ಸೋಮವತಿ ಅಮಾವಾಸ್ಯೆ ವರ್ಷದ ಮೊದಲ ಅಮಾವಾಸ್ಯೆ. 5 ವಸ್ತುಗಳನ್ನು ದಾನ ಮಾಡುವುದರಿಂದ ಒಳ್ಳೆಯ ಫಲಗಳು ಲಭಿಸುತ್ತವೆ. ಸೋಮವಾರದ ದಿನ ಬರುವ ಅಮಾವಾಸ್ಯೆಯನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಶಿವ ಮತ್ತು ವಿಷ್ಣು ದೇವರನ್ನು ಪೂಜೆ ಮಾಡಬೇಕು. ಪವಿತ್ರ ನದಿಗಳಲ್ಲಿ ಮಿಂದು ಅವಶ್ಯಕ ಇರುವ ಜನರಿಗೆ ದಾನ ಮಾಡಿದರೆ ಮಾಡಿದ ಎಲ್ಲಾ ಪಾಪ ಕರ್ಮಗಳು ದೂರವಾಗುತ್ತದೆ.
ಈ ದಿನ ವಿವಾಹಿತ ಮಹಿಳೆಯರು ಉಪವಾಸ ಮಾಡಿದರೆ ಅವರ ಪತಿಯ ಆಯಸ್ಸು ಹೆಚ್ಚಾಗುತ್ತದೆ. ಅಗತ್ಯ ಇರುವ ಜನರಿಗೆ ದಾನ ಮಾಡಿದರೆ ಪೂರ್ವಜರ ಶಾಪ ಅಥವಾ ದೋಷ ಇದ್ದರೆ ಅದು ದೂರ ಆಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬಂದು ನೆಲೆಸುತ್ತದೆ. ಸೋಮವತಿ ಅಮಾವಾಸ್ಯೆ ವ್ರತವನ್ನು ಅಶ್ವತ್ಥ ಪ್ರದಕ್ಷಿಣೆ ವ್ರತ ಎಂದು ಕರೆಯುವರು. ಅಶ್ವತ್ಥ ವೃಕ್ಷ ಎಂದರೆ ಅರಳಿ ಮರ ಅದರಲ್ಲಿ ಶಿವ ಮತ್ತು ವಿಷ್ಣು ದೇವರು ವಾಸವಾಗಿ ಇರುವರು. ಅದಕ್ಕೆ, ಈ ದಿನ ಅದರ ಸುತ್ತ ಪ್ರದಕ್ಷಿಣೆ ಮಾಡಬೇಕು.
ದಾನ ಮಾಡಬೇಕಿರುವ 5 ವಸ್ತುಗಳು ಯಾವುವು ಎಂದು ತಿಳಿಯೋಣ :-
ಬಟ್ಟೆ ದಾನ :-ಪಿತೃ ದೋಷ ನಿವಾರಣೆಗೆ ಬಟ್ಟೆಯನ್ನು ದಾನ ಕೊಡಬೇಕು. ಈ ಸೋಮವತಿ ಅಮಾವಾಸ್ಯೆ ದಿನ ಟವೆಲ್ ಮತ್ತು ಧೋತಿ ದಾನ ಮಾಡಬೇಕು.
ಬೆಳ್ಳಿ ವಸ್ತುಗಳು :-ಪೂರ್ವಜರಿಂದ ಬಂದ ಶಾಪ ಮತ್ತು ಪಾಪ ವಿಮೋಚನೆಗೆ ಈ ದಿನ ಬೆಳ್ಳಿ ವಸ್ತುಗಳನ್ನು ದಾನವಾಗಿ ನೀಡಬೇಕು. ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮನೆಯಲ್ಲಿ ಸಂತಸ ಬಂದು ನೆಲೆಸುತ್ತದೆ.
ಹಾಲು ಮತ್ತು ಅಕ್ಕಿಯಂತ ಚಂದ್ರನಿಗೆ ಸಂಬಂಧಪಟ್ಟ ವಸ್ತುಗಳ ದಾನ :-ಈ ರೀತಿಯ ದಾನ ಮಾಡಿದರೆ ಎಲ್ಲಾ ರೀತಿಯ ಪಾಪದಿಂದ ಮುಕ್ತಿ ಸಿಗುತ್ತದೆ. ದೇವರ ಆಶೀರ್ವಾದ ಸಹ ದೊರಕುತ್ತದೆ. ಬಿಳಿ ವಸ್ತು ದಾನ ಮಾಡಿದರೆ ಸಂತಾನ ಭಾಗ್ಯ ಕೂಡ ಪ್ರಾಪ್ತಿಯಾಗುತ್ತದೆ.
ಕಪ್ಪು ಎಳ್ಳಿನ ದಾನ :-ಸೋಮವತಿ ಅಮಾವಾಸ್ಯೆಯ ದಿನ ಸ್ನಾನ ಮಾಡಿ ಪೂರ್ವಜರನ್ನು ಧ್ಯಾನ ಮಾಡಿ ಕಪ್ಪು ಎಳ್ಳನ್ನು ದಾನ ಕೊಡಬೇಕು. ಇಲ್ಲ ಯಾವ ವಸ್ತು ದಾನ ಕೊಟ್ಟರು ಅದರ ಜೊತೆಗೆ ಕಪ್ಪು ಎಳ್ಳನ್ನು ದಾನ ಮಾಡಬೇಕು.
ಭೂಮಿ ದಾನ :-ಅನುಕೂಲವಾಗಿ ಇರುವ ಜನರು ಭೂಮಿಯನ್ನು ದಾನವಾಗಿ ಕೊಡಬಹುದು. ಧರ್ಮಗಳ ಪ್ರಕಾರ ಭೂಮಿ ದಾನ ಎಂದರೆ ದೊಡ್ಡ ದಾನ ಎಂದು ಹೇಳುವರು. ಭೂಮಿ ದಾನ ಮಾಡುವುದರಿಂದ ದೊಡ್ಡ ಪಾಪಗಳಿಗೆ ಪ್ರಾಯಶ್ಚಿತ ಸಿಗುತ್ತದೆ.
ಪಿಂಡ ದಾನ :-ಪಿಂಡ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪೂರ್ವಜರಿಗೆ ಯಾರು ಪಿಂಡ ದಾನ ಮಾಡಿಲವೋ, ಅವರು ಸೋಮವತಿ ಅಮಾವಾಸ್ಯೆ ದಿನ ಪಿಂಡ ದಾನ ಮಾಡಬೇಕು. ಇದರಿಂದ, ಪಿತೃ ದೋಷದಿಂದ ಮುಕ್ತಿ ದೊರಕುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಯಾವುದೇ ಗ್ರಹಣ ಸಂಭವಿಸಿದರೂ ಅದು, ಮಂಗಳಕರ ಎಂದು ಪರಿಗಣನೆ ಮಾಡಲಾಗುವುದಿಲ್ಲ.
8/04/2024 ರಂದು ಸೂರ್ಯ ಗ್ರಹಣ ರಾತ್ರಿ 9.12ಕ್ಕೆ ಆರಂಭವಾಗಿ ಮಧ್ಯರಾತ್ರಿ 2.22ಕ್ಕೆ ಮುಗಿಯುತ್ತದೆ. ಇದು ಕೆನಡಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಬರ್ಮುಡಾ, ಕೆರಿಬಿಯನ್, ನೆದರ್ಲ್ಯಾಂಡ್ಸ್, ಕೊಲಂಬಿಯಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್, ಹೈಲ್ಯಾಂಡ್ ಈ ರೀತಿ ಎಷ್ಟೋ ಕಡೆ ಕಂಡು ಬರುತ್ತದೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುವ ಕಾಲ ಭಾರತೀಯ ಸಮಯದಲ್ಲಿ ರಾತ್ರಿ ಆಗಿರುವ ಕಾರಣ ಅದು ಭಾರತದಲ್ಲಿ ಗೋಚರ ಆಗುವುದಿಲ್ಲ. ಇನ್ನು ಗ್ರಹಣ ಸಮಯದಲ್ಲಿ ಪ್ರಯಾಣ ಮಾಡಬಾರದು, ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರುವುದು ತಪ್ಪು.
ಸೂರ್ಯ ಗ್ರಹಣವನ್ನು ಬರಿ ಕಣ್ಣಿನಲ್ಲಿ ನೋಡುವುದು ಬೇಡ ಟೆಲಿಸ್ಕೋಪ್ ಇಲ್ಲ ಬೇರೆ ಗ್ರಹಣ ವೀಕ್ಷಣೆಯ ಉಪಕರಣಗಳ ಸಹಾಯದಿಂದ ವೀಕ್ಷಿಸಬಹುದು. ಗ್ರಹಣ ಕಾಲದ ಸಂದರ್ಭದಲ್ಲಿ ಮನಸ್ಸಿನ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀಳುವ ಸಾಧ್ಯತೆ ಇದೆ.
ಗ್ರಹಣದ ಸಮಯದಲ್ಲಿ ಊಟ ಮಾಡಿದರೆ, ಅದು ಜೀರ್ಣಾಂಗದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಅದರಿಂದ, ಅಜೀರ್ಣ ಉಂಟಾಗುತ್ತದೆ. ಇದು ಮೂಡ ನಂಬಿಕೆ ಅಲ್ಲ. ವೈಜ್ಞಾನಿಕ ತಳಹದಿ ಕೂಡ ಇದನ್ನೇ ಹೇಳುತ್ತದೆ. ಆಹಾರ ಸೇವನೆ ಮಾಡುವುದು ತಪ್ಪು ಹಾಗೂ ತಯಾರಿಸಿ ಇಟ್ಟ ಆಹಾರ ಸೇವನೆ ಮಾಡುವುದು ಸಹ ತಪ್ಪು. ಈ ಸಮಯದಲ್ಲಿ ನಿದ್ದೆ ಮಾಡುವುದು ಒಳ್ಳೆಯದಲ್ಲ. ಗ್ರಹಣದ ಮೋಕ್ಷ ಕಾಲ ಕಳೆದ ನಂತರ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಬೇಕು. ವಿಷ್ಣು ಇಲ್ಲ ಶಿವನ ದರ್ಶನ ಪಡೆದರೆ ಅದು ಒಳ್ಳೆಯದು.
ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442