ನಮ್ಮ ರಾಜ್ಯದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ಧರ್ಮಸ್ಥಳದ ಸಂಸ್ಥೆಗಳು ಜನರಿಗೆ ಒಳ್ಳೆಯದನ್ನು ಮಾಡುವಂಥ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಅವುಗಳ ಪೈಕಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೂಡ ಇದು, ಈ ಯೋಜನೆಯ ಮೂಲಕ ಸ್ವಸಹಾಯ ಗುಂಪುಗಳಲ್ಲಿ ಇರುವ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ಕೊಡುವ ಮೂಲಕ ಅವರಿಗೆ ಶಿಕ್ಷಣಕ್ಕೆ ಸಹಾಯ ಮಾಡಲಾಗುತ್ತಿದೆ. ಡಾ. ವೀರೇಂದ್ರ ಹೆಗ್ಡೆ ಅವರು ಈ ಸ್ಕಾಲರ್ಶಿಪ್ ಯೋಜನೆಯನ್ನು 2007ರಲ್ಲಿ ಶುರು ಮಾಡಿದರು..
ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಶುರು ಮಡಿರುವ ಯೋಜಜೆ. ಇಂಜಿನಿಯರಿಂಗ್ ಹಾಗೂ ಇನ್ನಿತರ ತಾಂತ್ರಿಕ ಕೋರ್ಸ್ ಗಳನ್ನು ಮಾಡುತ್ತಿರುವವರು ಈ ಸ್ಕಾಲರ್ಶಿಪ್ ಪಡೆಯಬಹುದು, ಬಡತನದಲ್ಲಿ ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಹಾಯ ಮಾಡಲಿದೆ.. ಇಲ್ಲಿಯವರೆಗೂ 75,500 ವಿದ್ಯಾರ್ಥಿಗಳಿಗೆ 87 ಕೋಟಿ ಖರ್ಚು ಮಾಡಲಾಗಿದೆ. ಈ ಸ್ಕಾಲರ್ಶಿಪ್ ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರಿಗೆಲ್ಲಾ ಸಾಧ್ಯವಾಗುತ್ತದೆ ಎಂದರೆ, ಧರ್ಮಸ್ಥಳ ಸಂಸ್ಥೆಯ ಪ್ರಗತಿ ಬಂದು ಅಥವಾ ಸ್ವಸಹಾಯ ಸಂಘಗಳಲ್ಲಿ ಸದಸ್ಯತ್ವ ಪಡೆದಿರುವಂಥ ತಂದೆ ತಾಯಿಯ ಮಕ್ಕಳು, ತಾಂತ್ರಿಕ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದಿದ್ದರೆ, ಅಂಥವರು ಅರ್ಜಿ ಸಲ್ಲಿಸಬಹುದು.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ, ಕೋರ್ಸ್ ಮುಗಿಯುವವರೆಗೂ ಪ್ರತಿ ವರ್ಷ ಇಂತಿಷ್ಟು ಎಂದು ಸ್ಕಾಲರ್ಶಿಪ್ ವೇತನವನ್ನು ನೀಡಲಾಗುತ್ತದೆ. ಇದಕ್ಕೆ ಒಂದು ಉದಾಹರಣೆ ಐಟಿಐ ಓದಿರುವವರಿಗೆ ವರ್ಷಕ್ಕೆ 4000 ಸ್ಕಾಲರ್ಶಿಪ್ ಸಿಗುತ್ತದೆ.
ಈ ಸ್ಕಾಲರ್ಶಿಪ್ ಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಕೆಗೆ ಕೆಲವು ದಾಖಲೆಗಳು ಬೇಕಾಗುತ್ತದೆಯೋ ಅದೆಲ್ಲವನ್ನು ತೆಗೆದುಕೊಂಡು ಹೋಗಬೇಕು. SRDRDP ಗೆ ಸೇರಿದ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. 2024ರ ಫೆಬ್ರವರಿ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ. ಹೆಚ್ಚಿನ ಮಾಹಿತಿ ಪಡೆಯಲು ಈ 9591770660, 6366358320. ನಂಬರ್ ಗಳಿಗೆ ಕಾಲ್ ಮಾಡಬಹುದು.
ಮೊದಲ ಸಾರಿ ಅರ್ಜಿ ಸಲ್ಲಿಸುತ್ತಿರುವವರು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾರೆ..
10ನೇ ತರಗತಿ ಮಾರ್ಕ್ಸ್ ಕಾರ್ಡ್
ಈಗ ಪ್ರವೇಶಾತಿ ಪಡೆದಿರುವ ಕಾಲೇಜಿನ ದೃಢೀಕರಿಸಿದ ಪತ್ರ ಹಾಗೂ ಫೀಸ್ ಕಟ್ಟಿರುವ ರಶೀದಿ.
ಯೋಜನಾ ಕಚೇರಿ ಇಂದ ಶಿಫಾರಸು ಪತ್ರ
ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್*ಆಧಾರ್ ಕಾರ್ಡ್
ತಂದೆ ತಾಯಿಯ ಆಧಾರ್ ಕಾರ್ಡ್
ಪೋಷಕರ ಆಧಾರ್ ಕಾರ್ಡ್
ರೇಷನ್ ಕಾರ್ಡ್
ನವೀಕರಣ ಮಾಡಿಸುವ ವಿದ್ಯಾರ್ಥಿಗಳ ಬಳಿ ಈ ದಾಖಲೆಗಳು ಇರಬೇಕು..
ಕೋರ್ಸ್ ನ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
ಈಗ ಪ್ರವೇಶಾತಿ ಪಡೆದಿರುವ ಕಾಲೇಜಿನ ದೃಢೀಕರಿಸಿದ ಪತ್ರ ಹಾಗೂ ಫೀಸ್ ಕಟ್ಟಿರುವ ರಶೀದಿ.
ಯೋಜನಾ ಕಚೇರಿ ಇಂದ ಶಿಫಾರಸು ಪತ್ರ.
ತಂದೆ ತಾಯಿಯ ಆಧಾರ್ ಕಾರ್ಡ್
ಪೋಷಕರ ಸಂಘದ ನಿರ್ಣಯ ಪುಸ್ತಕ
ಪೋಷಕರ ಆಧಾರ್ ಕಾರ್ಡ್
ರೇಷನ್ ಕಾರ್ಡ್