ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಭಾಗ್ಯ, ಗೃಹ ಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಮಹಿಳೆಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 7ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ. ಕೆಲವರ ಅಕೌಂಟ್’ಗೆ ದುಡ್ಡು ಜಮಾ ಆಗಿದೆ. ಆದರೆ, ಇನ್ನೂ ಹಲವರ ಅಕೌಂಟ್’ಗೆ ಇನ್ನೂ ಹಣ ಬಂದು ಸೇರಿಲ್ಲ.
ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ( Gruha lakshmi scheme ) ಅರ್ಜಿ ಸಲ್ಲಿಕೆ ಮಾಡಿದ್ದು, ಅವರ ಅಕೌಂಟ್’ಗೆ ಇಲ್ಲಿಯ ತನಕ ಹಣ ಬಂದು ಸೇರಿಲ್ಲ ಅಥವಾ ಮೊದಲ ಒಂದೆರಡು ಕಂತಿನ ಹಣ ಬಂದಿದ್ದು, ಪ್ರಸ್ತುತ ಬಿಡುಗಡೆ ಆಗುತ್ತಿರುವ 6 ಮತ್ತು 7 ನೇ ಕಂತಿನ ಹಣ ಬಂದಿಲ್ಲ ಎನ್ನುವವರು.
ನೂತನ ನವೀಕರಣದ ಪ್ರಕಾರ, ಈ 3 ಡಾಕ್ಯುಮೆಂಟ್ಸ್’ಗಳನ್ನು ನೀಡಿ ಬಾಕಿ ಇರುವ ಗೃಹಲಕ್ಷ್ಮಿ ದುಡ್ಡು ಪಡೆಯಬಹುದು..
ಗೃಹಲಕ್ಷ್ಮೀ ಹಣದ ವಿಚಾರದಲ್ಲಿ ತೊಂದರೆ ಅನುಭವಿಸ್ತಾ ಇರುವ ಮಹಿಳೆಯರೇ. ಕೇವಲ ಈ ಮೂರು ಡಾಕ್ಯುಮೆಂಟ್ಸ್’ಗಳನ್ನು ಕೊಡುವ ಮೂಲಕ ಅವರ ಅಕೌಂಟ್’ಗೆ ಪೆಂಡಿಂಗ್ ( pending amount ) ಇರುವ ಹಣವನ್ನು ಸಹ ಬಿಡುಗಡೆ ಆಗುವಂತೆ ಮಾಡಿಕೊಳ್ಳಬಹುದು. ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ( State Congress government ) ಅಧಿಕಾರಕ್ಕೆ ಬಂದ ಕೇವಲ 3 ತಿಂಗಳುಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡಿತು.
ಈ ಯೋಜನೆ ಪ್ರಾರಂಭವಾಗಿ ಏಳು ತಿಂಗಳು ಕಳೆದಿದೆ ಮತ್ತು ಮಹಿಳೆಯರ ಅಕೌಂಟ್’ಗೆ ₹12,000 ರಿಂದ ₹14,000 ಉಚಿತವಾಗಿ ಜಮಾ ಆಗಿವೆ. ಅದರಿಂದ, ಮಹಿಳೆಯರು ಕೂಡ ಸ್ವಾವಲಂಬಿ ಜೀವನ ( independent life ) ನಡೆಸಲು ಸಹಾಯವಾಗಿದೆ. ಇನ್ನು ಕೆಲವು ಮಹಿಳೆಯರಿಗೆ ಹಣ ಬಂದಿಲ್ಲ. ಹೌದು, 80% ಮಹಿಳೆಯರು ಮಾತ್ರ ಕಳೆದ ಆರು ತಿಂಗಳ ಹಣವನ್ನು ಪಡೆದಿದ್ದಾರೆ. ಆದರೆ, ದುರದೃಷ್ಟವಶಾತ್ ಅರ್ಜಿ ಸಲ್ಲಿಸಿದ ನಂತರ ಶೇಕಡ 20%ರಷ್ಟು ಮಹಿಳೆಯರ ಅಕೌಂಟ್’ಗೆ ಹಣ ವರ್ಗಾವಣೆ ಆಗಿಲ್ಲ.
ಇದರ, ಕುರಿತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ವಿವರವನ್ನು ತಿಳಿಸಿದ್ದಾರೆ. ಹಣ ಬಾರದೆ ಇರುವ ಮಹಿಳೆಯರು ಈ ಕೆಲಸ ಮಾಡಬೇಕು ಸಚಿವೆ ತಿಳಿಸಿರುವ ಪ್ರಕಾರ ಇಲ್ಲಿಯವರೆಗೆ, ಯಾರ ಅಕೌಂಟ್’ಗೆ ಹಣ ಜಮೆ ಆಗಿಲ್ಲ ಅವರು.
ಈ ಕೆಲವು ಡಾಕ್ಯುಮೆಂಟ್ಸ್’ಗಳನ್ನು ಪರಿಶೀಲನೆ ಮಾಡುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ. ಮಹಿಳೆಯರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ರೇಷನ್ ಕಾರ್ಡ್ ಈ 3 ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಸೇವ ಕೇಂದ್ರಕ್ಕೆ ತೆರಳಿ. ಅವರ ಡಾಕ್ಯುಮೆಂಟ್ಸ್’ಗಳನ್ನು ( documents ) ಸರಿಯಾಗಿ ಇದೆಯಾ ಎಂಬುದನ್ನು ಪರೀಕ್ಷೆ ಮಾಡಬೇಕು.
ಅದೇ ರೀತಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ( Bank passbook update ) ಮಾಡಿಸುವ ಮೂಲಕ ಬ್ಯಾಂಕ್ ಅಕೌಂಟ್’ನಲ್ಲಿ ಏನಾದರೂ ತೊಂದರೆ ಇದಿಯಾ ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಬ್ಯಾಂಕ್ ಅಕೌಂಟ್’ನಲ್ಲಿ ತೊಂದರೆ ಇದ್ದರೆ. ಅದು ಸಹ, ಇ-ಕೆ ವೈ ಸಿ ಪ್ರಕ್ರಿಯೆ ( E-KYC process ) ಪೂರ್ಣವಾಗದೆ ಇದ್ದರೆ. ಹತ್ತಿರದ ಅಂಚೆ ಕಛೇರಿಯಲ್ಲಿ ನೂತನ ಅಕೌಂಟ್ ತೆರೆಯುವುದು ಸೂಕ್ತ ಎಂದು ತಿಳಿಸಲಾಗಿದೆ.
ಇದಕ್ಕಾಗಿ ಸಿಡಿಪಿಓ ಆಫೀಸ್’ಗೆ ( CDPO office ) ಹೋಗಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಪರೀಕ್ಷೆ ಮಾಡಿಸಬೇಕು. ಅರ್ಜಿದಾರರು ನೀಡಿದ ಡಾಕ್ಯುಮೆಂಟ್ಸ್’ಗಳಲ್ಲಿ ತಪ್ಪು ಇದ್ದರೆ, ಅವರ ಅರ್ಜಿ ಸರ್ಕಾರಕ್ಕೆ ಸಂದಾಯ ಆಗಿರುವುದಿಲ್ಲ. ಈ ಕಾರಣದಿಂದ ಮಹಿಳೆಯರ ಅಕೌಂಟ್’ಗೆ ದುಡ್ಡು ಬಾರದೆ ಇರಬಹುದು. ಆ ರೀತಿಯ ಪರಿಸ್ಥಿತಿಯಲ್ಲಿ ಮಹಿಳೆಯರು ನಿರಾಶೆ ಹೊಂದುವ ಅಗತ್ಯ ಇಲ್ಲ. ಬದಲಿಗೆ ನೂತನವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಮಹಿಳೆಯರು ನೀಡಿರುವ ದಾಖಲೆಗಳು ಸರಿಯಾಗಿ ಇದ್ರೆ ಗೃಹಲಕ್ಷ್ಮಿ ದುಡ್ಡು ಅಕೌಂಟ್’ಗೆ ಜಮಾ ಮಾಡುವ ಪ್ರಕ್ರಿಯೆ ಆಟೋಮ್ಯಾಟಿಕ್ ಅಗಿ ಇರುವ ಕಾರಣ ಯಾವುದೇ, ತೊಂದರೆ ಇಲ್ಲದೆ ಮಹಿಳೆಯರ ಅಕೌಂಟ್’ಗೆ ಗವರ್ನಮೆಂಟ್’ನಿಂದ ದುಡ್ಡು ಬಂದು ಜಮಾ ಆಗುತ್ತದೆ. ಪ್ರತಿ ಒಂದು ಜಿಲ್ಲೆಯಲ್ಲಿ ಸಹ ಮಹಿಳೆಯರು ದುಡ್ಡು ಪಡೆದುಕೊಳ್ಳುತ್ತಿದ್ದಾರೆ. ಅವರ ಅಕೌಂಟ್’ಗೆ ದುಡ್ಡು ಬಾರದೆ ಇದ್ರೆ ಮಾರ್ಚ್ 31 ನೇ ತಾರೀಖಿನವರೆಗೆ ಕಾದು ಅವರ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಬೇಕು, ಆಗಲೂ ಹಣ ಬಾರದೆ ಹೋದ್ರೆ ಸಿಡಿಪಿಒ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಚಿವೆ ವಿವರದಲ್ಲಿ ತಿಳಿಸಿದ್ದಾರೆ.