ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ 12 ರಾಶಿಯವರ ಯುಗಾದಿ ಹಬ್ಬದ ವಾರ್ಷಿಕ ಭವಿಷ್ಯವನ್ನು ತಿಳಿಯೋಣ.
ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ ಹಸಿರು ಚಿಗುರಿನ ಜೊತೆಗೆ ಎಲ್ಲರ ಬದುಕಿಗೆ ಹೊಸ ಬದಲಾವಣೆ ತರುವುದೇ ಯುಗಾದಿ ಹಬ್ಬ. ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಇದೆ ಮತ್ತು ಡಿಸೆಂಬರ್ ತಿಂಗಳವರೆಗೂ ಶನಿ ಗ್ರಹ ಸ್ಥಾನ ಬದಲಾವಣೆ ಮಾಡುವುದಿಲ್ಲ. ರಾಹು ಗ್ರಹ ಮೀನ ರಾಶಿಯಲ್ಲಿ ಇದೆ, ಕೇತು ಗ್ರಹ ಕನ್ಯಾ ರಾಶಿಯಲ್ಲಿ ಇದೆ ಮತ್ತು ಅವು ಕೂಡ ಡಿಸೆಂಬರ್ ತಿಂಗಳವರೆಗೂ ಯಾವುದೇ ಸ್ಥಾನ ಬದಲಾವಣೆ ಮಾಡುವುದಿಲ್ಲ. ಗುರು ಗ್ರಹ ಮೇಷ ರಾಶಿಯಲ್ಲಿ ಇದೆ. ಯುಗಾದಿ ಕಳೆದ ನಂತರ ಮೇ 1ನೇ ತಾರೀಖು ವೃಷಭ ರಾಶಿಗೆ ಗುರು ಗ್ರಹ ಪ್ರವೇಶ ಮಾಡುತ್ತದೆ.
ಮೇಷ ರಾಶಿ :-ಗುರು ಗ್ರಹ ಸ್ಥಾನ ಬದಲಾವಣೆ ಮಾಡಿದರು ಗುರು ಬಲ ಚೆನ್ನಾಗಿ ಇರುತ್ತದೆ. ಅರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ, ಯಾವುದೇ ವ್ಯವಹಾರ ಇದ್ದರು ಅದರಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರುತ್ತದೆ. ಮದುವೆ, ನಾಮಕರಣ, ದೇವತಾ ಕಾರ್ಯ, ಕುಲ ದೇವರ ದರ್ಶನ ಮಾಡುವ ಯೋಗ ಎಲ್ಲಾ ನೆರವೇರುತ್ತದೆ. ಮನೆ ನಿರ್ಮಾಣ ಮಾಡುವ ಕಾರ್ಯ, ವಾಹನ ಖರೀದಿ ಮಾಡುವ ಅವಕಾಶಗಳು ಕೂಡ ಇದೆ. ಕೌಟಂಬಿಕ ಸಮಸ್ಯೆಗಳು ಎಲ್ಲಾ ನಿವಾರಣೆ ಆಗುತ್ತದೆ. ಅಪೂರ್ಣವಾದ ಕೆಲಸಗಳು ಪೂರ್ಣ ಆಗುತ್ತವೆ. ವಿದೇಶ ಪ್ರಯಾಣ ಮಾಡುವ ಯೋಗ ಇದೆ. ವಿದ್ಯಾಭ್ಯಾಸ ಮಾಡುವ ಸಲುವಾಗಿ ವಿದೇಶಕ್ಕೆ ಹೋಗುವ ಅವಕಾಶ ಇದೆ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಖರ್ಚು ಇರುತ್ತದೆ, ಅದು ಖುಷಿ ಕೊಡುತ್ತದೆ.ಶತ್ರು ಭಾದೆ ಇರುವುದಿಲ್ಲ, ಸಾಲದ ಭಾದೆ ಇರುವುದಿಲ್ಲ, ಉದ್ಯೋಗ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಸಿಗುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಸ್ವಲ್ಪ ಬೇಸರ ಕಾಡಬಹುದು.ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಕೆಲಸದ ವಿಚಾರವಾಗಿ ತಲೆನೋವು, ಇನ್ಫೆಕ್ಷನ್, ಕೈ ಕಾಲು ನೋವು ಕಾಡುತ್ತದೆ. ಶನಿ ಗ್ರಹದ ಪರಿಣಾಮ ವಿಧ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಉಂಟಾಗುತ್ತದೆ. ಪರಿಹಾರಗಳು :– ಕಪ್ಪು ಎಳ್ಳನ್ನು ಕೈಯಲ್ಲಿ ಹಿಡಿದು ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡಿ ಅದನ್ನು, ಯಾವ ದೇವಸ್ಥಾನಕ್ಕೆ ಬೇಕಿದ್ದರೂ ಕೊಡಬೇಕು.
ವೃಷಭ ರಾಶಿ :-ಕೆಲಸಗಳಲ್ಲಿ ಇರುವ ವಿಘ್ನಗಳನ್ನು ನಿವಾರಿಸುತ್ತದೆ. ನಿಧಾನ ಗತಿಯಲ್ಲಿ ಸಾಗುತ್ತಿದ್ದ ಕೆಲಸದಲ್ಲಿ ಪ್ರಗತಿ ಸಿಗುತ್ತದೆ ಮತ್ತು ಅದು ಸರಿಯಾದ ಸಮಯಕ್ಕೆ ಪೂರ್ಣ ಆಗುತ್ತದೆ.ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ಸಂಗಾತಿ ಎಲ್ಲಾ ಕೆಲಸದಲ್ಲಿ ಕೈಜೋಡಿಸುವರು. ತಾಯಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುತ್ತದೆ. ಜಂಟಿ ಮತ್ತು ಸ್ವಂತ ಉದ್ಯೋಗ ಒಳ್ಳೆ ಲಾಭ ತರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಜನರ ಕುರಿತು ಅರಿವು ಹೆಚ್ಚಾಗುತ್ತದೆ, ವಿಧ್ಯಾರ್ಥಿಗಳಿಗೆ ಒಳ್ಳೆಯ ಅಭಿವೃದ್ದಿ ಆಗುತ್ತದೆ. ಗುರು ಬಲ ಚೆನ್ನಾಗಿ ಇರುತ್ತದೆ. ಕಂಕಣ ಭಾಗ್ಯ ಬಯಸುವ ಜನರಿಗೆ ಮದುವೆ ಯೋಗವಿದೆ.ಮಕ್ಕಳ ಅಪೇಕ್ಷೆ ಮಾಡುವ ಜನರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ, ಎಲ್ಲಾ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. ಖರ್ಚು ವೆಚ್ಚ ಕಡಿಮೆ ಆಗುತ್ತದೆ. ಸಾಲದಿಂದ ಮುಕ್ತಿ ದೊರಕುತ್ತದೆ. ವೈವಾಹಿಕ ಬದುಕು ಚೆನ್ನಾಗಿ ಇರುತ್ತದೆ. ಶಾಸ್ತ್ರದಲ್ಲಿ ಆಸಕ್ತಿ ಇರುವ ಜನರಿಗೆ ಅದನ್ನು ಕಲಿಯಲು ಇದು ಸಕಾಲ. ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರುತ್ತದೆ.
ಪರಿಹಾರಗಳು :-ಶನಿವಾರ ಕಪ್ಪು ಎಳ್ಳಿನ ದಾನ ಮಾಡಬೇಕು, ಸೋಮವಾರ ಅಕ್ಕಿ ದಾನ ಮಾಡಬೇಕು ಇದನ್ನು 16 ವಾರಗಳು ಮಾಡಬೇಕು.
ಮಿಥುನ ರಾಶಿ :-ಗುರು ಬಲ ಇಲ್ಲದೆ ಇರುವ ಕಾರಣ ಕೆಲವು ವಿಚಾರದಲ್ಲಿ ಈ ರಾಶಿಯವರಿಗೆ ಅಶುಭ ಫಲಗಳು ದೊರಕುತ್ತದೆ. ಇನ್ನು ಹಲವು ವಿಚಾರಗಳಲ್ಲಿ ಶುಭ ಫಲ ಸಿಗುತ್ತದೆ. ಗುರು ಗ್ರಹದಿಂದ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಆದರೆ ಅದು ಒಳ್ಳೆಯ ಫಲಗಳನ್ನು ಕೊಡುತ್ತದೆ. ಯಾಕೆಂದರೆ ಅದು ಮನೆ ನಿರ್ಮಾಣ ಮಾಡುವ ಖರ್ಚು, ವಾಹನ ಖರೀದಿ ಮಾಡುವ ಖರ್ಚು, ಕೃಷಿ ಭೂಮಿ ಖರೀದಿ ಮಾಡುವ ಖರ್ಚು ಆಗಿರುತ್ತದೆ. ಸ್ಥಿರಾಸ್ತಿ ಖರೀದಿ ಮಾಡಲು ಹಣ ವ್ಯೇಯಾ ಆಗುತ್ತದೆ.ಸಾಲ ಮಾಡುವ ಸಂದರ್ಭ ಕೂಡ ಬರುತ್ತದೆ. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚಾಗುತ್ತದೆ. ದಾನ ಧರ್ಮ ಮಾಡುವುದಕ್ಕೂ ಹಣ ಖರ್ಚಾಗುತ್ತದೆ. ವಿವಾಹ ಮತ್ತು ಶುಭ ಕಾರ್ಯಕ್ಕೆ ವಿಘ್ನ ಎದುರಾಗುತ್ತದೆ ಅದರಿಂದ, ಈ ವರ್ಷ ಅದರ ಕಡೆ ಗಮನ ಕೊಡದೆ ಇರುವುದು ಒಳ್ಳೆಯದು.ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದು, ಖಾಸಗಿ ಕೆಲಸ, ಸರ್ಕಾರಿ ಕೆಲಸ ಮಾಡುವ ಜನರಿಗೆ ಹೆಚ್ಚು ಲಾಭ ತಂದು ಕೊಡುತ್ತದೆ. ಕೆಲಸ ಜಾಗದಲ್ಲಿ ಅಧಿಕಾರಿಗಳ ಸಹಕಾರ ಸಿಗುತ್ತದೆ ಮತ್ತು ಗೌರವ ಹೆಚ್ಚಾಗುತ್ತದೆ.
ಪರಿಹಾರಗಳು :-ಪ್ರತಿ ಗುರುವಾರ ಕಡ್ಲೆಬೇಳೆ ದಾನವನ್ನು ದೇವಸ್ಥಾನಕ್ಕೆ ಮಾಡಬೇಕು. ತಿಂಗಳಿಗೆ ಒಂದು ಬಾರಿ ಗುರು ರಾಯರ ದರ್ಶನ ಪಡೆಯುವುದು ಉತ್ತಮ. ಹಳದಿ ಬಣ್ಣದ ಬಟ್ಟೆಯನ್ನು ಅದರಲ್ಲಿ ಶಲ್ಯ ಮತ್ತು ಪಂಚೆಯನ್ನು ಫಲ ತಾಂಬೂಲದ ಜೊತೆ ಇಟ್ಟು ದಾನ ಮಾಡಬೇಕು. ಪಾಠ ಕಲಿಸಿದ ಗುರುಗಳನ್ನು ಕೂಡ ಭೇಟಿ ಮಾಡಿ ಅವರಿಗೆ ಏನಾದರೂ ಉಡುಗೊರೆ ಕೊಡುವುದು ಒಳ್ಳೆಯದು. ಗುರು ದತ್ತಾತ್ರೇಯ ಚರಿತ್ರೆ ಪುಸ್ತಕ ತಂದು ಪ್ರತಿ ಗುರುವಾರ ಒಂದೊಂದು ಅಧ್ಯಾಯ ಓದಬೇಕು.
ಕಟಕ ರಾಶಿ :-ಗುರು ಗ್ರಹದ ಬದಲಾವಣೆ ಕಟಕ ರಾಶಿಯವರಿಗೆ ಲಾಭ ತರುತ್ತದೆ ಮತ್ತು ಈ ರಾಶಿಯವರಿಗೆ ಗುರು ಬಲ ತರುತ್ತದೆ. ಸ್ವಂತ ಉದ್ದಿಮೆ, ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಲಾಭ ಸಿಗುತ್ತದೆ.ಅದೃಷ್ಟ ಹೆಚ್ಚಾದಾಗ ಹಣ ಕಾಸಿನ ತೊಂದರೆಗಳು ದೂರ ಆಗುತ್ತದೆ. ಕುಟುಂಬದಲ್ಲಿ ಇದ್ದ ಕಲಹಗಳು ದೂರ ಆಗುತ್ತದೆ. ಬಂಧುಗಳಿಂದ ತೊಂದರೆಗಳು ಅವರ ಜೊತೆ ಕಲಹಗಳು ಉಂಟಾಗುತ್ತದೆ ಇದು ಕೇತು ಗ್ರಹದಿಂದ ಸಂಭವಿಸುತ್ತದೆ.
ಹೊಂದಾಣಿಕೆ ಸ್ವಭಾವವನ್ನು ಗುರು ಗ್ರಹ ಕೊಡುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಕೆಲಸದಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ವೃತ್ತಿ ಕ್ಷೇತ್ರದಲ್ಲಿ ಒಳ್ಳೆ ರೀತಿಯ ಬೆಳವಣಿಗೆ ತರುತ್ತದೆ. ರಾಹು ಗ್ರಹ ವ್ಯಕ್ತಿತ್ವಕ್ಕೆ ದಕ್ಕೆ ತರುವ ಕೆಲಸ ಮಾಡುತ್ತದೆ. ಅನಿರೀಕ್ಷಿತ ಅಪವಾದಗಳು ಬದುಕಿನಲ್ಲಿ ಬರುತ್ತದೆ. ಬರಬೇಕಿರುವ ಹಣ ಮರಳಿ ಸಿಗುತ್ತದೆ. ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಾಲದಿಂದ ಮುಕ್ತಿ ದೊರಕುತ್ತದೆ. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಗೆಲುವು ಸಿಗುತ್ತದೆ
ಪರಿಹಾರಗಳು :-ಪ್ರತಿ ದಿನ ದುರ್ಗ ಅಷ್ಟೋತ್ತರದ ಜಪ ಮಾಡಬೇಕು. ದೇವಿ ಅಪರಾಧ ಕ್ಷಮಾಪಣ ಸ್ತೋತ್ರ ಪ್ರತಿ ಸಂಜೆ ವೇಳೆಯಲ್ಲಿ ಓದಬೇಕು. ಪ್ರತಿ ಶನಿವಾರ ಕಾಲು ಕೆಜಿ ಉದ್ದಿನಬೇಳೆ, ಕಾಲು ಕೆಜಿ ಗೋಧಿ, ನೂರು ಗ್ರಾಂ ಕಪ್ಪು ಎಳ್ಳನ್ನು ಕೈಯಲ್ಲಿ ಹಿಡಿದು ದೇವರ ಪ್ರದಕ್ಷಿಣೆ ಮಾಡಿ ಅದನ್ನು ದೇವಸ್ಥಾನಕ್ಕೆ ದಾನ ಮಾಡಬೇಕು.
ಸಿಂಹ ರಾಶಿ :-ಶನಿ ಗ್ರಹದ ಪ್ರಭಾವದಿಂದ ವೈವಾಹಿಕ ಬದುಕಿನಲ್ಲಿ ಯಾವ ರೀತಿಯ ತೊಂದರೆ ಇತ್ತು ಅದು ಅದೇ ರೀತಿ ಮುಂದುವರೆಯುತ್ತದೆ. ಪ್ಯಾರಸಿಟಮಾಲ್ ಬ್ಯುಸಿನೆಸ್ ಮಾಡುವ ಜನರಿಗೆ ಸ್ವಲ್ಪ ಕಷ್ಟ ಎದುರಾಗುತ್ತದೆ. ಉದ್ಯೋಗದಲ್ಲಿ ಬರುವ ಸಮಸ್ಯೆಗಳು ಎದುರಾಗಿ ಹಾಗೆ ಪರಿಹಾರ ಕೂಡ ಆಗುತ್ತದೆ ಅದು ಗುರು ಗ್ರಹದ ದೆಸೆಯಿಂದ. ಸಂಗಾತಿಯ ಆರೋಗ್ಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಸಿಂಹ ರಾಶಿಯ ವ್ಯಕ್ತಿಗಳ ಆರೋಗ್ಯದಲ್ಲಿ ಕೂಡ ಸಮಸ್ಯೆಗಳು ಎದುರಾಗುತ್ತದೆ ಅದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ರಾಹು ಗ್ರಹ ಅನಿರೀಕ್ಷಿತ ಖರ್ಚನ್ನು ತಂದು ಕೊಡುತ್ತದೆ. ಗುರು ಗ್ರಹದ ಸ್ಥಾನ ಬದಲಾವಣೆ ಉದ್ಯೋಗದಲ್ಲಿ ಹೆಚ್ಚು ಲಾಭ ತಂದುಕೊಡುತ್ತದೆ. ದುಡ್ಡಿನ ವಿಷಯದಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯ ಆಗುತ್ತದೆ. ಸಾಲದಿಂದ ಮುಕ್ತಿ ದೊರಕುತ್ತದೆ. ಎಷ್ಟೋ ವಿಚಾರಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ಪರಿವಾರದಲ್ಲಿ ಇದ್ದ ಮನಸ್ತಾಪಗಳು ಎಲ್ಲಾ ದೂರ ಆಗುತ್ತದೆ. ಗುರು ಗ್ರಹದ ಬಲದಿಂದ ಸಂಬಂಧಗಳು ಗಟ್ಟಿಯಾಗುತ್ತದೆ. ಕೋಪ ದ್ವೇಷ ಎಲ್ಲಾ ದೂರ ಆಗುತ್ತದೆ. ಹೊಸ ಉದ್ಯೋಗ ಅವಕಾಶಗಳು ಒದಗಿ ಬರುತ್ತವೆ. ಕೋರ್ಟ್ ವ್ಯಾಜ್ಯಗಳು ಇದ್ದರೆ ಆದು ಬೇಗ ಎಲ್ಲಾ ನಿವಾರಣೆ ಆಗುತ್ತದೆ. ಮನೆಯ ಸದಸ್ಯರ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ.
ಕುಲ ದೇವರ ಆರಾಧನೆ ಮಾಡುವುದು ಒಳ್ಳೆಯದು.
ಪರಿಹಾರಗಳು :- ಪ್ರತಿ ದಿನ ತಪ್ಪದೆ ಆದಿತ್ಯ ಹೃದಯ ಮಂತ್ರ ಜಪ ಮಾಡಬೇಕು. ರವಿ ಗ್ರಹ ಬಲಗೊಂಡರೆ ಶನಿ ಗ್ರಹದ ಪ್ರಭಾವ ತಗ್ಗುತ್ತದೆ. ಪ್ರತಿ ಶನಿವಾರ ಎಳ್ಳಿನ ಎಣ್ಣೆಯನ್ನು ದೇವಸ್ಥಾನಕ್ಕೆ ದಾನ ಮಾಡಬೇಕು ಇಲ್ಲ ಕಪ್ಪು ಎಳ್ಳನ್ನು ದಾನ ಕೊಡಬೇಕು, ಈಶ್ವರನ ದೇವಸ್ತಾನಕ್ಕೆ ಕೊಟ್ಟರೆ ಹೆಚ್ಚು ಮಂಗಳಕರ. ” ಓಂ ನಮಃ ಶಿವಾಯ ” ಮಂತ್ರವನ್ನು ಪ್ರತಿ ದಿನ 301 ಬಾರಿ ಜಪ ಮಾಡಬೇಕು. ದುರ್ಗ ಅಷ್ಟೋತ್ತರ, ಹನುಮಾನ್ ಚಾಲಿಸ್ ಎಲ್ಲಾ ಜಪ ಮಾಡಬೇಕು.
ಕನ್ಯಾ ರಾಶಿ :-ಗುರು ಗ್ರಹದ ಸ್ಥಾನ ಬದಲಾವಣೆ ಕನ್ಯಾ ರಾಶಿಯ ಜನರಿಗೆ ಗುರು ಬಲ ತರುತ್ತದೆ. ಇದು ಕನ್ಯಾ ರಾಶಿಯವರಿಗೆ ಭಾಗ್ಯ ಸ್ಥಾನ. ಶನಿ ಗ್ರಹ ಉದ್ಯೋಗ ವಿಚಾರದಲ್ಲಿ ಒಳ್ಳೆಯ ಫಲಗಳನ್ನು ಕೊಡುತ್ತದೆ. ಹೊಸ ಉದ್ಯೋಗ ಅವಕಾಶಗಳು ಒದಗಿ ಬರುತ್ತವೆ. ಗೌರವ ಲಾಭ ಎಲ್ಲಾ ಸಿಗುತ್ತದೆ. ಶತ್ರು ಭಾದೆ ಇರುವುದಿಲ್ಲ,ಕೆಲಸದ ಕಡೆ ಹೆಚ್ಚು ಗಮನ ಕೊಡುವುದರಿಂದ ಹೆಚ್ಚು ನೆಮ್ಮದಿ ಸಿಗುತ್ತದೆ. ವಿಧ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಹೆಚ್ಚಿನ ಏಕಾಗ್ರತೆ ಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಜನರಿಗೆ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ವಿದೇಶದಲ್ಲಿ ಉದ್ಯೋಗ ಪ್ರಯತ್ನ ಮಾಡುತ್ತಿರುವ ಜನರಿಗೆ ಒಳ್ಳೆ ಅವಕಾಶಗಳು ಸಿಗುತ್ತದೆ. ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆ ದೂರ ಆಗುತ್ತದೆ. ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶ ಇರುತ್ತದೆ. ಹಣ ಕಾಸಿನ ವಿಚಾರದಲ್ಲಿ ಇದ್ದ ಅಡೆತಡೆ ಎಲ್ಲಾ ದೂರ ಆಗುತ್ತದೆ. ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಂತಾನ ಪ್ರಾಪ್ತಿ ಆಗುತ್ತದೆ. ಜವಾಬ್ದಾರಿಗಳು ಹೆಚ್ಚಾಗುತ್ತದೆ. ಎಲ್ಲಾ ಆಸೆ ಆಕಾಂಕ್ಷೆಗಳು ನೆರವೇರುತ್ತವೆ. ಧರ್ಮ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ.
ಪರಿಹಾರಗಳು :-ಕುಲ ದೇವರ ಆರಾಧನೆ ಮಾಡುವುದು ಒಳ್ಳೆಯದು.
ತುಲಾ ರಾಶಿ :-ಪಂಚಮ ಶನಿ ನಡೀತಾ ಇದೇ ತುಲಾ ರಾಶಿಯವರಿಗೆ. ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಗುರು ಗ್ರಹದ ಸ್ಥಾನ ಬದಲಾವಣೆ ಕೆಲವು ಕಷ್ಟಗಳನ್ನು ಪರಿಹರಿಸುತ್ತದೆ. ಮಿತ್ರರು ಸಂಬಂಧಿಕರು ಇವರ ವಿಷಯದಲ್ಲಿ ಬೇಸರ ಆಗುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಾಗಿ ಮಾಡಿ. ಉದ್ಯೋಗ ವಿಷಯಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ರಾಹು ಗ್ರಹ ಕೆಲಸದಲ್ಲಿ ಬದಲಾವಣೆಗಳನ್ನು ತರುತ್ತದೆ. ವಿದೇಶದಲ್ಲಿ ಉದ್ಯೋಗಕ್ಕೆ ಅಪೇಕ್ಷೆ ಪಡುವ ಜನರಿಗೆ ಕೆಲಸ ಮತ್ತು ಒಳ್ಳೆ ಲಾಭ ಸಿಗುತ್ತದೆ. ಹಣ ಕಾಸಿನ ವಿಚಾರದಲ್ಲಿ ಒಳ್ಳೆಯದೆ ಆಗುತ್ತದೆ ಆದರೆ, ಶುಭ ಕಾರ್ಯಕ್ಕೆ ಖರ್ಚಾಗುತ್ತದೆ ದೇವರ ಕಾರ್ಯಕ್ಕೆ ಮತ್ತು ದಾನ ಧರ್ಮ ಮಾಡುವುದಕ್ಕೆ ಖರ್ಚು ವೆಚ್ಚ ಆಗುತ್ತದೆ. ಸಾಲ ನೀಡುವುದು ತಪ್ಪು ಅದು, ಮರಳಿ ಸಿಗುವುದಿಲ್ಲ. ಸ್ವಂತ ಉದ್ದಿಮೆ ಮಾಡುವ ಜನರು ಹೆಚ್ಚು ಹೂಡಿಕೆ ಮಾಡುವುದು ಸಮಂಜಸವಲ್ಲ. ನೂತನ ವ್ಯಾಪಾರ ವ್ಯವಹಾರ ಮಾಡುವ ಗೋಜಿಗೆ ಹೋಗದೆ ಇದ್ದರೆ ಉತ್ತಮ. ದುಡ್ಡಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಂದಿನ ವರ್ಷ ಯುಗಾದಿ ತನಕ ಗುರು ಬಲ ಇರುವುದಿಲ್ಲ ಅದರಿಂದ, ಸ್ವಲ್ಪ ಎಚ್ಚರಿಕೆ ವಹಿಸಬೇಕು. ಪ್ರೀತಿ ಪ್ರೇಮದ ವಿಚಾರದಲ್ಲಿ ಹಿನ್ನಡೆ ಉಂಟಾಗುತ್ತದೆ.
ಪರಿಹಾರಗಳು :- ಪ್ರತಿ ಗುರುವಾರ ಕಡ್ಲೆಬೇಳೆ ದಾನ ಮಾಡಬೇಕು. ಪ್ರತಿ ಶನಿವಾರ ಕಪ್ಪು ಎಳ್ಳು ದಾನ ಕೊಡಬೇಕು. ಪ್ರತಿ ದಿನ ಗುರು ಪಾದುಕಾ ಮಂತ್ರ ಜಪ ಮಾಡಬೇಕು. ಗುರು ದತ್ತಾತ್ರೇಯ ಚರಿತ್ರೆ ಪುಸ್ತಕ ತಂದು ಪ್ರತಿ ಗುರುವಾರ ಒಂದೊಂದು ಅಧ್ಯಾಯ ಓದಬೇಕು. ಗುರು ದತ್ತಾತ್ರೇಯ ದೇವಸ್ಥಾನ, ದಕ್ಷಿಣಾಮೂರ್ತಿ ದೇವಸ್ಥಾನ, ರಾಯರ ಮಠಕ್ಕೆ ಒಂದು ತಿಂಗಳಿಗೆ ಒಂದು ಬಾರಿ ಭೇಟಿ ನೀಡುವುದು ಒಳ್ಳೆಯದು ಹಾಗೆ ಹಳದಿ ಬಣ್ಣದ ಶಲ್ಯ ಅಥವಾ ಪಂಚೆಯನ್ನು ಫಲ ತಾಂಬೂಲದ ಜೊತೆಗೆ ದಾನ ಕೊಡಬೇಕು. ಶನಿ ದೇವರ ಶಾಂತಿಗೆ ಕಪ್ಪು ಎಳ್ಳು ದಾನ ಕೊಡಬೇಕು, ಹನುಮಾನ್ ಚಾಲಿಸ್ ಜಪ ಮಾಡಬೇಕು, ಕಾರ್ಯ ಸಿದ್ದಿ ಆಂಜನೇಯನ ಮಂತ್ರವನ್ನು 9 ಬಾರಿ ಜಪ ಮಾಡಬೇಕು.
ಕೇತು ಗ್ರಹಕ್ಕೆ, ಪ್ರತಿ ತಿಂಗಳು ಸಂಕಷ್ಟಹರ ಗಣಪತಿ ವ್ರತ ಆಚರಣೆ ಮಾಡಬೇಕು.
ವೃಶ್ಚಿಕ ರಾಶಿ :-ಗುರು ಗ್ರಹದ ಸ್ಥಾನ ಬದಲಾವಣೆ ವೃಶ್ಚಿಕ ರಾಶಿಯವರಿಗೆ ಕೂಡ ಗುರು ಬಲ ತರುತ್ತದೆ. ಶನಿ ಗ್ರಹದ ದೃಷ್ಟಿಯಿಂದ ಕೆಲಸ ಕಾರ್ಯದ ವಿಚಾರ ಸ್ವಲ್ಪ ನಿಧಾನ ಗತಿಯಲ್ಲಿ ಸಾಗುತ್ತದೆ.ಉದ್ಯೋಗದ ವಿಚಾರದಲ್ಲಿ ಯಾವ ಸಮಸ್ಯೆ ಕೂಡ ಎದುರಾಗುವುದಿಲ್ಲ. ಯುಗಾದಿ ನಂತರ ಆಸ್ತಿ ವ್ಯಾಜ್ಯಗಳು ಎಲ್ಲಾ ನಿವಾರಣೆ ಆಗುತ್ತದೆ. ನೂತನ ಮನೆ ಖರೀದಿ, ಆಸ್ತಿ ಖರೀದಿ ಮಾಡಲು ಅನುಕೂಲವಾಗುತ್ತದೆ.ಕೆಲಸದ ಕುರಿತು ಹೆಚ್ಚು ಯೋಚನೆ ಮಾಡುವಂತೆ ಆಗುತ್ತದೆ, ಒತ್ತಡ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ರೀತಿಯ ತಪ್ಪು ನಿರ್ಧಾರಗಳನ್ನು ಈ ರಾಶಿಯವರು ಕೈಗೊಳ್ಳುವುದಿಲ್ಲ. ರಾಹು ಗ್ರಹದಿಂದ ಪ್ರೀತಿ ಪ್ರೇಮದ ವಿಚಾರದಲ್ಲಿ ಹಿನ್ನಡೆ ಉಂಟಾಗುತ್ತದೆ, ವಿದ್ಯಾಭ್ಯಾಸದಲ್ಲಿ ಕೂಡ ತೊಂದರೆ ಆಗುತ್ತದೆ. ಸಂಬಂಧಿಕರು ಮೋಸ ಮಾಡುವ ಸಾಧ್ಯತೆ ಇರುತ್ತದೆ. ಮೋಸ ಹೋಗುವ ಅವಕಾಶ ಕೂಡ ಇರುತ್ತದೆ. ಗುರು ಗ್ರಹದ ಬಲ ವ್ಯಾಸಂಗದಲ್ಲಿ ಪ್ರಗತಿ ಉಂಟಾಗುತ್ತದೆ. ಕಂಕಣ ಭಾಗ್ಯ ಕೂಡಿ ಬರುತ್ತದೆ, ಸಂತಾನ ಪ್ರಾಪ್ತಿ ಆಗುತ್ತದೆ. ಕುಟುಂಬದಲ್ಲಿ ಇರುವ ಕೆಲವು ಸಮಸ್ಯೆಗಳು ನಿವಾರಣೆ ಆಗುತ್ತದೆ.
ಪರಿಹಾರಗಳು :-ಪ್ರತಿ ಶನಿವಾರ ಉದ್ದಿನಬೇಳೆ, ಕಪ್ಪು ಎಳ್ಳು ಮತ್ತು ಹೆಸರುಕಾಳು ದಾನ ಮಾಡಬೇಕು. ಹನುಮಾನ್ ಚಾಲಿಸ್ ಮಂತ್ರ ಜಪ ಮಾಡಬೇಕು.
ಧನಸ್ಸು ರಾಶಿ :-ಗುರು ಗ್ರಹದ ಸ್ಥಾನ ಬದಲಾವಣೆ ಧನು ರಾಶಿಯ ಜನರಿಗೆ ಒಳ್ಳೆ ಫಲಗಳನ್ನು ಕೊಡುವುದಿಲ್ಲ. ಶನಿ ಗ್ರಹದ ಪ್ರಭಾವದಿಂದ ಕಷ್ಟಗಳಿಗೆ ಸಮಸ್ಯೆಗಳಿಗೆ ಸ್ನೇಹಿತರಿಂದ ಸಹಾಯ ಮತ್ತು ಸಲಹೆ ಸಿಗುತ್ತದೆ. ಶುಭ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತದೆ.ಧೈರ್ಯ ಮತ್ತು ಸ್ಥೈರ್ಯ ಹೆಚ್ಚಾಗುತ್ತದೆ. ತಂದೆಯ ವಿಚಾರವಾಗಿ ಕೆಲವು ಸಮಸ್ಯೆಗಳು ಕಾಡಬಹುದು. ತಂದೆಯ ಜೊತೆ ಪಿತ್ರಾರ್ಜಿತ ಆಸ್ತಿಯ ವಿಷಯವಾಗಿ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.ಧನು ರಾಶಿಯ ಜನರ ಆರೋಗ್ಯದಲ್ಲಿ ತೊಂದರೆ ಆಗಬಹುದು. ಗಂಟಲಿನ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ, ಕಾಲು ನೋವು ಕಾಡಬಹುದು.ಆಸ್ತಿ ಮತ್ತು ಮನೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಅದರಲ್ಲಿ ಗೆಲುವು ಸಾಧಿಸಲು ಅಸಾಧ್ಯ.
ಮೋಸ ಹೋಗುವ ಸಾಧ್ಯತೆ ಈ ರಾಶಿಯ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರಾಹು ಗ್ರಹದಿಂದ ತಾಯಿ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗುರು ಗ್ರಹದ ಸ್ಥಾನ ಬದಲಾವಣೆ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಹಣ ಉಳಿತಾಯ ಮಾಡಲು ಕಷ್ಟವಾಗುವ ಸಾದ್ಯತೆ ಇದೆ. ಸಾಲ ಮಾಡುವ ಪ್ರಮೇಯ ಬರಬಹುದು. ಕೆಲಸದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೊಸ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕದೆ ಇದ್ದರೆ ಒಳ್ಳೆಯದು. ಹೆಚ್ಚು ಸಾಲ ಮಾಡಬೇಡಿ.
ಪರಿಹಾರಗಳು :-ಗುರು ಗ್ರಹಕ್ಕೆ ಪರಿಹಾರ ಗುರುವಾರ ಕಡ್ಲೆಬೇಳೆ ಮತ್ತು ತೊಗರಿಬೇಳೆ ದಾನ ಮಾಡಬೇಕು. ಗುರು ದತ್ತಾತ್ರೇಯ ದೇವಸ್ಥಾನ, ದಕ್ಷಿಣಾಮೂರ್ತಿ ದೇವಸ್ಥಾನ, ರಾಯರ ಮಠಕ್ಕೆ ಒಂದು ತಿಂಗಳಿಗೆ ಒಂದು ಬಾರಿ ಭೇಟಿ ನೀಡುವುದು ಒಳ್ಳೆಯದು ಹಾಗೆ ಹಳದಿ ಬಣ್ಣದ ಶಲ್ಯ ಅಥವಾ ಪಂಚೆಯನ್ನು ಫಲ ತಾಂಬೂಲದ ಜೊತೆಗೆ ದಾನ ಕೊಡಬೇಕು. ಗುರುವಾರ ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿನ ಹಾಕಬೇಕು ಇದು ಋಣಾತ್ಮಕ ಅಂಶಗಳನ್ನು ದೂರ ಮಾಡುತ್ತದೆ. ರಾಹು ಗ್ರಹಕ್ಕೆ ಪರಿಹಾರ ಗುರು ಅಷ್ಟೋತ್ತರ ಹೇಳಬೇಕು. ಗುರು ಪಾದುಕಾ ಮಂತ್ರ ಜಪ ಮಾಡಬೇಕು, ಗುರು ದತ್ತಾತ್ರೇಯ ಚರಿತ್ರೆ ಪುಸ್ತಕ ತಂದು ಪ್ರತಿ ಗುರುವಾರ ಒಂದೊಂದು ಅಧ್ಯಾಯ ಓದಬೇಕು.
ಮಕರ ರಾಶಿ :-ಈ ರಾಶಿಯವರಿಗೆ ಅಂತಿಮ ಸಾಡೇಸಾತಿ ನಡೀತಾ ಇದೆ. ಗುರು ಗ್ರಹದ ಸ್ಥಾನ ಬದಲಾವಣೆ ಗುರು ಗ್ರಹದ ಬಲ ಸಿಗುತ್ತದೆ. ಗುರು ಗ್ರಹದ ದೆಸೆಯಿಂದ ಸಾಡೇಸಾತಿಯ ಯಾವ ಪರಿಣಾಮ ಕೂಡ ಇರುವುದಿಲ್ಲ. ಶನಿ ಗ್ರಹ ಹಣ ಕಾಸಿನ ವಿಚಾರದಲ್ಲಿ ಮಂಗಳಕರ ಫಲಗಳನ್ನು ಕೊಡುವುದು. ಪರಿವಾರದಲ್ಲಿ ಇದ್ದ ಸಮಸ್ಯೆಗಳು ಎಲ್ಲಾ ನಿವಾರಣೆ ಆಗುತ್ತದೆ. ಸ್ವಂತ ಉದ್ದಿಮೆ ನಡೆಸುವ ಜನರಿಗೆ ಲಾಭ ಲಭಿಸುತ್ತದೆ. ರಾಹು ಗ್ರಹದ ದೆಸೆಯಿಂದ ಯಾರ ಜೊತೆ ಯಾವ ರೀತಿ ವ್ಯವಹರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬಹುದು. ಹೊಸ ಸ್ನೇಹಿತರ ಪರಿಚಯ ಆಗುತ್ತದೆ. ಆದರೆ, ಎಲ್ಲರನ್ನು ನಂಬುವುದು ತಪ್ಪು. ಕೇತು ಗ್ರಹ ಧರ್ಮದ ಕಡೆ ನಡೆಯುವಂತೆ ಮಾಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡುತ್ತದೆ. ಮೋಕ್ಷದ ಕಡೆ ಮನಸ್ಸು ಬರುವಂತೆ ಮಾಡುತ್ತದೆ. ವೈರಾಗ್ಯದ ಕಡೆ ಯೋಚನೆಗಳು ಸೆಳೆಯಬಹುದು. ದೇವರು, ಪೂಜೆ ಮಾಡಬೇಕು ಈ ರೀತಿಯ ಕೆಲಸದ ಕಡೆಗೆ ಮನಸ್ಸು ವಾಲುತ್ತದೆ. ಮಕ್ಕಳ ಅಪೇಕ್ಷೆ ಪಡುವ ಜನರಿಗೆ ಸಂತಾನ ಪ್ರಾಪ್ತಿ ಆಗುತ್ತದೆ. ಮೇಲಿನ ಸ್ಥಾನಕ್ಕೆ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಪರಿಹಾರಗಳು :-ಪ್ರತಿ ಶನಿವಾರ ಕಪ್ಪು ಎಳ್ಳನ್ನು ದಾನ ಮಾಡಬೇಕು.
ಕುಂಭ ರಾಶಿ :-ಕುಂಭ ರಾಶಿಯ ಜನರಿಗೆ ಪ್ರಸ್ತುತ ಶನಿ ಗ್ರಹ ಅವರ ರಾಶಿಯಲ್ಲಿ ಇದೆ ಮತ್ತು ಸಾಡೇಸಾತಿ ಎರಡನೇ ಅಂತ ನಡೀತಾ ಇದೆ. ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಗುರು ಬಲ ಇರುತ್ತದೆ.ಕೆಲಸಗಳು ಶನಿ ಗ್ರಹದ ಪ್ರಭಾವದಿಂದ ನಿಧಾನ ಗತಿಯಲ್ಲಿ ಸಾಗುತ್ತದೆ ಆದರೆ, ಸರಿಯಾದ ಸಮಯಕ್ಕೆ ಪೂರ್ಣ ಆಗುತ್ತದೆ. ಜಂಟಿ ವ್ಯವಹಾರದಲ್ಲಿ ಕೆಲಸ ಮಾಡುವ ಜನರಿಗೆ ಪಾರ್ಟ್ನರ್ಗಳ ಮಧ್ಯ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇದ್ದರೆ ಅದು ಹಾಗೆ ಮುಂದುವರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕುಂಭ ರಾಶಿಯ ಜನರಿಗೆ ಕೂಡ ಅನಾರೋಗ್ಯ ಕಾಡಬಹುದು.ಉದ್ಯೋಗ ವಿಚಾರದಲ್ಲಿ ಹೆಚ್ಚಿನ ಶುಭ ಫಲ ಮತ್ತು ಲಾಭ ಸಿಗುತ್ತದೆ. ಸಂಸಾರದಲ್ಲಿ ತಾಳ್ಮೆ ತುಂಬ ಅಗತ್ಯವಾಗಿ ಬೇಕಾಗುತ್ತದೆ. ಹೆಚ್ಚಿನ ಖರ್ಚು ಎದುರಾಗಿ ಹಣ ಉಳಿತಾಯ ಮಾಡಲು ಕಷ್ಟವಾಗುವ ಸಾದ್ಯತೆ ಇದೆ. ಮೇ ತಿಂಗಳಿನಿಂದ ವಾಹನ ಖರೀದಿ ಯೋಗ, ಮನೆ ಖರೀದಿ ಮಾಡುವ ಇಲ್ಲ ನಿರ್ಮಾಣ ಮಾಡುವ ಅವಕಾಶ ಇರುತ್ತದೆ, ಆಸ್ತಿ ವಿಚಾರದ ವ್ಯಾಜ್ಯಗಳು ಎಲ್ಲಾ ನಿವಾರಣೆ ಆಗುತ್ತದೆ ಮತ್ತು ನ್ಯಾಯ ಸಿಗುತ್ತದೆ.
ಪರಿಹಾರಗಳು :-ಪ್ರತಿ ಶನಿವಾರ ಉದ್ದಿನಬೇಳೆ, ಕಪ್ಪು ಎಳ್ಳು ಮತ್ತು ಹುರುಳಿಕಾಳು ದಾನ ಮಾಡಬೇಕು. ಅಶ್ವಥ ವೃಕ್ಷದ ಸುತ್ತ ಪ್ರದಕ್ಷಿಣೆ ಹಾಕಿದರೆ ಒಳ್ಳೆಯದು. ಹನುಮಾನ್ ಚಾಲಿಸ್ ಜಪ ಮಾಡಬೇಕು.
ಮೀನ ರಾಶಿ :-ಗುರು ಗ್ರಹದ ಸ್ಥಾನ ಬದಲಾವಣೆಯಿಂದ ಈ ರಾಶಿಯ ವ್ಯಕ್ತಿಗಳಿಗೆ ಗುರು ಬಲ ಇರುವುದಿಲ್ಲ. ರಾಹು ಗ್ರಹದಿಂದ ವ್ಯಕ್ತಿತ್ವಕ್ಕೆ ದಕ್ಕೆ ಉಂಟಾಗುತ್ತದೆ. ಸುಳ್ಳು ಅಪವಾದಗಳು, ಅಪನಿಂದನೆಗಳನ್ನು ಕೇಳುವ ಸಾಧ್ಯತೆ ಇರುತ್ತದೆ.ಬಂಧುಗಳಲ್ಲಿ ಹೆಚ್ಚಿನ ವಿರೋಧ ಉಂಟಾಗುತ್ತದೆ. ಸಮಯ ತೆಗೆದುಕೊಂಡು ನಿರ್ಧಾರ ಮಾಡುವುದು ಉತ್ತಮ. ವೈವಾಹಿಕ ಜೀವನದಲ್ಲಿ ತೊಂಡಗಳು ಇದ್ದರೆ ಅದು ಇನಷ್ಟು ಹೆಚ್ಚಾಗುತ್ತದೆ.
ಮಕ್ಕಳ ವಿಚಾರವಾಗಿ ಒತ್ತಡ ಎದುರಾಗುತ್ತದೆ. ವಿಧ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗುವ ಸಾಧ್ಯತೆ ಇದೆ. ಕೆಲಸವನ್ನು ಹೆಚ್ಚು ಶ್ರಮ ವಹಿಸಿ ಪೂರ್ಣ ಮಾಡಿದರು. ಅದಕ್ಕೆ, ತಕ್ಕಂತೆ ಫಲ ಸಿಗುವುದಿಲ್ಲ. ಉದ್ಯೋಗದ ವಿಚಾರದಲ್ಲಿ ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಖರ್ಚು ವೆಚ್ಚ ಹೆಚ್ಚಾಗುತ್ತದೆ. ಹಣ ಕಾಸಿನ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇರುತ್ತದೆ. ಸಹೋದರ ಸಂಬಂಧದಲ್ಲಿ ಬಿರುಕು ಮೂಡುವ ಅವಕಾಶ ಇರುತ್ತದೆ. ಕುಟುಂಬದಲ್ಲಿ ಒಳ್ಳೆಯ ಕಾರ್ಯ ಮಾಡಲು ವಿಘ್ನಗಳು ಎದುರಾಗುತ್ತದೆ, ದೇವರ ಕಾರ್ಯ ಮಾಸಲು ಕೂಡ ಸಾಧ್ಯವಾಗುವುದಿಲ್ಲ.
ಪರಿಹಾರಗಳು :-ರಾಹು ಗ್ರಹಕ್ಕೆ ಪರಿಹಾರ ಪ್ರತಿದಿನ ದುರ್ಗ ಅಷ್ಟೋತ್ತರ ಪಠಿಸಬೇಕು. ಕೇತು ಗ್ರಹಕ್ಕೆ ಪರಿಹಾರ ಪ್ರತಿದಿನ ಗಣಪತಿ ಅಷ್ಟೋತ್ತರ ಪಠಿಸಬೇಕು. ಪ್ರತಿ ಶನಿವಾರ ಉದ್ದಿನಬೇಳೆ, ಕಪ್ಪು ಎಳ್ಳು ಮತ್ತು ಉರುಳಿಕಾಳನ್ನು ಕೈಯಲ್ಲಿ ಹಿಡಿದು 8 ಸುತ್ತು ಪ್ರದಕ್ಷಿಣೆ ಮಾಡಿ ನಂತರ ದಾನ ಮಾಡಬೇಕು. ಮಂಗಳವಾರ ನಾಗರ ಕಲ್ಲಿಗೆ ಪೂಜೆ ಮಾಡಬೇಕು ಅದಕ್ಕೆ ಹಾಲಿನ ಅಭಿಷೇಕ ಮಾಡಿ, ಮತ್ತೆ ನೀರಿನ ಅಭಿಷೇಕ ಮಾಡಿ ನಂತರ ಅರಿಶಿಣ ಕುಂಕುಮ ಇಟ್ಟು ಹೂವು ಇಟ್ಟು ಪೂಜೆ ಮಾಡಬೇಕು. ಗುರು ಗ್ರಹಕ್ಕೆ ಪರಿಹಾರ ಗುರುವಾರ ಕಡ್ಲೆಬೇಳೆ ಮತ್ತು ತೊಗರಿಬೇಳೆ ದಾನ ಮಾಡಬೇಕು. ಗುರು ದತ್ತಾತ್ರೇಯ ದೇವಸ್ಥಾನ, ದಕ್ಷಿಣಾಮೂರ್ತಿ ದೇವಸ್ಥಾನ, ರಾಯರ ಮಠಕ್ಕೆ ಒಂದು ತಿಂಗಳಿಗೆ ಒಂದು ಬಾರಿ ಭೇಟಿ ನೀಡುವುದು ಒಳ್ಳೆಯದು ಹಾಗೆ ಹಳದಿ ಬಣ್ಣದ ಶಲ್ಯ ಅಥವಾ ಪಂಚೆಯನ್ನು ಫಲ ತಾಂಬೂಲದ ಜೊತೆಗೆ ದಾನ ಕೊಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.