ಬಡ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಕೆಲವು ವಿದ್ಯಾರ್ಥಿವೇತನ ನೀಡಲಾಗುತ್ತದೆ. ಎಲ್ ಐಸಿಯಿಂದ ಒಂದು ವಿದ್ಯಾರ್ಥಿವೇತನ ನೀಡಲಾಗುತ್ತದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಎಲ್ ಐಸಿಯು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾಧನ್ ಸ್ಕಾಲರ್ ಶಿಪ್ ಅನ್ನು ಲಾಂಚ್ ಮಾಡಿದೆ. ಹತ್ತನೇ ತರಗತಿಯಲ್ಲಿ ಪಾಸ್ ಆಗಿದ್ದು ಹನ್ನೊಂದನೆ ತರಗತಿಗೆ ಪ್ರವೇಶ ಪಡೆದವರಾಗಿದ್ದಾರೆ ಪದವಿ ಓದುತ್ತಿರುವವರು ಸ್ನಾತಕೊತ್ತರ ಪದವಿ ಓದುತ್ತಿರುವವರು ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಷಿಕವಾಗಿ 25000 ರೂಪಾಯಿವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. 10ನೆ ತರಗತಿ ಪಾಸಾಗಿ ಪಿಯುಸಿಗೆ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿರಬೇಕು.
ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪಾಸಾಗಿ ಸ್ನಾತಕೊತ್ತರ ಪದವಿ ಅಧ್ಯಯನಕ್ಕೆ ಅಡ್ಮಿಷನ್ ಪಡೆದಿರಬೇಕು. ಹತ್ತನೆ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ 15000 ರೂಪಾಯಿ ಎರಡು ವರ್ಷ ಬರುತ್ತದೆ. ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 25000 ರೂಪಾಯಿ ಮೂರು ವರ್ಷ ಬರುತ್ತದೆ. ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 20000ರೂಪಾಯಿ ಎರಡು ವರ್ಷ ಬರುತ್ತದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಹತ್ತನೆ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಯುಜಿ ಅಂಕಪಟ್ಟಿ, ಬ್ಯಾಂಕ್ ಪಾಸ್ ಬುಕ್, ಅಭ್ಯರ್ಥಿ ಭಾವಚಿತ್ರ, ಅಫಿಡೇವಿಟ್, ಪ್ರವೇಶ ಪಡೆದ ರಶೀದಿ ಇರಬೇಕು.
ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್www.lichousing.com ಭೇಟಿ ನೀಡಿ ಮುಖಪುಟದಲ್ಲಿ ಎಲ್ಐಸಿಎಚ್ಎಫ್ಎಲ್ ವಿದ್ಯಾಧನ ವಿದ್ಯಾರ್ಥಿವೇತನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ನಂತರ ಒಂದು ಪುಟ ತೆರೆಯುತ್ತದೆ ಆ ಪುಟದಲ್ಲಿ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ಇತ್ಯಾದಿ ವಿವರಗಳನ್ನು ಸಲ್ಲಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಎಲ್ಐಸಿಎಚ್ಎಫಎಲ್ ವಿದ್ಯಾಧನ ವಿದ್ಯಾರ್ಥಿವೇತನ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ನಂತರ ಆನಲೈನ್ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಿದ ಎಲ್ಲ ವಿವರಗಳು ಸರಿಯಾಗಿ ಇದೆಯೆ ಎಂದು ಪರಿಶೀಲಿಸಿ ಸಬಮಿ