ನಿನ್ನೆಯಷ್ಟೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಇದು ಒಂದು ದಿನ ಅಥವಾ ಕೆಲ ವರ್ಷಗಳ ಕನಸಲ್ಲ, ಎಲ್ಲಾ ಭಾರತೀಯರ 500 ವರ್ಷಗಳ ಕನಸು, ಹೋರಾಟದ ಪ್ರತಿಫಲ. ನಿನ್ನೆ ಶ್ರೀರಾಮಮಂದಿರದ ಕಾರ್ಯ ನಡೆದಾಗ ಎಲ್ಲಾ ಭಾರತೀಯರು ಭಾವುಕರಾಗಿ, ಜೈ ಶ್ರೀರಾಮ ಎಂದು ಭಕ್ತಿಯಿಂದ ಹೇಳಿದ್ದಂತೂ ನಿಜ. ಈ ಬೃಹತ್ ಕಾರ್ಯ ನಡೆಯುವುದಕ್ಕೆ ಸಾವಿರಾರು, ಲಕ್ಷಾಂತರ ಜನರ ಹೋರಾಟವಿದೆ..
ಇದಕ್ಕೆ ಮುಖ್ಯವಾಗಿ ಕಾರಣಕರ್ತರಾದವರಲ್ಲಿ ಒಬ್ಬರ ಬಗ್ಗೆ ನಾವು ತಿಳಿಯಲೇಬೇಕು. ಅದು ಈ ಕೇಸ್ ಗಾಗಿ ಒಂದು ರೂಪಾಯಿಯನ್ನು ಪಡೆಯದೇ, ಶ್ರೀರಾಮನಿಗಾಗಿ ಹೋರಾಟ ಮಾಡಿದ ವಕೀಲರು. 2019ರಲ್ಲಿ ಇವರು ಸತತವಾಗಿ ವಾದ ಮಾಡಿದ್ದರ ಪರವಾಗಿ ಅಯೋಧ್ಯೆಯ ದೇವಸ್ಥಾನದ ಜಾಗ ಶ್ರೀರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಸಿಕ್ಕಿತು..ಇದಕ್ಕಾಗಿ ಹೋರಾಟ ಮಾಡಿದ ಲಾಯರ್ ಗಳಲ್ಲಿ ಒಬ್ಬರು ಪ್ರಯಾಗ್ರಾಜ್ ಗೆ ಸೇರಿದ ಹರಿಶಂಕರ್ ಜೈನ್ ಅವರು.
ಇವರು 1978-79 ರಿಂದ ಅಲಹಾಬಾದ್ ಹೈಕೋರ್ಟ್ ನಲ್ಲಿ ಲಕ್ನೌ ಬೆಂಚ್ ಇಂದ, ಲಾಯರ್ ಕೆಲಸ ಶುರು ಮಾಡಿ, ನಂತರ ಸುಪ್ರೀಂ ಕೋರ್ಟ್ ನಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿದರು. ಹರಿಶಂಕರ್ ಅವರು ಇದುವರೆಗೂ 100 ಕ್ಕಿಂತ ಹೆಚ್ಚು ಕೇಸ್ ಗಳಲ್ಲಿ ವಾದ ಮಾಡಿ ಗೆದ್ದಿದ್ದಾರೆ. ಇವರ ಮಗ ವಿಷ್ಣು ಜೈನ್ ಅವರು ಕೂಡ ಲಾಯರ್ ಆಗಿದ್ದು, ಅವರು ಕೂಡ ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ, ಕಾಶಿ ವಿಶ್ವನಾಥ ಹಾಗೂ ಜ್ಞಾನವ್ಯಾಪಿ ಮಸೀದಿ, ಕೃಷ್ಣಜನ್ಮಭೂಮಿ ಹಾಗೂ ಈದ್ಗಾ ಈ ಕೇಸ್ ಗಳಲ್ಲಿ ಹೋರಾಟ ಮಾಡಿದ್ದಾರೆ.
ಈ ತಂದೆ ಮಗ ಇಬ್ಬರು ಕೂಡ ಹಿಂದುತ್ವದ ಪರವಾಗಿ ವಾದ ಮಾಡುತ್ತಿರುವ ಕೇಸ್ ಗಳಿಗೆ ಒಂದೇ ಒಂದು ರೂಪಾಯಿಯನ್ನು ಕೂಡ ಪಡೆಯುವುದಿಲ್ಲ. ಇದು ತಮ್ಮ ಸೇವೆ ಹಾಗೂ ಕರ್ತವ್ಯ ಎಂದು ಮಾಡುತ್ತಿದ್ದಾರೆ. 2016ರಲ್ಲಿ ಅಯೋಧ್ಯೆ ಕೇಸ್ ಇಂದಲೇ ವಿಷ್ಣು ಜೈನ್ ಅವರು ವಕೀಲಿ ವೃತ್ತಿ ಶುರು ಮಾಡಿದರು. ಇವರೆಲ್ಲರೂ ಪಟ್ಟ ಶ್ರಮ, ಅನೇಕ ಜನರ ತ್ಯಾಗದ ಫಲವಾಗಿ ಇಂದು ಭರತ ಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ.