ಮೃತ್ಯುಂಜಯ ಶಿವನಿಗೆ ವೈದ್ಯನಾಥ ಎನ್ನುವ ಹೆಸರು ಸಹ ಇದೆ. ಎಷ್ಟೋ ರೋಗಗಳನ್ನು ಗುಣ ಮಾಡುವ ಶಕ್ತಿ ಶಿವನಿಗೆ ಇದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಇರುವ ಈ ಶಿವನ ದೇವಸ್ಥಾನ ಪ್ರಪಂಚದ ಎಲ್ಲ ಕಡೆ ಪ್ರಸಿದ್ದಿ ಪಡೆದಿದೆ. ಬೆಂಗಳೂರಿನಲ್ಲಿ ನಾವು ಸಾವಿರ ಶಿವನ ದೇವಸ್ಥಾನಗಳನ್ನು ನೋಡಬಹುದು ಆದ್ರೆ ಈ ದೇವಸ್ಥಾನದಲ್ಲಿ ನೆಲೆಸಿರುವ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ವಿದೇಶದಿಂದ ಸಹ ಭಕ್ತರು ಆಗಮಿಸುತ್ತಾರೆ ಅದರ ಹಿಂದೆ ಇರುವ ಕಾರಣ?. ಈ ಶಿವನಲ್ಲಿ ಯಾವ ವಿಶೇಷ ಶಕ್ತಿ ಇದೆ? ಎಂದು ತಿಳಿಯೋಣ.
ಜನರು 12 ಜೋತಿರ್ಲಿಂಗಗಳ ದರ್ಶನ ಮಾಡುವುದಕ್ಕೆ ದೂರವಿರುವ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಬೆಂಗಳೂರಿನಲ್ಲಿ ಇರುವ ಈ ಒಂದು ದೇವಸ್ಥಾನಕ್ಕೆ ಬಂದರೆ ಎಲ್ಲಾ ಜೋತಿರ್ಲಿಂಗಗಳನ್ನು ಒಂದೇ ಕಡೆ ನೆಲೆಸಿರುವ ಭಾರತದ ಎರಡನೇ ದೇವಸ್ಥಾನ ಮತ್ತೆ ಒಂದೇ ಕಡೆ ಎಲ್ಲಾ ಜೋತಿರ್ಲಿಂಗಗಳ ದರ್ಶನ ಮಾಡಬಹುದು.
ಈ ದೇವಸ್ಥಾನ ನೋಡಲು ಹೆಚ್ಚು ಆಕರ್ಷಕ ಮತ್ತು ಸುಂದರವಾಗಿ ಇದೆ. ಪತ್ಯೇಹಪೂರ್ ಸಾಮ್ರಾಜ್ಯದ ಶೈಲಿಯಲ್ಲಿ ಇದೆ. ದೇವಸ್ಥಾನದಲ್ಲಿ ಇರುವ 12 ಜೋತಿರ್ಲಿಂಗಗಳು ನರ್ಮದಾ ನದಿಯಲ್ಲಿ ಸಿಗುವ ಕಪ್ಪು ಕಲ್ಲಿನಲ್ಲಿ ಕೆತ್ತನೆ ಮಾಡಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಒಂದೊಂದು ಶಿವಲಿಂಗದ ಒಳಗಡೆ 1,000 ನರ್ಮದೇಶ್ವರ ಒಂದು ಇಂಚಿನ ಶಿವ ಲಿಂಗವನ್ನು ಇಡಲಾಗಿದೆ. 12 ಲಿಂಗಗಳಲ್ಲಿ ಪ್ರಧಾನ ಮುಖ್ಯ ಓಂಕಾರೇಶ್ವರ ಲಿಂಗದ ಒಳಗಡೆ 2,000 ನರ್ಮದೇಶ್ವರ ಶಿವ ಲಿಂಗವನ್ನು ಇಡಲಾಗಿದೆ. 12 ಜೋತಿರ್ಲಿಂಗಗಳ ಜೊತೆಗೆ 13,000 ನರ್ಮದೇಶ್ವರ ಲಿಂಗವನ್ನು ಒಂದೇ ಕಡೆ ನೋಡಬಹುದು. ಈ ದೇವಸ್ಥಾನದ ಒಳಗೆ ಹೋಗಿ ಶಿವನ ದರ್ಶನ ಮಾಡಿ ಹೊರಗೆ ಬರುವ ಹೊತ್ತಿಗೆ ಮೂಳೆಗಳ ನೋವು ಸಂಪೂರ್ಣ ಗುಣಮುಖ ಆಗಿರುತ್ತದೆ.
ಈ ಪವಾಡದ ಬಗ್ಗೆ ಕೇಳಿದರೆ ವಿಚಿತ್ರ ಎನಿಸುತ್ತದೆ. ಆದ್ರೆ ಇದು 100% ನಿಜ ಎಂದು ಹಲವಾರು ಮಂದಿ ಅಭಿಪ್ರಾಯ ಹೇಳಿದ್ದಾರೆ. ಬೆನ್ನು ನೋವು, ಮಂಡಿ ನೋವು, ಕತ್ತಿನ ನೋವು ಈ ರೀತಿ ದೇಹದಲ್ಲಿ ಯಾವ ಮೂಳೆ ನೋವು ಇದ್ದರು ಸರಿಯಾಗುತ್ತದೆ. 12 ಜೋತಿರ್ಲಿಂಗಗಳ ದರ್ಶನ ಪಡೆದ ನಂತರ ಒಂದು ಸೇವೆ ಮತ್ತು ಒಂದು ದಾನ ಮಾಡಬೇಕು. ಅನ್ನ ಧಾನ ಮತ್ತು ಮೃತ್ಯುಂಜಯ ಹೋಮ ಮಾಡಿಸಿ ಹೊರಗೆ ಬಂದರೆ ದೇಹದ ಯಾವುದೇ ಭಾಗದಲ್ಲಿ ಮೂಳೆಗೆ ಸಂಬಂಧ ಪಟ್ಟ ನೋವು ಬಂದರು ಅದು ಗುಣವಾಗುತ್ತದೆ.
ಅನ್ನ ದಾನ ಮಾಡಲು ₹200 ಶುಲ್ಕ ಪಾವತಿ ಮಾಡಬೇಕು ಮತ್ತು ಮೃತ್ಯುಂಜಯ ಹೋಮದ ಶುಲ್ಕ ₹150 ಪಾವತಿ ಮಾಡಬೇಕು. ಹೆಚ್ಚಿನ ಜನರಿಗೆ ಅವರ ಸಮಸ್ಯೆಗೆ ಪರಿಹಾರ ದೊರಕಿದೆ. ವೈದ್ಯರಿಂದ ಸಾಧ್ಯವಾಗದ ಎಷ್ಟೋ ಮೂಳೆಯ ರೋಗಗಳು ಇಲ್ಲಿ ಪರಿಹಾರ ಕಂಡಿವೆ.
ಈ ದೇವಸ್ಥಾನಕ್ಕೆ ವಿಜ್ಞಾನಿಗಳು ಭೇಟಿ ನೀಡಿದ್ದು ಈ ಪವಾಡದ ಹಿಂದೆ ಇರುವ ರಹಸ್ಯ ಭೇದಿಸಿದ್ದಾರೆ ಮತ್ತು ವೈಜ್ಞಾನಿಕ ಕಾರಣ ತಿಳಿಸಿದ್ದಾರೆ. ದೇವಸ್ಥಾನದಲ್ಲಿ ನೆಲೆಸಿರುವ 12 ಜೋತಿರ್ಲಿಂಗಗಳು ಮತ್ತು 13,000 ನರ್ಮದೇಶ್ವರ ಲಿಂಗದಲ್ಲಿ ಹೆಚ್ಚಿನ ಮ್ಯಾಗ್ನೆಟಿಕ್ ಮತ್ತು ಸಕಾರಾತ್ಮಕ ಎನರ್ಜಿ ಕಂಡು ಬಂದಿದೆ.
1,000 ಶಿವ ಸೇರಿಸಿದರೆ ಎಷ್ಟು ಮ್ಯಾಗ್ನೆಟಿಕ್ ಎನರ್ಜಿ ಉತ್ಪತ್ತಿ ಆಗುತ್ತದೆಯೋ ಅಷ್ಟು ಎನರ್ಜಿ ಈ ಒಂದೇ ದೇವಸ್ಥಾನದಲ್ಲಿ ಕಾಣಾ ಸಿಗುತ್ತದೆ. ದೇವರ ಸುತ್ತ ಪ್ರದಕ್ಷಿಣೆ ಹಾಕುವಾಗ ಮ್ಯಾಗ್ನೆಟಿಕ್ ವೇವ್ಸ್ ಮನುಷ್ಯನ ದೇಹದಲ್ಲಿ ಮೂಳೆಯನ್ನು ಪ್ರವೇಶ ಮಾಡಿ ನೋವನ್ನು ಬೇಗ ನಿವಾರಣೆ ಮಾಡುತ್ತದೆ. ಇಲ್ಲಿ ದೇವರ ಪಾಸಿಟಿವ್ ಶಕ್ತಿ ಮತ್ತು ವಿಜ್ಞಾನ ಎರಡು ಸೇರಿ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಅವರ ಅನಿಸಿಕೆಯನ್ನು ಹೇಳಿದ್ದಾರೆ
ದೇವಸ್ಥಾನದ ವಿಳಾಸ :-ಓಂಕಾರ ಆಶ್ರಮ ಮಹಾ ಸಂಸ್ಥಾನ, ಓಂಕಾರ ಹಿಲ್ಸ್ ರೋಡ್, ಬನಶಂಕರಿ 6th ಸ್ಟೇಜ್ 11th ಬ್ಲಾಕ್ , ಶ್ರೀನಿವಾಸ್’ಪುರ ಬೆಂಗಳೂರು – 560060 ಕರ್ನಾಟಕ.
ದೇವಸ್ತಾನಕ್ಕೆ ಗೂಗಲ್ ಮ್ಯಾಪ್ :-ಶ್ರೀ ದ್ವಾದಶ ಜ್ಯೋತಿರ್ಲಿಂಗ ಶಿವ ಟೆಂಪಲ್.
https://goo.gl/maps/xPf7srMnFdnZoCuh8?entry=yt
ದೂರವಾಣಿ ಸಂಖ್ಯೆ :- 08028612586