ಗೆಳೆತನ ಜೀವನದ ಒಂದು ಸುಂದರ ಅನುಭೂತಿ. ಜೀವನಕ್ಕೆ ಒಬ್ಬರಾದರೂ ಜೀವದ ಗೆಳೆಯರು ಇರ್ತಾರೆ. ಯಾರ ಬಳಿ ಕೂಡ ಹೇಳಿಕೊಳ್ಳದ ಎಷ್ಟೋ ವಿಷಯಗಳು ಸ್ನೇಹಿತರ ಬಳಿ ಹೇಳಿಕೊಳ್ಳುವ ಮಟ್ಟಕ್ಕೆ ಅ ಬಾಂಧವ್ಯ ನಿರ್ಮಾಣ ಆಗಿರುತ್ತದೆ.

ಹಲವು ವ್ಯಕ್ತಿಗಳಿಗೆ ಗೆಳೆಯರೇ ಪ್ರಪಂಚ. ಇದಕ್ಕೆ ಕಾರಣ ಅವರ ರಾಶಿ ಕೂಡ ಆಗಿರಬಹುದು?. ಆದ್ದರಿಂದ ಸ್ನೇಹಿತರನ್ನು ಅತಿ ಹೆಚ್ಚು ಪ್ರೀತಿಸುವವರ ರಾಶಿಗಳ ಬಗ್ಗೆ ಈ ದಿನ ತಿಳಿಯೋಣ. ಗೆಳೆಯರು ಇಲ್ಲದ ಜಗವನ್ನು ಕಲ್ಪನೆ ಮಾಡಲು ಅಸಾಧ್ಯ. ಒಬ್ಬರ ಬದುಕಿನ ನೋವು-ನಲಿವು, ಸುಖ-ದುಃಖ ಈ ರೀತಿಯ ವಿಚಾರಗಳನ್ನು ಸ್ನೇಹಿತರ ಬಳಿ ಮಾತ್ರ ಹೇಳಿಕೊಳ್ಳಬಹುದು. ಆದರೆ, ಹಲವು ವ್ಯಕ್ತಿಗಳು ಗೆಳೆಯರನ್ನು ಪ್ರಾಣಕ್ಕಿಂತ ಅತಿ ಹೆಚ್ಚು ಪ್ರೀತಿ ಮಾಡುವರು. ಇದಕ್ಕೆ ಅವರ ರಾಶಿ ಕೂಡ ಒಂದು ಮುಖ್ಯ ಕಾರಣ ಆಗಿರಬಹುದು. ಆದ್ದರಿಂದ, ಗೆಳೆಯರನ್ನು ಎಲ್ಲರಿಗಿಂತ ಅತಿ ಹೆಚ್ಚು ಪ್ರೀತಿ ಮಾಡುವ ರಾಶಿಗಳು ಯಾವುದು ನೋಡೋಣ.

ಕಟಕ ರಾಶಿ :- ಕರ್ಕಾಟಕ ರಾಶಿಯ ಜನರು ಹೆಚ್ಚು ಕಾಳಜಿ ಮಾಡುವರು, ಈ ರಾಶಿಯವರು ಮುಂದಾಳತ್ವ ವಹಿಸುತ್ತಾರೆ ಅವರಿಗೆ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಕರ್ಕಾಟಕ ರಾಶಿ ಅವರನ್ನು ಚಂದ್ರ ಗ್ರಹ ನಿಯಂತ್ರಣ ಮಾಡುತ್ತದೆ. ಈ ಜನರು ಆಳವಾದ ಯೋಚನೆ ಮಾಡುವವರು ಅರ್ಥಗರ್ಭಿತ ಮತ್ತು ಹೆಚ್ಚಿನ ಸಹಾನುಭೂತಿ ಉಳ್ಳವರು ಆಗಿರುತ್ತಾರೆ. ಭಾವನಾತ್ಮಕ, ಬುದ್ಧಿವಂತಿಕೆ ಈ ಜನರನ್ನು ನೈಸರ್ಗಿಕವಾಗಿ ಯಾವಾಗಲೂ ಇವರ ಸ್ನೇಹಿತರ ಭಾವನೆಗಳಿಗೆ ಮತ್ತು ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ.
ಮಾತನಾಡದೆ ಆ ಭಾವನೆಗಳನ್ನು ಅರ್ಥಮಾಡಿಕೊಂಡು ಅವರು ಕಷ್ಟಕ್ಕೆ ಮಿಡಿದು ಸಾಂತ್ವನವನ್ನು ಹೇಳುವರು.

ವೃಷಭ ರಾಶಿ :-ವೃಷಭ ರಾಶಿಯವರು ವಿಶ್ವಾಸಕ್ಕೆ ಅರ್ಹ ವ್ಯಕ್ತಿಗಳು ಮತ್ತು ಗೆಳೆತನದಲ್ಲಿ ನಿಷ್ಠಾವಂತ ಜನರು ಕೂಡ ಆಗಿರುತ್ತಾರೆ. ಅವರ ಗೆಳೆಯರನ್ನು ನೋಡಿಕೊಳ್ಳುವ ವಿಚಾರಕ್ಕೆ ಬಂದರೆ ವೃಷಭ ರಾಶಿಯವರು ಅಚಲವಾಗಿ ಇರುತ್ತಾರೆ.ಇವರ ಸ್ನೇಹಿತರಿಗೆ ಸ್ಥಿರವಾಗಿ ಮತ್ತು ಬೆಂಬಲವಾಗಿ ಯಾವಾಗಲೂ ಜೊತೆ ನಿಲ್ಲುವರು, ಅಗತ್ಯವಿರುವ ಸಮಯದಲ್ಲೇ ಇವರು ಸ್ನೇಹಿತರಾಗುತ್ತಾರೆ. ಕಷ್ಟ ಮತ್ತು ಸುಖ ಎರಡರಲ್ಲೂ ಭಾಗಿಯಾಗಿ ನಿಮ್ಮ ಪರವಾಗಿರುವ ಇರುವ ವ್ಯಕ್ತಿಗಳು ಈ ವೃಷಭ ರಾಶಿಯವರು, ಅವರು ಅತ್ಯುತ್ತಮ ಗೆಳೆಯರಾಗುವ ಸಾಮರ್ಥ್ಯ ಹೊಂದಿರುತ್ತಾರೆ.

ಕನ್ಯಾ ರಾಶಿ :- ಕನ್ಯಾ ರಾಶಿಯವರು ಹೆಚ್ಚು ಕರುಣಾಮಯಿ ಮನಸ್ಸಿನವರು, ಇವರನ್ನು ತುಂಬಾ ಕಾಳಜಿ ಇರುವ ಜನರು ಎಂದು ಗುರುತಿಸಿ ಕೊಳ್ಳುತ್ತಾರೆ. ಕನ್ಯಾ ರಾಶಿ ಜನ ಹೆಚ್ಚು ಸೇವಾ ಕಾರ್ಯಗಳು ಮತ್ತು ಸಹಾಯ ಮಾಡುವ ರೂಪದಲ್ಲಿ ಅವರ ಕಾಳಜಿಯನ್ನು ತೋರಿಸುತ್ತಾರೆ. ಜೀವನವನ್ನು ಸಂಘಟಿಸುವುದರಿಂದ ಹಿಡಿದು ಸಕಾರಾತ್ಮಕ ಸಲಹೆಗಳನ್ನು ನೀಡುವ ತನಕ ಇವರು ಗೆಳೆತನವನ್ನು ಉಳಿಸಿಕೊಳ್ಳುವರು. ಜೀವನವನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಕನ್ಯಾ ರಾಶಿಯ ಗೆಳೆಯರು ಇದ್ದರೆ, ಹೆಚ್ಚು ಸಂತಸದಿಂದ ಇರಬಹುದು.

ಮೀನ ರಾಶಿ :-ಮೀನ ರಾಶಿಯವರು ಕೂಡ ಸಹಾನುಭೂತಿ ಇರುವ ಕನಸುಗಾರರು, ಮಿತಿಯಿಲ್ಲದ ಕರುಣೆ ಅನುಕಂಪ ತೋರಿಸಿ ಅವರ ಕಾಳಜಿಯನ್ನು ವ್ಯಕ್ತ ಮಾಡುವರು. ಇವರು ಅವರ ಗೆಳೆಯರ ಕನಸುಗಳು ಮತ್ತು ಭಾವನೆಗಳನ್ನು ಬೇಗ ಗುರುತಿಸಿ ಅರ್ಥ ಮಾಡಿಕೊಳ್ಳುವರು. ಅವರ ಯೋಗ ಮತ್ತು ಕ್ಷೇಮದ ಬಗ್ಗೆ ಕಾಳಜಿ ಮಾಡುವುದು ಮಾತ್ರವಲ್ಲದೆ ಬೇರೆಯವರ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸುವ ಗೆಳೆಯರು, ಈ ಮೀನ ರಾಶಿಯ ಜನರು. ಇವರು ಹೆಚ್ಚು ವಿಶ್ವಾಸಕ್ಕೆ ಅರ್ಹತೆ ಇರುವ ವ್ಯಕ್ತಿಗಳು. ಮೇಲೆ ತಿಳಿಸಿರುವ ರಾಶಿಯವರು ಗೆಳೆಯರ ಸುಖ ಸಂತೋಷಕ್ಕಾಗಿ, ಅವರ ಕನಸುಗಳನ್ನು ನನಸು ಮಾಡಲು ಏನು ಬೇಕಾದರೂ ಮಾಡವ ಗುಣದವರು. ಈ ರಾಶಿಗಳ ಸ್ನೇಹಿತರು ಇದ್ದರೆ ಅವರೇ ಅದೃಷ್ಟವಂತರು.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!