ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಯನ್ನು ಸರ್ಕಾರ ಬಿಡುಗಡೆ ಮಾಡಿ ಅದರ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC ) ಹೊಸ ಬಸ್ಸುಗಳನ್ನು ಬಿಡುಗಡೆ ಮಾಡಿದೆ. ಏನಿದು? ನೋಡೋಣ ಬನ್ನಿ.
KSRTC ಸಂಸ್ಥೆ 1,000 ನೂತನ ಬಸ್ಸುಗಳನ್ನು ಖರೀದಿ ಮಾಡಿದೆ. ಪ್ರಸ್ತುತ ಪ್ರಥಮ ಹಂತದಲ್ಲಿ 100 ಬಸ್’ಗಳನ್ನು ” ಪ್ರಯಾಣದ ಮರುಕಲ್ಪನೆ ” ಎನ್ನುವ ಅಡಿಬರಹದ ಜೊತೆಗೆ ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಅಶ್ವಮೇಧ ಬಸ್ ಸಂಚಾರ ಮಾಡುತ್ತದೆ. ಫೆಬ್ರವರಿ 05 2024ರ ಬೆಳಗ್ಗೆ ಬೆಂಗಳೂರಿನ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಬಸ್’ಗಳಿಗೆ ಚಾಲನೆ ನೀಡಿದ್ದಾರೆ.
ಇತರೆ ಬಸ್ಸುಗಳು ಮತ್ತು ಅಶ್ವಮೇಧ ಕ್ಲಾಸಿಕ್ ಬಸ್’ಗಳಲ್ಲಿ ಇರುವ ವ್ಯತ್ಯಾಸ ಏನು? ಎಂದು ನೋಡೋಣ :- ಅಶ್ವಮೇಧ ಬಸ್ ಮುಂದಿನ ಭಾಗದಲ್ಲಿ ಇರುವ ಗಾಜು ಬೇರೆ ಬಸ್ ಗಾಜಿಗಿಂತ ದೊಡ್ಡದಾಗಿ ಇದೆ. ಮೊದಲು ಇದ್ದ ಬಸ್’ಗಳಲ್ಲಿ ಹೆಸರು ತೋರಿಸುವ ಫಲಕ ಕೆಂಪು ಮತ್ತು ಕಪ್ಪು ಅಕ್ಷರದಲ್ಲಿ ಇರುತ್ತಿತ್ತು. ಆದರೆ ಅಶ್ವಮೇಧ ಕ್ಲಾಸಿಕ್ ಬಸ್’ನಲ್ಲಿ ಬಸ್ ತಲುಪುವ ಸ್ಥಳಗಳ ಪೂರ್ಣ ವಿವರ ಎಲ್.ಇ.ಡಿ. ಸ್ಕ್ರೀನ್ ಮೇಲೆ ತೋರಿಸುತ್ತದೆ.
ಅಶ್ವಮೇಧ ಬಸ್’ನ ಎತ್ತರ 3.42 ಅಡಿ. ಈ ಬಸ್ಸುಗಳಲ್ಲಿ ಎಸಿ ಸೌಲಭ್ಯ ಇಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ರೇರ್ ಕ್ಯಾಮರಾವನ್ನು ಅಡವಳಿಸಲಾಗಿದೆ. ಮೊದಲ ಸಾರಿ ಬಸ್ ಮುಂದಿನ ಭಾಗದಲ್ಲಿ ಟಿಂಟರ್ ಗ್ಲಾಸ್ ಅಡವಳಿಸಲಾಗಿದ.
ಅಶ್ವಮೇಧ ಬಸ್ 52 ಸಿಟ್’ಗಳನ್ನು ಒಳಗೊಂಡಿದೆ. ಎಲ್ಲಾ ಸಿಟ್’ಗಳು ಬಕೆಟ್ ವಿನ್ಯಾಸದಿಂದ ಕೂಡಿದೆ. ಆದ್ದರಿಂದ ಪ್ರಯಾಣಿಕರು ಆರಾಮವಾಗಿ ಪ್ರಯಾಣ ಮಾಡಬಹುದು. ಬಸ್’ನಲ್ಲಿ ಜಿಪಿಎಸ್ ಟ್ರಾಕರ್ ಅಡವಳಿಕೆ ಮಾಡಲಾಗಿದೆ. ಪ್ರತಿ ಸಿಟ್ ಬಳಿ ಪ್ಯಾನಿಕ್ ಬಟನ್ ( ಎಮರ್ಜೆನ್ಸಿ ಬಟನ್ ) ಅಡವಳಿಕೆ ಮಾಡಲಾಗಿದೆ. ಬಸ್’ನಲ್ಲಿ ಯಾರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರು, ಈ ಬಟನ್ ಒತ್ತಿದ ತಕ್ಷಣ ಆ ಮಾಹಿತಿ ನೇರ ಕಂಟ್ರೋಲ್ ರೂಂಗೆ ತಲುಪುತ್ತದೆ.
ಕಂಟ್ರೋಲ್ ರೂಂನಿಂದ ಬಸ್ ನಿರ್ವಾಹಕರು ಇಲ್ಲವೇ ಚಾಲಕರಿಗೆ ತಕ್ಷಣ ಕಾಲ್ ಮಾಡಿ. ಬಸ್’ನಲ್ಲಿ ಯಾರಿಗೆ ಸಮಸ್ಯೆಯಾಗಿದೆ ಎನ್ನುವುದನ್ನು ವಿಚಾರಣೆ ಮಾಡಿ ಮತ್ತು ಆ ತಕ್ಷಣಕ್ಕೆ ಸಮಸ್ಯೆಗೆ ಗುರಿಯಾದ ವ್ಯಕ್ತಿಗೆ ಸಹಾಯ ಮಾಡುವರು. ಈ ಮೊದಲು ಇದ್ದ ಬಸ್’ಗಳಲ್ಲಿ ಲಗೇಜ್ ಇಡಲು ಹೆಚ್ಚಿನ ಸ್ಥಳಾವಕಾಶ ಇರಲಿಲ್ಲ. ಅಶ್ವಮೇಧ ಬಸ್’ನಲ್ಲಿ ದೊಡ್ಡ ದೊಡ್ಡ ಲಗೇಜ್ ಇಡಲು ಹೆಚ್ಚಿನ ಸ್ಥಳಾವಕಾಶ ಮಾಡಲಾಗಿದೆ. ಪ್ರಸ್ತುತ ಮೊಬೈಲ್ ಪ್ರತಿ ಒಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಜನರು ಪ್ರಯಾಣ ಮಾಡುವ ಸಮಯದಲ್ಲಿ ಅವರ ಮೊಬೈಲ್ ಚಾರ್ಜ್ ಕಡಿಮೆ ಆದರೆ ಚಾರ್ಜ್ ಹಾಕಲು ಒಟ್ಟು 6 ಮೊಬೈಲ್ ಚಾರ್ಜಿಂಗ್ ಪಿನ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ.
ಅನಿರೀಕ್ಷಿತ ಅಪಘಾತ ಸಂಭವಿಸಿದಾಗ ಅದರಿಂದ ಪಾರಾಗಲು ಹ್ಯಾಮರ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಏನಾದರೂ ಬೆಂಕಿಯ ಅವಘಡ ಎದುರಾದರೆ ಫೈಯರ್ ಡಿಸ್ಟಿಂಕ್ಷನ್ ( fire distinction ) ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಬಸ್ ಪ್ರಯಾಣ ಮಾಡುವವರ ಜೊತೆಗೆ ಬಸ್ ಚಾಲಕರಿಗೂ ಸಹ ಉನ್ನತ ಮಟ್ಟದ ಸಿಟ್ ವ್ಯವಸ್ಥೆ ಇದೆ. ಬಸ್ ಬಾಗಿಲು ತೆರೆಯಲು ಮತ್ತು ಮುಚ್ಚಲು ಬಟನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ಈ ಹಿಂದೆ ಚಾಲಕರು ಪ್ರತಿ ಸಲ ರೂಟ್ ಬದಲಾವಣೆ ಮಾಡಿದಾಗ ಬೋರ್ಡ್ ಬದಲಾಯಿಸಿಕೊಂಡು ವಾಹನ ಚಲಾಯಿಸಿ ಬೇಕಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಸುಧಾರಣೆ ಇದೆ ಮತ್ತು ಬಸ್ ಚಲಾಯಿಸಲು ಹೆಚ್ಚು ಖುಷಿ ಇದೆ ಎಂದು KSRTC ಬಸ್ ಚಾಲಕರು ಅವರ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ಅಶ್ವಮೇಧ ಬಸ್ ಎಕ್ಸ್ಪ್ರೆಸ್ ಬಸ್ ಮತ್ತು ಇನ್ನು ಮುಂದೆ ಸಾರ್ವಜನಿಕರು ಕೂಡ ಅದರಲ್ಲಿ ಪ್ರಯಾಣ ಮಾಡಬಹುದು. ಇದು ಸರ್ಕಾರದ ಕಡೆಯಿಂದ ಬಂದ ಹೊಸ ಯೋಜನೆ.