ನಮ್ಮ ದೇಶದ ಯುವಜನತೆಗೆ ಸಿವಿಲ್ ಸರ್ವಿಸ್ ಪರೀಕ್ಷೆ ಕ್ಲಿಯರ್ ಮಾಡಬೇಕು ಎಂದು ಆಸೆ ಇರುತ್ತದೆ. ಐಪಿಎಸ್, ಐಎಎಸ್ ಆಗಬೇಕು ಎಂದು ಬಯಸುತ್ತಾರೆ, ತಯಾರಿಯನ್ನು ಮಾಡುತ್ತಾರೆ. ಆದರೆ ಎಲ್ಲರಿಗೂ ಕೂಡ ಆ ಪರೀಕ್ಷೆ ಕ್ಲಿಯರ್ ಮಾಡಲು ಆಗೋದಿಲ್ಲ. ಯಾಕೆಂದರೆ ಅದು ಕಷ್ಟದ ಪರೀಕ್ಷೆ, ಈ ಒಬ್ಬ ಐಪಿಎಸ್ ಅಧಿಕಾರಿ ತಮ್ಮ ಗರ್ಲ್ ಫ್ರೆಂಡ್ ಹಾಕಿದ ಶರತ್ತನ್ನು ಸೀರಿಯಸ್ ಆಗಿ ತೆಗೆದುಕೊಂಡು ಓದಿ ಐಪಿಎಸ್ ಅಧಿಕಾರಿಯಾದರು. ಇವರ ಸ್ಪೂರ್ತಿದಾಯಕ ಕಥೆ ಇಂದು ನಿಮ್ಮ ಮುಂದೆ..

ಈ ಐಪಿಎಸ್ ಅಧಿಕಾರಿಯ ಹೆಸರು ಮನೋಜ್ ಕುಮಾರ್ ಶರ್ಮ, ಇವರು ನಮ್ಮ ದೇಶದ ದಕ್ಷ ಐಪಿಎಸ್ ಅಧಿಕಾರಿ. ಮನೋಜ್ ಕುಮಾರ್ ಅವರು ಮೂಲತಃ ಮಧ್ಯಪ್ರದೇಶದ, ಮೊರೆನಾ ಜಿಲ್ಲೆಯವರು. ಮನೋಜ್ ಕುಮಾರ್ ಅವರು ಹುಟ್ಟಿದ್ದು ಬಡತನದ ಕುಟುಂಬದಲ್ಲಿ, ಹಾಗೆಯೇ ಇವರು ಓದಿನಲ್ಲಿ ಹಿಂದುಳಿದಿದ್ದರು, ಓದುವ ಕಡೆ ಹೆಚ್ಚು ಆಸಕ್ತಿ ಕೂಡ ಇವರಲ್ಲಿ ಇರಲಿಲ್ಲ. 9 ಮತ್ತು 10ನೇ ತರಗತಿಯಲ್ಲಿ ಕೇವಲ ಜಸ್ಟ್ ಪಾಸ್ ಆಗಿದ್ದರು.

12ನೇ ತರಗತಿಯಲ್ಲಿ ಹಿಂದಿ ಒಂದು ಸಬ್ಜೆಕ್ಟ್ ಬಿಟ್ಟು, ಬೇರೆಲ್ಲಾ ಸಬ್ಜೆಕ್ಟ್ ಗಳಲ್ಲಿ ಫೇಲ್ ಆಗಿದ್ದರು. ಓದಿನಲ್ಲಿ ಹಿಂದಿದ್ದು, ಬಡತನದ ಕುಟುಂಬದಲ್ಲಿ ಜನಿಸಿದ್ದ ಕಾರಣ ಓದನ್ನು ಪೂರ್ತಿ ಮಾಡಿಕೊಳ್ಳಲು ಟೆಂಪೋ ಓಡಿಸುತ್ತಿದ್ದರಂತೆ ಮನೋಜ್. ಕೆಲವೊಮ್ಮೆ ಇಡೀ ರಾತ್ರಿ ಟೆಂಪೋ ಓಡಿಸಬೇಕಿತ್ತು, ರಸ್ತೆಯಲ್ಲಿ ಭಿಕ್ಷುಕರ ಜೊತೆಗೆ ಮಲಗುವ ಪರಿಸ್ಥಿತಿ ಸಹ ಎದುರಾಗಿದೆ. ಇಷ್ಟೆಲ್ಲಾ ಕಷ್ಟಪಟ್ಟಿರುವ ಇವರು ಛಲ ಬಿಡಲಿಲ್ಲ, ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆ ಆಗಿರುವ UPSC ಪರೀಕ್ಷೆಯನ್ನು ಕ್ಲಿಯರ್ ಮಾಡಿದರು.

12ನೇ ತರಗತಿಯಲ್ಲಿ ಓದುವಾಗ ಶ್ರದ್ಧಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದರು ಮನೋಜ್. ಫೇಲ್ ಆದ ಕಾರಣ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಹಿಂದೇಟು ಹಾಕಿದ್ದರು, ಕೆಲ ಸಮಯ ಯೋಚಿಸಿ, ಆಕೆಗೆ ಪ್ರೀತಿಯನ್ನು ಹೇಳಿದಾಗ, ಶ್ರದ್ಧಾ ಒಂದು ಶರತ್ತು ಹಾಕಿದರು. ತಮ್ಮನ್ನು ಮದುವೆಯಾಗಬೇಕು ಎಂದರೆ, ಐಪಿಎಸ್ ಪರೀಕ್ಷೆ ಪಾಸ್ ಮಾಡಬೇಕು ಎಂದು ಹೇಳಿದ್ದರು. ಆಕೆ ಹೇಳಿದ ಮಾತಿಗೆ ಸೀರಿಯಸ್ ಆಗಿ ಓದುವುದಕ್ಕೆ ಶುರು ಮಾಡಿದರು ಮನೋಜ್.

UPSC ಪರೀಕ್ಷೆಗೆ ಮನೋಜ್ ಅವರು ಪ್ರಿಪೇರ್ ಆಗುತ್ತಿದ್ದಾಗ, ಅವರಿಗೆ ಶ್ರದ್ಧಾ ಸಹಾಯ ಮಾಡಿದ್ದರು. ಮೂರು ಬಾರಿ UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು ಮನೋಜ್, ಆದರೆ 4ನೇ ಬಾರಿ 121ನೇ ರಾಂಕ್ ಪಡೆದು ಉತ್ತೀರ್ಣರಾದರು. ಈಗ ಮುಂಬೈ ವಿಭಾಗದಲ್ಲಿ ಹೆಚ್ಚುವರಿ ಅಸಿಸ್ಟಂಟ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರದ್ದು ನಿಜಕ್ಕೂ ಸ್ಪೂರ್ತಿದಾಯಕ ಕಥೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!