ನೀರಿಗೆ ಬವಣೆ ಶುರುವಾಗಿದೆ, ಎಲ್ಲೂ ನೀರು ಸಿಗದೇ ಹೋದರೆ ಜನರು ಮೋರೆ ಹೋಗುವುದೇ ಬೋರ್ ವೆಲ್ ಪಾಯಿಂಟ್ ಮಾಡುವುದಕ್ಕೆ. ಆದರೆ, ಬೋರ್ ವೆಲ್ ಫೇಲ್ ಆಗಲು ಇನ್ನೊಂದು ಕಾರಣ ಕೂಡ ಇದೆ ಅದೇ ಡ್ರೈ ಗ್ಯಾಪ್ / ಗಾಳಿ ಸೆಲೆ (Dry gap)
ಮೊದಲಿಗೆ ಬೋರ್ ವೆಲ್ ಪಾಯಿಂಟ್ ಮಾಡುವಾಗ ಎರಡು ರೀತಿಯ ಸೆಲೆಗಳು ಸಿಗುತ್ತದೆ. ಅದರಲ್ಲಿ, ಒಂದು ನೀರಿನ ಸೆಲೆ ಮತ್ತೊಂದು ಗಾಳಿ ತುಂಬಿರುವ ಸೆಲೆ. ( ಡ್ರೈ ಗ್ಯಾಪ್) ಇದರ ವ್ಯತ್ಯಾಸ ಸರಿಯಾಗಿ ತಿಳಿಯದೇ ಬೋರ್ ವೆಲ್ ಪಾಯಿಂಟ್ ಮಾಡಿದರೆ ಅದು ಫೇಲ್ ಆಗುತ್ತದೆ. ಇದನ್ನು ಪಾಯಿಂಟ್ ಮಾಡುವ ವ್ಯಕ್ತಿ ತಿಳಿದಿರಬೇಕು ಅದರ ಸಂಪೂರ್ಣ ಮಾಹಿತಿ ಅವರಿಗೆ ತಿಳಿದಿದ್ದರೆ ಮಾತ್ರ ಬೋರ್ ವೆಲ್ ಯಶಸ್ವಿಯಾಗುತ್ತದೆ ಮತ್ತು ಫೇಲ್ಯೂರ್ ಆಗುವುದನ್ನು ತಡೆಯಬಹುದು.
ಭೂಮಿಯಲ್ಲಿ ಎರಡು ಬಂಡೆಗಳ ಬಿರುಕಿನ ನಡುವೆ ಇರುವ ಜಾಗದಲ್ಲಿ ನೀರಿನ ಸೆಲೆ ಹರಿಯುವಂತೆ ಇದ್ದರೆ ಆಲ್ಲಿ ನೀರು ಸಿಗುತ್ತದೆ. ಒಂದು ವೇಳೆ ಅದೇ ಬಿರುಕಿನಲ್ಲಿ ಖಾಲಿ ಜಾಗ ಇದ್ದರೆ ಆಲ್ಲಿ ಬಿಸಿಯಾದ ಗಾಳಿ ಇರುತ್ತದೆ.
ಗಾಳಿ ಕೂಡ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಸರಿಸುತ್ತದೆ. ಆ ಜಾಗದಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಎನರ್ಜಿ (electro magnetic energy ) ಸೃಷ್ಟಿ ಆಗುತ್ತದೆ. ನೀರು ಪಾಯಿಂಟ್ ಮಾಡಲು ಬಳಕೆ ಮಾಡುವ ಯಾವುದೇ ವಸ್ತು ತೆಂಗಿನಕಾಯಿ, ಕಬ್ಬಿಣದ ರಾಡ್, ಮೆಷಿನ್ ಯಾವುದನ್ನು ಬಳಸಿ ಬೋರ್ ವೆಲ್ ಪಾಯಿಂಟ್ ಮಾಡಲು ಹೋದರು ಅದು, ಎರಡು ಸೆಲೆಗಳ ಮೇಲೆ ಕೂಡ ರಿಯಾಕ್ಟ್ ಮಾಡುತ್ತದೆ.
ಆದರೆ, ಅದು ಹೆಚ್ಚು ರಿಯಾಕ್ಷನ್ ತೋರುವುದು ಗಾಳಿ ಸೆಲೆ ( ಡ್ರೈ ಗ್ಯಾಪ್ ) ಇರುವ ಕಡೆ. ನೀರಿನ ವೇಗಕ್ಕಿಂತ ಗಾಳಿಯ ವೇಗ ಹೆಚ್ಚಾಗಿ ಇರುವ ಕಾರಣ ಈ ರೀತಿ ಆಗುತ್ತದೆ. ಗಾಳಿ ಸೆಲೆ ಮತ್ತು ನೀರಿನ ಸೆಲೆ ಬಗ್ಗೆ ಸಂಪೂರ್ಣ ಮಾಹಿತಿ ಇರದ ವ್ಯಕ್ತಿ, ಮಾಡುವ ಬೋರ್ ವೆಲ್ ಪಾಯಿಂಟ್ ಶೇಖಡಾ 90% ಫೇಲ್ಯೂರ್ ಆಗುತ್ತದೆ.
ಅವರ ನಿರ್ಧಾರ ತಪ್ಪಾಗಿ ಇರುತ್ತದೆ. ಗಾಳಿ ಸಂಚಾರ ವೇಗವಾಗಿ ಇರುವ ಕಾರಣ ತೆಂಗಿನಕಾಯಿ ವೇಗವಾಗಿ
ತಿರುಗುತ್ತದೆ. ಅದೇ, ನೀರಿನ ವೇಗ ಕಡಿಮೆ ಇರುವ ಕಾರಣ ತೆಂಗಿನಕಾಯಿ ತಿರುಗುವುದು ಕೂಡ ಸ್ವಲ್ಪ ನಿಧಾನವೇ. ಅದನ್ನು, ಸೂಕ್ಷ್ಮ ಮತಿಯಿಂದ ಗಮನಿಸಿ ಬೋರ್ ವೆಲ್ ಪಾಯಿಂಟ್ ಮಾಡಬೇಕು. ಇಲ್ಲದೆ ಹೋದರೆ ಅದು ಯಶಸ್ವಿ ಆಗುವುದಿಲ್ಲ.