ಕರ್ನಾಟಕ ಸರ್ಕಾರ ಗೃಹಜ್ಯೋತಿ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಗೃಹಜ್ಯೋತಿ ಯೋಜನೆಯ ಕೆಳಗೆ ನೊಂದಾಯಿಸಿಕೊಂಡಿದ್ದರು ಕರೆಂಟ್ ಬಿಲ್ ಬರ್ತಾ ಇದ್ಯಾ, ಈ ಟ್ರಿಕ್ಸ್ ಅನುಕರಣೆ ಮಾಡಿ ಗೃಹ ಜ್ಯೋತಿ ಅಡಿಯಲ್ಲಿ ಉಚಿತ ಕರೆಂಟ್ಪ ಡೆದುಕೊಳ್ಳುತ್ತಿದ್ದರು ಯೂನಿಟ್ ಜಾಸ್ತಿ ಬಳಕೆ ಆಗ್ತಿದ್ಯಾ?, ಹಾಗಾದ್ರೆ ಈ ಟ್ರಿಕ್ ಬಳಸಿ ನೋಡಿ ವಿದ್ಯುತ್ ಬಿಲ್ ಬಾರದೆ ಇರುವ ಹಾಗೆ ಮಾಡಿಕೊಳ್ಳಿ.
ಅದೇಷ್ಟೋ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಿಗೆ, ಪ್ರತಿ ತಿಂಗಳು ಪ್ರಾರಂಭವಾಗಿ ಕಳೆಯುವ ಹೊತ್ತಿಗೆ, ಆ ತಿಂಗಳಿನ ಬಿಲ್ಲು ಪಾವತಿ ಮಾಡುವುದರಲ್ಲಿಯೇ ಬದುಕು ಕಳೆದು ಹೋಗುತ್ತದೆ. ಮೊದಲಿಗೆ, ಈ ವಿದ್ಯುತ್ ಬಿಲ್ (Electricity Bill) ಎನ್ನುವುದೇ ಎಲ್ಲರ ಜೆಬಿಗೆ ಕತ್ತರಿ ಹಾಕುವುದು. ಪ್ರತಿ ತಿಂಗಳು ₹1,000 – ₹2,000 ಗಳನ್ನು ಅದಕ್ಕೆ ಪಾವತಿ ಮಾಡಬೇಕು. ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯ ಕೆಳಗೆ ಸಾಕಷ್ಟು ಕುಟುಂಬಕ್ಕೆ ಫ್ರೀ ವಿದ್ಯುತ್ (Free Electricity) ದೊರಕುವಂತೆ ಅನುವು ಮಾಡಿಕೊಟ್ಟಿದೆ ಆದರೂ, ಈ ಬೇಸಿಗೆ ಧಗೆ ಹೆಚ್ಚು ಯೂನಿಟ್ ಖರ್ಚು ಮಾಡುವಂತೆ ಮಾಡಿದೆ.
ಯಾಕೆಂದರೆ ನಾವು ಎಸಿ, ಕೂಲರ್, ಫ್ಯಾನ್ ( AC, Cooler, Fan ) ಉಪಯೋಗ ಮಾಡುವುದನ್ನು ಹೆಚ್ಚು ಮಾಡಿದ್ದೇವೆ. 200 ಯೂನಿಟ್’ಗಿಂತ ಹೆಚ್ಚಿಗೆ ಕರಂಟ್ ಉಪಯೋಗ ಮಾಡಿದರೆ ಸರ್ಕಾರದಿಂದ ಸಿಗುವ ಗೃಹಜ್ಯೋತಿ ಯೋಜನೆಯ ಪ್ರಯೋಜನ ಕೂಡ ಸಿಗುವುದಿಲ್ಲ. ಅದರಿಂದ, ಮನೆಯಲ್ಲಿ ಬಳಕೆ ಮಾಡುವ ಕರೆಂಟ್ ಮೇಲೆ ನಿಯಂತ್ರಣ ಹೇರುವುದು ತುಂಬ ಉತ್ತಮ.
ಕರಂಟ್ ಉಳಿತಾಯ ಮಾಡುವುದಕ್ಕೆ ಈ ರೀತಿ ಮಾಡಿ – Save Electricity
ಅಗತ್ಯ ಇಲ್ಲದ ಸಂದರ್ಭದಲ್ಲಿ ಎಲ್ಲಾ ಎಲೆಕ್ಟ್ರಿಕ್ ಡಿವೈಸ್ ಸ್ವಿಚ್ ಆಫ್ ( electric devices switch off ) ಮಾಡಿ. ಸಾಧ್ಯವಾದಷ್ಟು ಕಿಟಕಿ ಬಾಗಿಲುಗಳನ್ನು ತೆರೆದು ಗಾಳಿ ಬೆಳಕು ರೋಮ್ ಒಳಗೆ ಪ್ರವೇಶ ಮಾಡುವಂತೆ ನೋಡಿಕೊಳ್ಳಿ. ಮನೆಯಿಂದ ಹೊರಗೆ ಹೋಗುವ ಮುನ್ನ ಟಿವಿ, ಫ್ರಿಡ್ಜ್ ಮತ್ತು ಬೇರೆ ಎಲೆಕ್ಟ್ರಿಕಲ್ ಡಿವೈಸ್ ಸ್ವಿಚ್ ಆಫ್ ಮಾಡುವುದನ್ನು ಮರೆಯದಿರಿ.
ಒಂದು ವೇಳೆ ಟಿವಿ ನೋಡದೆ ಇದ್ದಾಗ ಟಿವಿ ಸ್ವಿಚ್ ಆನ್ ಮಾಡಿರುವುದು ಇಲ್ಲವೇ ರೂಮ್ ಒಳಗೆ ಇಲ್ಲದೆ ಇರುವಾಗಲೂ ಫ್ಯಾನ್ ಸ್ವಿಚ್ ಆನ್ ಮಾಡಿರುವುದು ಇದರೊಂದಿಗೆ ಲ್ಯಾಪ್ಟಾಪ್, ಮೊಬೈಲ್ ಚಾರ್ಜರ್ಗಳನ್ನು ಆನ್ ಮಾಡಿ ಇಡುವುದು. ಈ ರೀತಿ ಮಾಡುವುದರಿಂದ, ಕರಂಟ್ ಜಾಸ್ತಿ ಆಗುತ್ತೆ ಇದರ ಬಗ್ಗೆ ಗಮನ ಕೊಡಿ.
ಟ್ರಿಪ್ ಇಲ್ಲವೇ ಇನ್ನೊಂದು ಕಾರಣಕ್ಕೆ ಮನೆಯಿಂದ ಹೊರಗೆ ಹೋಗುವಾಗ ಎಲ್ಲಾ ಲೈಟ್’ಗಳನ್ನು ಆಫ್ ಮಾಡಲು ಮರೆಯಬೇಡಿ. ತುಂಬಾ ಹಳೆ ಕಾಲದ ಬಲ್ಬ್ ಅನ್ನು ಇನ್ನು ಉಪಯೋಗ ಮಾಡುತ್ತಿದ್ದರೆ. ಅದನ್ನು, ಎಲ್ಇಡಿ ಲೈಟ್’ಗೆ ಬದಲಾವಣೆ ಮಾಡಿ. ಇದು, ಅಧಿಕ ಕರಂಟ್ ಉಳಿತಾಯ ಮಾಡುತ್ತದೆ.
ಅತ್ಯುತ್ತಮ ಗುಣಮಟ್ಟದ AC ಖರೀದಿಸಿ. ಇದು, ತುಂಬ ಬಿಸಿಲು ಇರುವ ಕಾಲ ಆಗಿರುವುದರಿಂದ, ಗೀಸರ್ ಅನ್ನು ಹೆಚ್ಚಾಗಿ ಬಳಸುವ ಅಗತ್ಯ ಇಲ್ಲ ಸ್ನಾನ ಮಾಡುವ ಮೊದಲು 5 ನಿಮಿಷ ಗೀಸರ್ ಸ್ವಿಚ್ ಹಾಕಿ ಮತ್ತೆ ಆಫ್ ಮಾಡಲು ಮರೆತಿರುತ್ತಾರೆ. ಇದರಿಂದ, ಅತಿ ಹೆಚ್ಚು ವಿದ್ಯುತ್ ಬಳಕೆ ಆಗುತ್ತದೆ.
ಬೇಸಿಗೆ ಕಾಲ ಆಗಿರುವ ಕಾರಣ ಅತಿಯಾಗಿ ಬಿಸಿನೀರು ಸ್ನಾನ ಮಾಡುವುದು ಚರ್ಮಕ್ಕೂ ಕೂಡ ಒಳ್ಳೆಯದಲ್ಲ. ಹಾಗಾಗಿ, ಆದಷ್ಟು ಉಗುರು ಬೆಚ್ಚಗೆ ಇರುವ ನೀರಿನಲ್ಲಿ ಸ್ನಾನ ಮಾಡಿ. ಆದ್ದರಿಂದ, ಗೀಸರ್’ಗೆ ಬಳಕೆಯಾಗುವ ಕರಂಟ್ ಉಳಿತಾಯ ಆಗುತ್ತದೆ. ಒಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕರಂಟ್ ಉಪಯೋಗ ಮಾಡಿದರೆ 200 ಯೂನಿಟ್’ಗಿಂತ ಕಡಿಮೆ ಕರಂಟ್ ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆ ಕೆಳಗೆ ಉಚಿತ ಕರೆಂಟ್ ಪಡೆಯಬಹುದು.