲ್ ನಲ್ಲಿ 300 ಅಡಿ ಆಳಕ್ಕೆ 4 ಇಂಚು ನೀರು ಬಂದರೆ ಇನ್ನೊಂದು ಬೋರವೆಲ್ ನಲ್ಲಿ 1000 ಅಡಿ ಆಳದಲ್ಲಿ ಒಂದು ವರೆ ಇಂಚು ನೀರು ಬಂದಿದೆ ಹೀಗಾಗಿ ಪ್ರತಿ ಬೋರವೆಲ್ ಗು ಅದರದೆ ಆದ ಜಲಸ್ತರದ ರಚನೆಯಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.