ಕರ್ನಾಟಕ ಸರ್ಕಾರ ಅನ್ನಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಗೃಹಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ ಬಡತನ ರೇಖೆಗಿಂತ ಕೆಳಗೆ ಇರುವವರು ( below poverty line ) ಮತ್ತು ಕಡು ಬಡವರು ಹಸಿವಿನಿಂದ ಜೀವ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಅಂತ ಜನರಿಗೆ ಉಚಿತ ಪಡಿತರ ವಸ್ತುಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತು.
ಇದರ ಸಲುವಾಗಿ ಬಿಪಿಎಲ್ ಕಾರ್ಡ್ ( BPL Ration card ) ಹಾಗೂ ಅಂತ್ಯೋದಯ ಕಾರ್ಡ್ ( AAY card ) ವಿತರಣೆ ಮಾಡಲಾಗಿದೆ. ಇದರೊಂದಿಗೆ ಗವರ್ನಮೆಂಟ್’ನಾ ಇತರೆ ಯೋಜನೆಗಳನ್ನು ಪಡೆಯಲು ಹಾಗೂ ಸಬ್ಸಿಡಿ ಪಡಿತರ ಪಡೆಯಲು ಎಪಿಎಲ್ ಕಾರ್ಡ್ ( APL Card ) ಸಹ ವಿತರಣೆ ಮಾಡಲಾಗಿದೆ.
ಈ ಎಪಿಎಲ್ ಕಾರ್ಡ್ ( APL Card ) ಅನ್ನು ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕಿಂತ ಸ್ವಲ್ಪ ಮೇಲೆ ಇರುವವರು ಇಲ್ಲವೇ ಮಧ್ಯಮ ವರ್ಗದ ಜನರು ಬಳಕೆ ಮಾಡಬಹುದು. ಇನ್ನು ಈ ಕಾರ್ಡ್’ಗಳನ್ನು ಹೊಂದಿರುವ ಜನರು ಕೂಡ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಬಿಪಿಎಲ್ ಹಾಗೂ ಎ ಎ ವೈ ಕಾರ್ಡ್ ( AAY Card ) ಇರುವ ಜನರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿಯನ್ನು ವಿತರಣೆ ( free rice ) ಮಾಡುತ್ತಿದೆ.
ಬಿಪಿಎಲ್ ಕಾರ್ಡ್ ಇರುವ ಜನರು ಇನ್ನೂ 2025 ರವರೆಗೆ 5 ಕೆಜಿ ಉಚಿತ ಅಕ್ಕಿಯನ್ನು ಪಡೆಯಬಹುದು ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಕೂಡ ರಾಜ್ಯದಲ್ಲಿ ವಾಸ ಮಾಡುವ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು.
ಉಚಿತ ಅಕ್ಕಿಯ ಬದಲು ಸಿಗುತ್ತೆ ದುಡ್ಡು. ಉಚಿತವಾಗಿ ಅಕ್ಕಿ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಅರ್ಹತೆ ಪಡೆದಿರುವರು. ಆದರೆ, ರಾಜ್ಯ ಸರ್ಕಾರ ಅವರು ಹೇಳಿದಂತೆ 5 ಕೆ.ಜಿ ಉಚಿತ ಅಕ್ಕಿಯನ್ನು ಫಲಾನುಭವಿಗಳಿಗೆ ಕೊಡಲು ಸಾಧ್ಯ ಆಗಿಲ್ಲ. ಪ್ರತಿ ತಿಂಗಳು 1,000 ಟನ್ ಗಟ್ಟಲೆ ಅಕ್ಕಿ ಕೊಡಲು ಸರ್ಕಾರಕ್ಕೆ ಆಗದೆ ಇರುವ ಕಾರಣ, ಕಳೆದ 6 ತಿಂಗಳ ಹಿಂದೆಯೇ ಅಕ್ಕಿಯ ಬದಲು ಹಣ ನೀಡುತ್ತೇವೆ, ಯಾವಾಗ ಅಕ್ಕಿ ಸಂಗ್ರಹವಾಗುತ್ತದೆ ಅವಾಗ ಮತ್ತೆ ಉಚಿತವಾಗಿ ಅಕ್ಕಿ ಕೊಡಲು ಪ್ರಾರಂಭ ಮಾಡುತ್ತವೆ ಎಂದು ಸರ್ಕಾರ ಹೇಳಿತ್ತು.
ಅದೇ, ರೀತಿ ಪ್ರತಿ ಕೆಜಿಗೆ ₹34 ರೂಪಾಯಿ ಅಂದರೆ, 5 ಕೆಜಿಗೆ ₹170 ಗಳನ್ನು ಫಲಾನುಭವಿಗಳ ಬ್ಯಾಂಕ್ ಅಕೌಂಟ್’ಗೆ ( Bank Account ) ಜಮಾ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ದುಡ್ಡು ಅರ್ಹರ ಬ್ಯಾಂಕ್ ಅಕೌಂಟ್’ಗೆ ತಲುಪಿದೆ ಎನ್ನುವುದನ್ನು ಪರೀಕ್ಷೆ ಮಾಡುವುದಕ್ಕೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್’ಗೆ ಹೋಗಲು https://ahara.kar.nic.in/lpg/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇದರ ಮೇಲೆ ಕ್ಲಿಕ್ ಮಾಡಿದ ಮೇಲೆ 3 ಲಿಂಕ್ಗಳು ಕಾಣಿಸುತ್ತವೆ. ಆ ಲಿಂಕ್’ಗಳ ಕೆಳಗೆ ಇರುವ ಜಿಲ್ಲೆಗಳಲ್ಲಿ ಅರ್ಹರು ಅವರು ಪ್ರಸ್ತುತ ವಾಸ ಮಾಡುವ ಜಿಲ್ಲೆ ಯಾವುದು ಎನ್ನುವುದನ್ನು ನೋಡಿ ಅದರ ಮೇಲಿನ ಭಾಗದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅವರ ರೇಷನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚ ( captcha ) ಸಂಖ್ಯೆಯನ್ನು ನಮೂದಿಸಿ ಯಾವ ತಿಂಗಳಿನಲ್ಲಿ ಹಣ ಜಮಾ ಆಗಿದೆ ಎನ್ನುವ ಮಾಹಿತಿ ಪಡೆಯಬಹುದು. ಆ, ತಿಂಗಳನ್ನು ಆಯ್ಕೆ ಮಾಡಿ ಗೋ ( go ) ಎಂದು ಕೊಡಿ.
ನಂತರ ಬ್ಯಾಂಕ್ ಅಕೌಂಟ್’ನಾ ವಿವರ, ಮನೆಯ ಸದಸ್ಯರ ಸಂಖ್ಯೆ, ಎಷ್ಟು ಹಣ ಜಮಾ ಆಗಿದೆ ಎನ್ನುವ ಪ್ರತಿ ಒಂದು ವಿವರ ಸಹ ನೋಡಲು ಸಿಗುತ್ತದೆ.7 ನೇ ಕಂತಿನ ಹಣ ಈಗಷ್ಟೇ ಬಿಡುಗಡೆ ಆಗಿದ್ದು ಒಂದು ವೇಳೆ ನಿಮ್ಮ ಅಕೌಂಟ್’ನಲ್ಲಿ ಪಾವತಿ ಪ್ರಗತಿಯಲ್ಲಿ ಇದೆ ಎಂದು ತೋರಿಸಿದರೆ ಚಿಂತೆ ಮಾಡುವ ಅಗತ್ಯ ಇಲ್ಲ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ 7 ನೇ ಕಂತಿನ ದುಡ್ಡು ಸಹ ಬಂದು ಸೇರುತ್ತದೆ.
ಗವರ್ನಮೆಂಟ್ ಈಗಾಗಲೇ, ತಿಳಿಸಿರುವಂತೆ ನೂತನ ಬಿಪಿಎಲ್ ಕಾರ್ಡ್ ( BPL Card ) ಅನ್ನು ಪಡೆಯಲು ಯಾರಾದರೂ ಬಯಸಿದರೆ ಏಪ್ರಿಲ್ ತಿಂಗಳ 1 ರಿಂದ ಅವಕಾಶ ಇದೆ, ಅಗತ್ಯ ಇರುವ ಡಾಕ್ಯುಮೆಂಟ್ಸ್’ಗಳನ್ನು ಸಿದ್ಧಪಡಿಸಿಕೊಂಡು ಸೇವಾ ಕೇಂದ್ರಗಳಲ್ಲಿ ಹೋಗಿ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.