ಒಂದು ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕೆ ಇಷ್ಟು ದಿನಗಳವರೆಗು ಸುಮಾರು 30 ರಿಂದ 45 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು, ಈ ವೇಳೆ ಸರ್ಕಾರವು ಈ ರಿಜಿಸ್ಟ್ರೇಷನ್ ಬಗ್ಗೆ ತಕರಾರು ಅರ್ಜಿ ಸಲ್ಲಿಸಲು 30 ದಿನಗಳ ಸಮಯ ನೀಡುತ್ತಿದ್ದು, ಈ ವೇಳೆ ತಕರಾರು ಇದ್ದವರು ಅರ್ಜಿ ಸಲ್ಲಿಸಬಹುದಿತ್ತು, ಆದರೆ ತಕರಾರು ಅರ್ಜಿ ಸಲ್ಲಿಸುವವರು ಈ ವ್ಯವಸ್ಥೆಯ ದುರುಪಯೋಗ ಮಾಡಿಕೊಂಡಿದ್ದೇ ಹೆಚ್ಚು. ಈ ಕಾರಣಕ್ಕೆ ಸರ್ಕಾರ ಈಗ ಹೊಸ ಕಾನೂನನ್ನು ಜಾರಿಗೆ ತಂದಿದೆ.
ಒಂದು ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕಾಗಿ ಇನ್ಮುಂದೆ 7 ದಿನಗಳ ಸಮಯ ಸಾಕು, ಮ್ಯುಟೇಶನ್ ಮೂಲಕ ಕೇವಲ 7 ದಿನಗಳಲ್ಲಿ ಈ ಕೆಲಸ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಒಂದು ಜಮೀನು ರಿಜಿಸ್ಟರ್ ಆದ ಬಳಿಕ ಕೇಂದ್ರದಿಂದ ಆಸ್ತಿಯ ಹಕ್ಕು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಮ್ಯುಟೇಶನ್ ಎಂದು ಕರೆಯುತ್ತಾರೆ. ಆಸ್ತಿಗಳನ್ನು ಕ್ರಯ, ವಿಭಾಡ, ದಾನ ಅಥವಾ ಪೌತಿ ಖಾತೆ ಮಾಡುವ ಮೂಲಕ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಿಕೊಳ್ಳಬಹುದು.
ಕ್ರಯ ಪತ್ರ :- ಒಂದು ಆಸ್ತಿ ಮಾರಾಟ ಆದ ನಂತರ ಕ್ರಯ ಪತ್ರದ ಮೂಲಕ ಆಸ್ತಿಯ ಹಕ್ಕನ್ನು ವರ್ಗಾವಣೆ ಮಾಡಲಾಗುತ್ತದೆ. ಈ ರೀತಿ ಮ್ಯುಟೇಶನ್ ಮೂಲಕ ಹಕ್ಕು ವರ್ಗಾವಣೆಗೆ 30 ರಿಂದ 45 ದಿನಗಳವರೆಗು ಸಮಯ ತೆಗೆದುಕೊಳ್ಳುತ್ತಿತ್ತು, ಇದರಲ್ಲಿ ತಕರಾರು ಅರ್ಜಿ ಸಲ್ಲಿಸಲು 30 ದಿನಗಳ ಸಮಯ ಇರುತ್ತಿತ್ತು, ಈಗ ಈ ಸಮಯವನ್ನು 7 ದಿನಕ್ಕೆ ಇಳಿಸಲಾಗಿದೆ.
ದಾನ ಪತ್ರ :- ದಾನ ಪತ್ರದ ಮೂಲಕ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆ ಕೂಡ 30 ರಿಂದ 45 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಈ ಪ್ರಕ್ರಿಯೆಗೆ 15 ದಿನಗಳ ಸಮಯ ಸಾಕು.
ಪೌತಿ ಖಾತೆ :- ಆಸ್ತಿಯ ಮಾಲೀಕರು ನಿಧನರಾದರೆ, ಪೌತಿ ಖಾತೆಯ ಮೂಲಕ ಅವರ ವಾರಸುದಾರರಿಗೆ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೂ 30 ರಿಂದ 45 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ 15 ದಿನಗಳ ಸಮಯ ಸಾಕು.
ಇದರಿಂದ ಎಷ್ಟು ಒಳ್ಳೆಯದೋ, ಅಷ್ಟೇ ಅನಾನುಕೂಲತೆ ಸಹ ಇದೆ. ತಕರಾರು ಅರ್ಜಿ ಸಲ್ಲಿಕೆಗೆ ಕಡಿಮೆ ಸಮಯ, ಹಾಗಾಗಿ ದಾಖಲೆಗಳನ್ನಿ ದೃಢೀಕರಣ ಮಾಡಲು ಕೂಡ ಕಷ್ಟವಾಗುತ್ತದೆ. ಹಾಗೆಯೇ ಮೋಸದಿಂದ ಬೇಗ ಕೆಲಸ ಆಗಬೇಕು ಎಂದುಕೊಳ್ಳುವವರಿಗೆ ಇದು ಒಳ್ಳೆಯ ಅವಕಾಶ ಆಗಿರುತ್ತದೆ. ಹಾಗಾಗಿ ಏನೇ ಇದ್ದರೂ ಚೆನ್ನಾಗಿ, ಓದಿ ತಿಳಿದುಕೊಂಡು ನಂತರ ಕೆಲಸಗಳನ್ನು ಮುಂದುವರೆಸಿ.