ಮನೆ ಕಟ್ಟುವುದು ಪ್ರತಿಯೊಬ್ಬರಿಗಿರುವ ಒಂದು ಮುಖ್ಯ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡಿಕೊಳ್ಳುವುದು ಈಗಿನ ಕಾಲದಲ್ಲಿ ಅಷ್ಟು ಸುಲಭವಲ್ಲ. ಮನೆ ನಿರ್ಮಾಣದ ವಸ್ತುಗಳು ದುಬಾರಿಯಾಗಿದ್ದು ಹಾಗೂ ಲೇಬರ್ ಚಾರ್ಜ್ ಕೂಡ ಹೆಚ್ಚಾಗಿರುವುದರಿಂದ ಮನೆ ಕಟ್ಟುವುದು ಸುಲಭದ ಮಾತಲ್ಲ. ಕೆಲವು ಬ್ಯಾಂಕಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಹಾಗಾದರೆ ಯಾವ ಬ್ಯಾಂಕನಿಂದ ಎಷ್ಟು ಬಡ್ಡಿ ದರದಲ್ಲಿ ಎಷ್ಟರವರೆಗೆ ಸಾಲ ಸಿಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ
ಕೆಲವರು ಬ್ಯಾಂಕ್ ನಲ್ಲಿ ಸಾಲ ಪಡೆಯುವ ಮೂಲಕ ತಮ್ಮ ಮನೆ ಕಟ್ಟುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಹೆಚ್ಚು ಬಡ್ಡಿ ದರದಲ್ಲಿ ಸಾಲ ಪಡೆದರೆ ಮನೆ ಕಟ್ಟಲು ಸಾಧ್ಯ ಆದರೆ ಸಾಲ ತೀರಿಸಲಾಗದೆ ಜೀವನ ಪೂರ್ತಿ ಸಾಲ ತೀರಿಸುವುದರಲ್ಲಿಯೆ ಕಳೆಯಬೇಕಾಗುತ್ತದೆ. ಅನೇಕ ಪ್ರತಿಷ್ಠಿತ ಬ್ಯಾಂಕಗಳಿಂದ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಕೊಡುತ್ತವೆ. ಸಾಲ ಪಡೆಯುವುದಾದರೆ ಯಾವ ಬ್ಯಾಂಕ್ ನಿಂದ ಎಷ್ಟು ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಈ ಬ್ಯಾಂಕ್ 8.40% ರಿಂದ 10.65% ಬಡ್ಡಿದರದಲ್ಲಿ 30 ಲಕ್ಷ ರೂಪಾಯಿವರೆಗೆ ಅಥವಾ 30 ಲಕ್ಷಕ್ಕಿಂತ ಹೆಚ್ಚು ಸಾಲ ನೀಡುತ್ತದೆ. ಈ ಬ್ಯಾಂಕ್ 8.40% ರಿಂದ 10.90% ಬಡ್ಡಿದರದಲ್ಲಿ 70 ಲಕ್ಷಕ್ಕಿಂತ ಹೆಚ್ಚಿನ ಸಾಲ ಕೊಡಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುತ್ತದೆ. 30 ಲಕ್ಷ ರೂಪಾಯಿವರೆಗೆ 8.45% ರಿಂದ 10.25% ಬಡ್ಡಿದರದಲ್ಲಿ 30 ಲಕ್ಷಕ್ಕಿಂತ ಹೆಚ್ಚಿನ ಸಾಲ ಹಾಗೂ 75 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ 8.45% ರಿಂದ 10.15% ಬಡ್ಡಿದರದಲ್ಲಿ ಸಾಲ ಕೊಡಲಾಗುತ್ತದೆ.
ದೇಶದ ಅತಿ ದೊಡ್ಡ ಹಾಗೂ ಸರ್ಕಾರಿ ಸೌಮ್ಯದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ 8.40% ರಿಂದ 10.15% ಬಡ್ಡಿದರದಲ್ಲಿ 30 ಲಕ್ಷ ರೂಪಾಯಿವರೆಗೆ ಸಾಲ ಕೊಡುತ್ತದೆ. 8.40% ರಿಂದ 10.15% ಬಡ್ಡಿದರದಲ್ಲಿ 30 ಲಕ್ಷ ರೂಪಾಯಿಗಿಂತ ಹೆಚ್ಚು ಹಾಗೂ 75 ಲಕ್ಷಕ್ಕಿಂತ ಹೆಚ್ಚಿನ ಸಾಲ ಕೊಡುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷ ರೂಪಾಯಿವರೆಗೆ 8.35% ರಿಂದ 10.75% ರವರೆಗೆ ಬಡ್ಡಿದರದಲ್ಲಿ ಹಾಗೂ 30 ಲಕ್ಷಕ್ಕಿಂತ ಹೆಚ್ಚು ಹಾಗೂ 75 ಲಕ್ಷ ರೂಪಾಯಿಗಳನ್ನು 8.35% ರಿಂದ 10.90% ರವರೆಗೆ ಬಡ್ಡಿದರದಲ್ಲಿ ಸಾಲ ಕೊಡಲಾಗುತ್ತದೆ. ಬ್ಯಾಂಕ್ ಆಫ್ ಇಂಡಿಯಾ ಇದು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಕೊಡುತ್ತಿದೆ. 8.30% ಬಡ್ಡಿ ದರದಲ್ಲಿ 30 ಲಕ್ಷ ಹಾಗೂ 30 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಕೊಡುತ್ತದೆ.
ಬ್ಯಾಂಕನಿಂದ ಗೃಹ ಸಾಲ ಪಡೆಯಲು ಕೆಲವು ದಾಖಲೆಗಳು ಅಗತ್ಯವಾಗಿ ಬೇಕಾಗುತ್ತದೆ. ಗುರುತಿನ ಪುರಾವೆಯಲ್ಲಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್, ಚಾಲನಾ ಪರವಾನಿಗೆ ಒಳಗೊಂಡಿರುತ್ತದೆ ಇವುಗಳಲ್ಲಿ ಯಾವುದಾದರು ಒಂದನ್ನು ಗುರುತಿನ ಪುರಾವೆಯಾಗಿ ಸಲ್ಲಿಸಬೇಕು. ವಿಳಾಸ ಪುರಾವೆಯಲ್ಲಿ ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ ಹಾಗೂ ಡ್ರೈವಿಂಗ್ ಲೈಸನ್ಸ್ ಒಳಗೊಂಡಿರುತ್ತದೆ ಇವುಗಳಲ್ಲಿ ಯಾವುದಾದರೂ ಒಂದನ್ನು ವಿಳಾಸ ಪುರಾವೆಯಾಗಿ ಸಲ್ಲಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆ ನಿರ್ಮಾಣ ಮಾಡಬೇಕಾದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಿರಿ.