ಕರ್ನಾಟಕ ಅಂಚೆ ವೃತ್ತದಲ್ಲಿ ಇರುವ 5731 ಮಲ್ಟಿ ಟಾಕಿಂಗ್ ಸ್ಟಾಫ್ ( MTS ), ಪೋಸ್ಟ್ ಮ್ಯಾನ್ ಹಾಗು ಬೇರೆ ಬೇರೆ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದಿಂದ ಅಂಚೆ ಇಲಾಖೆಯಲ್ಲಿ ಶೀಘ್ರದಲ್ಲಿಯೇ  ಬೃಹತ್ ನೇಮಕಾತಿ ಆರಂಭವಾಗಲಿದೆ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು :- ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟಲ್ ಅಸಿಸ್ಟೆಂಟ್, ಮೇಲ್ ಗಾರ್ಡ್ ಸೇರಿದಂತೆ ಒಟ್ಟು 98,083 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕದ 5,731 ಹುದ್ದೆಗಳು ಸೇರಿವೆ, ಆಸಕ್ತಿ ಇರುವ ಅಭ್ಯರ್ಥಿಗಳು ವೆಬ್ಸೈಟ್’ನಲ್ಲಿ ತಿಳಿಸಿರುವ ವಿದ್ಯಾರ್ಹತೆ ಮತ್ತು ಷರತ್ತುಗಳನ್ನು ಪಾಲನೆ ಮಾಡಬೇಕು.

ಹುದ್ದೆಗಳ ವಿವರ :-
ಒಟ್ಟು ಹುದ್ದೆಗಳು :- 98,083 ಹುದ್ದೆಗಳು.
ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು :- 5,731.
ಕರ್ನಾಟಕದ ಬೇರೆ ಬೇರೆ ಖಾಲಿ ಹುದ್ದೆಗಳ ಹಂಚಿಕೆ :-
ಮಲ್ಟಿ ಟಾಸ್ಕಿಂಗ್ ಸ್ಟಾಫ್ :- 1,754 ಪೋಸ್ಟ್ ಖಾಲಿ ಇದೆ.
ಪೋಸ್ಟ್ ಮ್ಯಾನ್ :- 3,887 ಪೋಸ್ಟ್ ಖಾಲಿ ಇದೆ.
ಮೇಲ್ ಗಾರ್ಡ್ :- 90 ಪೋಸ್ಟ್ ಖಾಲಿ ಇದೆ.

ಮಾಸಿಕ ವೇತನ :-
ಕೇಂದ್ರ ಸರ್ಕಾರದ ನಿಯಮಗಳ ಅನುಸಾರ ವೇತನವನ್ನು ಮತ್ತು ಭತ್ಯೆಗಳನ್ನು ಕೊಡಲಾಗುತ್ತದೆ.

ವಿದ್ಯಾರ್ಹತೆ :-ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆ ದಿನಾಂಕದ ಒಳಗಾಗಿ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಿಂದ 10ನೇ ತರಗತಿ, ಪಿಯುಸಿ ಮತ್ತು ಪದವಿಯನ್ನು ಮುಗಿಸಿರಬೇಕು.

ವಯಸ್ಸಿನ ಮಿತಿ :-ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಟ 35 ವರ್ಷ ಪೂರ್ಣ ಆಗಿರಬೇಕು.
ಎಸ್ಸಿ, ಎಸ್ಟಿ ( SC/ ST ) ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ :-ಜಿಎಂ, ಒಬಿಸಿ, ಈಡಬ್ಲ್ಯೂಎಸ್ ( GM/ OBC/ EWS ) ₹100/-
ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ( SC/ ST / PWD ) ಈ ಪಂಗಡಕ್ಕೆ ಸೇರಿದವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪೇ ಮಾಡಬೇಕಾಗುತ್ತದೆ.

ಆಯ್ಕೆ ಮಾಡುವ ವಿಧಾನ :-ಹತ್ತನೇ ತರಗತಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮಾಡಿ ಅದರಿಂದ, ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಹಾಕುವುದು ಹೇಗೆ :-ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಕೆಳಗೆ ನೀಡಿರುವ ವೆಬ್ಸೈಟ್’ಗೆ ಭೇಟಿ ನೀಡಿ.https://www.indiapost.gov.in
ಮೇಲೆ ತಿಳಿಸಿರುವ ವೆಬ್ಸೈಟ್’ನಲ್ಲಿ ನಿಗದಿಪಡಿಸಿದ ದಿನಾಂಕಗಳಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ವೀಡಿಯೋ ರೆಫರ್ ಮಾಡಿ.

By

Leave a Reply

Your email address will not be published. Required fields are marked *