ಕಳೆದ ವರ್ಷ ನಮ್ಮ ದೇಶದಲ್ಲಿ ಮುಂಗಾರು ಮಳೆ ಸರಿಯಾಗಿ ಬರದೇ ಇಡೀ ವರ್ಷ ಸರಿಯಾಗಿ ಮಳೆ ಬೆಳೆ ಆಗದ ಕಾರಣ ಕೃಷಿಯಲ್ಲಿ ನಷ್ಟವಾಗಿ, ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಇದೀಗ ಸರ್ಕಾರವು ಬೆಲೆ ನಷ್ಟದ ಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ಬಿಡುಗಡೆ ಮಾಡಿದೆ. ರೈತರು ಈ ಪರಿಹಾರ ಧನ ಪಡೆಯಲು ಕೃಷಿ ಇಲಾಖೆಯ ಫ್ರೂಟ್ಸ್ ವೆಬ್ಸೈಟ್ ನ FID ನಂಬರ್ ಕಡ್ಡಾಯ ಆಗಿರುತ್ತದೆ. ನೀವು FID ಖಾತೆ ಹೊಂದಿದ್ದರೆ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಬಹುದು.
ಬರ ಪರಿಹಾರ ನಿಧಿಗಾಗಿ ಸರ್ಕಾರವು 628 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದೆ. ಹಾಗೆಯೇ ರಾಜ್ಯದ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ರೈತರು ಪರಿಹಾರ ನಿಧಿಯ ಹಣ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಈ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ಆಗಿದ್ದು, ಇದೇ ತಿಂಗಳು 2ನೇ ಕಂತಿನ ಹಣ ಕೂಡ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ರೈತರಿಗೆ ಅನುಕೂಲ ಆಗಲಿ ಎಂದು ಸರ್ಕಾರ ಕೊಡುತ್ತಿರುವ ಸೌಲಭ್ಯ ಪರಿಹಾರ ಆಗಿದೆ..
ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೂ ಪರಿಹಾರ ಸಿಗುತ್ತದೆ. ಪ್ರತಿ ತಾಲ್ಲೂಕಿನಲ್ಲಿ ಎಷ್ಟು ರೈತರನ್ನು ಬೆಳೆಯ ಪರಿಹಾರ ನಿಧಿಗೆ ಅರ್ಹರು ಎಂದು ಗುರುತಿಸಿದ್ದಾರೋ ಅವರ ಲಿಸ್ಟ್ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ನೀಡಿದೆ. ಒಂದು ವೇಳೆ ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲ ಎಂದರೆ, ಆಗ ನೀವು ಕಚೇರಿಗೆ ಹೋಗಿ ನಿಮ್ಮ ಹೆಸರನ್ನು ಸೇರಿಸಿಕೊಳ್ಳುವಂತೆ ಕೇಳಬೇಕು ಎಂದು ತಿಳಿಸಿದೆ ಸರ್ಕಾರ. ಇವರೆಗು ಬರಪೀಡಿತ ನಿಧಿಗಾಗಿ ಸರ್ಕಾರ 66 ಕೋಟಿ ಹಣವನ್ನು ಖರ್ಚು ಮಾಡಿದೆ…
ಈ ಹಣದಲ್ಲಿ 33 ಲಕ್ಷ ರೈತರಿಗೆ ಈಗಾಗಲೇ ಪರಿಹಾರ ಹಣ ವರ್ಗಾವಣೆ ಆಗಿದೆ. ಇನ್ನು 2ನೇ ಕಂತಿನ ಪರಿಹಾರ ಹಣ ಕೂಡ ಈಗಾಗಲೇ ಹಂತ ಹಂತವಾಗಿ ಬಿಡುಗಡೆ ಆಗುತ್ತಿದ್ದು, ಮೊದಲ ಹಂತದಲ್ಲಿ 2 ಲಕ್ಷ ರೈತರಿಗೆ ಹಣ ವರ್ಗಾವಣೆ ಆಗಿದೆ. ಒಂದು ವೇಳೆ ನಿಮಗೆ ಈ ಯೋಜನೆಯ ಹಣ ಬಂದಿಲ್ಲ ಎಂದರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ಯಾ ಎಂದು ಚೆಕ್ ಮಾಡಿಕೊಳ್ಳಿ. ಈ ಒಂದು ಕೆಲಸ ಸರಿಯಾಗಿ ಆಗಿದ್ದರೆ, ನಿಮಗೆ ಬರ ಪರಿಹಾರ ಕಂತಿನ ಹಣ ಖಂಡಿತವಾಗಿ ಅಕೌಂಟ್ ಗೆ ವರ್ಗಾವಣೆ ಆಗುವುದರಲ್ಲಿ ಸಂಶಯವಿಲ್ಲ.