ಮದುವೆ ಪ್ರತಿ ಒಬ್ಬರ ಜೀವನ ಮುಖ್ಯ ಘಟ್ಟ. ಕಂಕಣ ಭಾಗ್ಯ ಕೂಡಿ ಬಂದರೆ ಮದುವೆ ಒಂದೇ ದಿನದಲ್ಲಿ ನಡೆಯುತ್ತದೆ ಇಲ್ಲವೇ ಅದು ಕೂಡಿ ಬರುವ ತನಕ ಕಾಯಬೇಕು. ಇನ್ನು ಕೆಲವು ಕಡೆ ಎಷ್ಟೇ ಪ್ರಯತ್ನ ಪಟ್ಟರೂ ಮದುವೆ ಫಿಕ್ಸ್ ಆಗೋದೆ ಇಲ್ಲ.

ಮದುವೆ ಎನ್ನುವುದು ಈಗಿನ ಕಾಲದಲ್ಲಿ ಒಂದು ವ್ಯಾಪಾರ ಆಗೋಗಿದೆ. ಹೌದು, ಜನರ ಬಳಿ ಮನುಷ್ಯತ್ವಕ್ಕೆ ಇಲ್ಲ ಉತ್ತಮ ಸ್ವಭಾವಕ್ಕೆ ಕಿಲುಬು ಕಾಸಿನ ಕಿಮ್ಮತ್ತು ಇಲ್ಲ. ಹಣ, ಸಂಪತ್ತು, ಅಂತಸ್ತಿಗೆ  ಬೆಲೆ ಕೊಡುವ ಜನಗಳು ನಮ್ಮ ನಡುವೆ ಹೆಚ್ಚಾಗಿ ಇದ್ದಾರೆ. ಹೆಚ್ಚಿನ ಜನರಲ್ಲಿ ಈ ಆಲೋಚನೆ ಇದೆ. ಎಲ್ಲರೂ ಕೂಡ ಒಂದೇ ತರ ಯೋಚನೆ ಮಾಡುವುದಿಲ್ಲ. ಈ ಹಿಂದೆ ಅಂದ್ರೆ ಸಮ್ಮರು 10 ವರ್ಷಗಳ ಹಿಂದೆ ಹೆಣ್ಣು ಮಕ್ಕಳು ಮದುವೆ ಆಗಲು ಹುಡುಗರಿಗೆ ಸಿಗುತ್ತಿದ್ದರು. ಸ್ವಲ್ಪ ಜಮೀನು, ಸ್ವಲ್ಪ ವ್ಯಾಪಾರ, ಒಳ್ಳೆಯ ಗುಣ ಇದ್ದರೆ ಸಾಕು ಅಂತಹ ಹುಡುಗನಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡುತ್ತಿದ್ದರು ಹೆಣ್ಣು ಹೆತ್ತವರು.

ಒಂದು ಒಳ್ಳೆಯ ಜೀವನ ಕಟ್ಟಿಕೊಂಡು ಬದುಕು ನಡೆಸಿ  ಎಂದು ಆಶೀರ್ವಾದ ಕೂಡ ಮಾಡುತ್ತಿದ್ದರು. ಆದರೆ, ಈಗಿನ ಕಾಲಮಾನ ಬದಲಾಗಿದೆ. ಅದಷ್ಟೇ ಜಮೀನು ಇದ್ದರೂ, ಹುಡುಗ ಓದದೆ ಸಿಟಿಯಲ್ಲಿ ಸೆಟಲ್ ಆಗದೆ ಇದ್ದರೆ, ಹುಡುಗಿ ಕೊಡಲ್ಲ ಇನ್ನು ಹಳ್ಳಿಯಲ್ಲಿ ರೈತನಿಗೆ ಹೆಣ್ಣನ್ನು ಕೊಡಲು ಯಾರು ಮುಂದೆ ಬರುವುದೇ ಇಲ್ಲ.

ಮದುವೆಯಾಗದ ಎಷ್ಟೋ ಜನರು ಪ್ರತಿದಿನ ಅವರ  ನೋವನ್ನು ಹೇಳಿಕೊಳ್ಳುವವರು. ಆ ರೀತಿಯ ಜನರಿಗೆ ಇದೀಗ ಒಂದು ಒಳ್ಳೆಯ ಸಮಾಚಾರ ಇದೆ. ಅದು ಏನು ಅಂದ್ರೆ ನೀವು ಮದುವೆಗಾಗಿ ಹುಡುಗಿಯನ್ನು ಹುಡುಕಿ ಯಾವ ಹುಡುಗಿ ಕೂಡ ಒಪ್ಪಿಕೊಳ್ಳದೆ ನಿಮ್ಮ ಯಾವ ಮದುವೆ ಕಾರ್ಯಗಳು ನಡೆಯದೆ ತುಂಬಾನೇ ನೊಂದು ಹೋಗಿದ್ದರೆ.
ಈ ದಿನ ಈ ಕೆಲಸ ಮಾಡಿದರೆ ಸಾಕು, ಖಂಡಿತವಾಗಿ ಮದುವೆ ಆಗುತ್ತದೆ. ಒಂದು ಪ್ರಸಿದ್ಧ ಹಿಂದೂ ದೇವಾಲಯ ಇದೆ ಆ ದೇವಸ್ತಾನಕ್ಕೆ 3,000 ವರ್ಷಗಳ ಇತಿಹಾಸ ಸಹ ಇದೆ. ಈ ದೇವಸ್ಥಾನದಲ್ಲಿ ಶಿವನ ಕೈಯನ್ನು ಹಿಡಿದಿರುವ ಪಾರ್ವತಿ ಮೂರ್ತಿ ಇದೆ.

ಇದು ಚೋಳರ ಕಾಲದಲ್ಲಿ ಕಟ್ಟಿದ ದೇವಸ್ಥಾನ, ₹150 ದುಡ್ಡು ಕೊಟ್ರೆ ಪೂಜೆ ಸಾಮಗ್ರಿ ಕೊಡುವರು ಅದರಲ್ಲಿ ವಿಭೂತಿ, ಕುಂಕುಮ, ಅರಿಶಿಣ, ನಿಂಬೆಹಣ್ಣು, ಹಾರ, ಅರಿಶಿಣದ ಕೊಂಬಿನ ತಾಳಿ ಎಲ್ಲಾ ಇರುತ್ತದೆ. ನಿಂಬೆಹಣ್ಣು ಜ್ಯೂಸ್ ಮಾಡಿ ಕುಡಿಬೇಕು ಅದಕ್ಕೆ ಉಪ್ಪು ಅಥವಾ ಸಕ್ಕರೆ ಹಾಕುವಂತೆ ಇಲ್ಲ, ಹಾರವನ್ನು ಕಾಟನ್ ಬ್ಯಾಗ್’ನಲ್ಲಿ ಮದುವೆಯಾಗುವ ತನಕ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು. ಮದುವೆಯಾದ ನಂತರ ದಂಪತಿ ಸಮೇತರಾಗಿ ದೇವಸ್ಥಾನಕ್ಕೆ ಹೋಗಿ ಹಾರ ಮತ್ತು ಹೊಸ ಪೂಜೆ ಮಾಡುವ ಸಾಮಗ್ರಿ ಕೊಟ್ಟು ಬರಬೇಕು.

ವಿಭೂತಿ ಮತ್ತು ಕುಂಕುಮವನ್ನು ಅವರು ಮಾತ್ರ ಬಳಕೆ ಮಾಡಬೇಕು. ಇನ್ನು, ಅರಿಶಿಣವನ್ನು ಕೈಗೆ ಲೇಪಿಸಿ ಸ್ನಾನ ಮಾಡಬೇಕು. ಮದುವೆಯಾದ ಮೇಲೆ ಪೂಜೆ ಮಾಡಿಸಿದ ನಂತರ ದೇವರ ಬಳಿ ಕಷ್ಟ ಪರಿಹಾರವಾಗಲಿ ಎಂದು ಒಂದು ತೆಂಗಿನಕಾಯಿ ಒಡೆದು ಬೇಡಿಕೆ ಇಡಬೇಕು.ಮನೆಗೆ ಹೋಗಿ ಮಾರನೆಯ ದಿನ ಹಾರವನ್ನು ಹರಿಯುವ ನೀರಿನಲ್ಲಿ ಬಿಡಬೇಕು ವಿಭೂತಿ ಕುಂಕುಮವನ್ನು ಸತಿ ಪತಿ ಬಳಕೆ ಮಾಡಬಹುದು. ಇನ್ನು  ಈ ದೇವಸ್ಥಾನಕ್ಕೆ ಹೋದ ಮೇಲೆ ಗುರು ಭಾಗ್ವಾನ ಎನ್ನುವ ದೇವಸ್ಥಾನಕ್ಕೆ ಕೂಡ ತಪ್ಪದೆ ಹೋಗಬೇಕು.

ಈ ದೇವಸ್ಥಾನ ಹೆಚ್ಚು ಪ್ರಸಿದ್ದಿ ಪಡೆದಿದೆ. ಈ ಸ್ಥಳವನ್ನು ಶಿವ ಪಾರ್ವತಿ ವಿವಾಹ ಆಗಿರುವ ಪುಣ್ಯ ಸ್ಥಳ ಎಂದು ಕೂಡ ಕರೆಯುವರು. ಇದು ಇರುವುದು ತಮಿಳುನಾಡಿನಲ್ಲಿ, ತಿರುಮನಂಚೆರಿ ಕಲ್ಯಾಣ ಸುಂದರೇಶ್ವರ ದೇವಸ್ಥಾನ ಎನ್ನುವರು.ಬಹಳ ಕಾಲದಿಂದ ಮದುವೆ ಆಗದೆ ಇರುವ ಲಕ್ಷಾಂತರ ಜನರು ಈ ದೇವಸ್ಥಾನಕ್ಕೆ ಬಂದು ಹೋದ ಮೇಲೆ ಮದುವೆಯಾಗಿದೆ ಎನ್ನುವ ಪ್ರತೀತಿ ಇದೆ. ಮೊದಲು ಮದುವೆಯಾಗದೆ ಇರುವವರು ದೇವಸ್ಥಾನಕ್ಕೆ ಬಂದು ಅಲ್ಲಿ ಕೊಡುವ ಪೂಜೆ ವಿಧಿ ವಿಧಾನಗಳನ್ನು ಮಾಡಬೇಕು, ಅದಾದ ಮೇಲೆ ಹಾರವನ್ನು ನೀಡುವರು ಅದನ್ನು ತೆಗೆದುಕೊಂಡು ಹರಕೆಯನ್ನು ಕಟ್ಟಿಕೊಂಡು ಮನೆಗೆ ಮರಳ ಬಹುದು.

ಈ ದೇವಸ್ಥಾನಕ್ಕೆ ಹೋಗಿ ಬಂದ ಸ್ವಲ್ಪ ದಿನದ ಅಂತರದಲ್ಲಿ ಖಂಡಿತ ಮದುವೆ ಕೂಡ ಆಗುತ್ತದೆ ಎನ್ನುವ ನಂಬಿಕೆ ಈ ದೇವರ ಮೇಲೆ ಮತ್ತು ದೇವಸ್ಥಾನದ ಮೇಲೆ ಇಡಬಹುದು. ಮದುವೆ ಆದ ಮೇಲೆ ಸಂಗಾತಿ ಜೊತೆ ಪುನಃ ಈ ದೇವಸ್ಥಾನಕ್ಕೆ ಬಂದು ಹರಕೆಯನ್ನು ತೀರಿಸಬೇಕು. ಇನ್ನು ಈ ದೇವಸ್ಥಾನಕ್ಕೆ ಬರುವ 150 ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡುವ ಕಾರಣ ಕಾಣಿಕೆಯನ್ನು ಕೊಡಬಹುದು.

Leave a Reply

Your email address will not be published. Required fields are marked *