ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಭಾಗ್ಯ, ಗೃಹಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಯಜಮಾನಿಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 7ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ. ಕೆಲವರ ಅಕೌಂಟ್’ಗೆ ಹಣ ಜಮಾ ಆಗಿದೆ. ಆದರೆ, ಇನ್ನೂ ಹಲವರ ಅಕೌಂಟ್’ಗೆ ಇನ್ನೂ ಹಣ ಬಂದು ಸೇರಿಲ್ಲ. 2024ರ ಫೆಬ್ರವರಿ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆ. ಯಾವುದೇ ಯೋಜನೆಯ ಹಣ ಒಮ್ಮೆ ಬಿಡುಗಡೆ ಆದ್ರೆ ಒಂದೇ ಸಲ ಎಲ್ಲರ ಖಾತೆಗೆ ಜಮಾ ಆಗಲು ಸಾಧ್ಯವಿಲ್ಲ.

ಅದಕ್ಕೆ, ಆರ್ ಬಿ ಐ( RBI ) ನ ಹಾಗೂ ಸರ್ಕಾರದ ಕೆಲವು ನಿಯಮಗಳು ತಡೆ ಆಗುತ್ತದೆ. ಅದರಿಂದ, ಹಲವು ಜಿಲ್ಲೆಗಳಿಗೆ ಮೊದಲು 7ನೇ ಕಂತಿನ ಹಣ ಜಮಾ ಆಗುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಎಲ್ಲಾ ಅರ್ಹರ ಖಾತೆಗೂ ( Bank Account ) ಹಣ ಜಮಾ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರಲು ಕಾರಣಗಳು ಎನ್ ಪಿ ಸಿ ಐ ( NPCI ) ಮ್ಯಾಪಿಂಗ್ ಆಗದೆ ಇರುವುದು. ಅಪ್ಲಿಕೇಶನ್ ಸಲ್ಲಿಕೆ ಸರಿಯಾಗಿ ಆಗದೆ ಇರುವುದು. ಈ-ಕೆವೈಸಿ ( E-KYC ) ನವೀಕರಣ ಆಗದೆ ಇರುವುದು. ಆಧಾರ್ ನವೀಕರಣ ಆಗದೆ ಇರುವುದು.

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು. ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು. ಟೆಕ್ನಾಲಜಿಕಲ್ ಸಮಸ್ಯೆಗಳು. ಈ ಎಲ್ಲಾ ತೊಂದರೆಗಳಿಗೆ ಪರಿಹಾರ ಬೇಕು ಎಂದರೆ ಅರ್ಹತೆ ಉಳ್ಳವರು ಅವರ ಅಪ್ಲಿಕೇಶನ್ ಸಲ್ಲಿಸಿದ ಬಳಿಕ ದೊರಕಿದ ಸ್ವೀಕೃತಿ ಪ್ರತಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ದಾಖಲೆಗಳನ್ನು ತೆಗೆದುಕೊಂಡು ಸಿಡಿಪಿಓ ( CDPO ) ಕಚೇರಿಗೆ ಭೇಟಿ ನೀಡಿ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅಲ್ಲಿ ಮಹಿಳೆಯರ ಬಹುತೇಕ ಎಲ್ಲಾ ತೊಂದರೆಗಳಿಗೂ ಪರಿಹಾರ ನೀಡಲಾಗುತ್ತದೆ. ಅದರಿಂದ, ಅವರು ಕೂಡ ಅರ್ಹರ ಖಾತೆಗೆ ಯಾಕೆ ಹಣ ಸೇರಿಲ್ಲ ಎನ್ನುವುದನ್ನು ಪರಿಶೀಲಿಸಿ ಅದಕ್ಕೆ, ತಕ್ಕ ಪರಿಹಾರ ನೀಡುವರು.

7ನೇ ಕಂತಿನ ಹಣವನ್ನು ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ನೀಡಿದೆ. ಕಳೆದ 6 ತಿಂಗಳುಗಳಿಂದ ತಲಾ ₹2,000 ರೂಪಾಯಿಗಳನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಅಂದರೆ, ಇಲ್ಲಿ ತನಕ ಅರ್ಹ ಮಹಿಳೆಯರಿಗೆ ₹12,000 ಖಾತೆಗೆ ಬಂದು ಸೇರಿದೆ. ಈ ಫೆಬ್ರವರಿ ತಿಂಗಳ ಹಣ, ಮಾರ್ಚ್ ತಿಂಗಳ 15ರಂದು ಬಿಡುಗಡೆ ಆಗಿದೆ. ಪ್ರಾರಂಭದಲ್ಲಿ ಎಲ್ಲಾ ಜಿಲ್ಲೆಗೂ ಹಣ ಬರುವುದಿಲ್ಲ. ಹಣ ಬಾರದೆ ಇರಬಹುದು ಎಂದು ಯೋಚನೆ ಮಾಡುವ ಅಗತ್ಯ ಸಹ ಇಲ್ಲ.

ಹಲವು ಟೆಕ್ನಿಕಲ್ ತೊಂದರೆಗಳಿಂದಾಗಿ ಪ್ರತಿಯೊಬ್ಬರ ಖಾತೆಗೆ ಒಂದೇ ದಿನ ಅಷ್ಟು ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡುವುದು ಕಷ್ಟ ಆಗುತ್ತದೆ. ಹಾಗಾಗಿ ಹಂತ ಹಂತವಾಗಿ ಜಿಲ್ಲೆಯಿಂದ ಜಿಲ್ಲೆಗೆ ಹಣ ವರ್ಗಾವಣೆ ಮಾಡಿಕೊಂಡು ಬರಲಾಗುತ್ತದೆ. ಆದ್ದರಿಂದ, ಮಾರ್ಚ್ ತಿಂಗಳ 31 ರವರೆಗೆ ಕಾಯುವುದು ಉತ್ತಮ ಆಯ್ಕೆ. ಮೇಲೆ ತಿಳಿಸಿರುವ ಸಿರುವ ಎಲ್ಲಾ ನವೀಕರಣ ಕಾರ್ಯ ಆಗಿದ್ಯಾ ಎಂದು ಪರೀಕ್ಷೆ ಮಾಡಿ, ಬ್ಯಾಂಕ್’ನಲ್ಲಿ ಸಹ ಎಲ್ಲಾ ವಿಚಾರವನ್ನು ವಿಚಾರಿಸಿಕೊಂಡು ಬಂದರೆ ಹಣ ಬಂದು ಮಹಿಳೆಯರ ಖಾತೆಗೆ ಸೇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!