Pradhan Mantri Shram Dhan Yojana: ನಮ್ಮ ದೇಶದಲ್ಲಿ ಅಸಾಂಘಿತ ಕಾರ್ಮಿಕ ವರ್ಗದಲ್ಲಿ ಕೋಟ್ಯಾಂತರ ಜನರಿದ್ದಾರೆ. ಇವರೆಲ್ಲರೂ ಬಹಳಷ್ಟು ರೀತಿಯ ಕೆಲಸ ಮಾಡುತ್ತಿದ್ದಾರೆ, ಕಟ್ಟಡ ಕಾರ್ಮಿಕರಿಂದ ಹಿಡಿದು ಚಿಂದಿ ಪೇಪರ್ ಆಯುವವರವರೆಗು ಕೋಟ್ಯಾಂತರ ಜನರಿದ್ದಾರೆ. ಈ ಶ್ರಮಜೀವಿಗಳಿಗೆ ಪ್ರತಿ ತಿಂಗಳು ಪೆನ್ಷನ್ ಬರಬೇಕು ಎನ್ನುವ ಆಶಯವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಕೇವಲ 2 ರೂಪಾಯಿ ಉಳಿತಾಯ ಮಾಡಿದರೆ ಸಾಕು.
ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿಕೊಡುತ್ತೇವೆ..ಈ ಯೋಜನೆಯಲ್ಲಿ ಹೊಡಿಕೆ ಮಾಡಲು ಬಯಸುವವರು, 18ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ ತಿಂಗಳಿಗೆ ₹55 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ದಿನಕ್ಕೆ 2 ರೂಪಾಯಿಗಿಂತ ಕಡಿಮೆ ಹೂಡಿಕೆ ಇದಾಗಿದ್ದು, ಇಷ್ಟು ಹಣ ಹೂಡಿಕೆ ಮಾಡುತ್ತಾ ಬಂದರೆ, ನಿಮಗೆ 60 ವರ್ಷವಾದ ನಂತರ ವಾರ್ಷಿಕವಾಗಿ ₹36,000 ರೂಪಾಯಿಗಳು ಪೆನ್ಶನ್ ರೂಪದಲ್ಲಿ ಸಿಗುತ್ತದೆ. 40ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ, ಪ್ರತಿ ತಿಂಗಳು ₹200 ರೂಪಾಯಿ ಪಾವತಿ ಮಾಡಬೇಕು.
60 ವರ್ಷಗಳಾದ ನಂತರ ಪೆನ್ಶನ್ ಪಡೆಯಲು ಅರ್ಹತೆ ಪಡೆಯುತ್ತೀರಿ. 60 ವರ್ಷವಾದ ನಂತರ ಪ್ರತಿ ತಿಂಗಳು ₹3,000 ಪೆನ್ಶನ್ ಬರುತ್ತದೆ. ಈ ಯೋಜನೆಗೆ ಸೇರಲು ಬೇಕಾಗುವ ಅರ್ಹತೆ ಏನೇನು ಎಂದು ನೋಡುವುದಾದರೆ, 18 ರಿಂದ 40 ವರ್ಷಗಳ ಒಳಗಿರುವ ವ್ಯಕ್ತಿಗಳ ಮಾಸಿಕ ಆದಾಯ ₹15,000 ಕ್ಕಿಂತ ಕಡಿಮೆ ಇದ್ದರೆ, ಅವರು ತೆರಿಗೆ ಪಾವತಿ ದಾರರಾಗಿರದೆ ಇದ್ದರೆ, ESI/PF ಈ ಯೋಜನೆಗಳನ್ನು ಪಡೆಯದೆ ಇರುವವರು ಪಿಎಮ್ ಶ್ರಮಯೋಗಿ ಮನ್ ಧನ್ ಯೋಜನೆಯ ಸೌಲಭ್ಯ ಪಡೆಯಬಹುದು.
ಅರ್ಹತೆ ಇರುವವರು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. LIC ಹಾಗೂ SSC ವಿವರಗಳು ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಸಿಗುತ್ತದೆ. ಅರ್ಜಿ ಹಾಕುವವರ ಬಳಿ ಯಾವೆಲ್ಲಾ ದಾಖಲೆಗಳು ಇರಬೇಕು ಎಂದರೆ, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಹಾಗೂ ಓಟಿಪಿ ಬರುವುದಕ್ಕೆ ನಿಮ್ಮ ಫೋನ್. ಇದಿಷ್ಟರ ಜೊತೆಗೆ ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಿ. ಮೊದಲಿಗೆ ನಿಮ್ಮ ವಯಸ್ಸಿನ ಆಧಾರದ ಮೇಲೆ ಮೊದಲ ಗ್ಯಾಚ್ಯುಟಿ ಮೊತ್ತವನ್ನು ಕ್ಯಾಶ್ ರೂಪದಲ್ಲಿ ಪಡೆಯಬಹುದು.
ನಂತರ ಪ್ರತಿ ತಿಂಗಳು ಅಕೌಂಟ್ ಇಂದ ಹಣ ಡೆಬಿಟ್ ಆಗುವ ಹಾಗೆ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ಯಾವೆಲ್ಲಾ ಪ್ರಯೋಜನ ಸಿಗುತ್ತದೆ ಎಂದರೆ, ಫಲಾನುಭವಿಗೆ ಪ್ರತಿ ತಿಂಗಳು ₹3000ಪೆನ್ಶನ್ ಬರುತ್ತದೆ. ಅಕಸ್ಮಾತ್ ಅವರು 60 ವರ್ಷಕ್ಕಿಂತ ಮರಣ ಹೊಂದಿದರೆ, ಅವರ ಸಂಗಾತಿಗೆ ಪೆನ್ಶನ್ ಬರುತ್ತದೆ. 60 ವರ್ಷಕ್ಕಿಂತ ಮೊದಲೇ ಈ ಯೋಜನೆಯನ್ನು ವಿತ್ ಡ್ರಾ ಮಾಡುತ್ತಾರೆ ಎಂದರೆ, ಆಗ ಬಡ್ಡಿ ಜೊತೆಗೆ ಪಾವತಿ ಮಾಡಿರುವ ಪ್ರೀಮಿಯಂ ಮಾತ್ರ ವಾಪಸ್ ಪಡೆಯುತ್ತಾರೆ.