ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹೊಸ ಆದೇಶ ನೀಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಪಡಿತರ ಚೀಟಿ ಹೊಂದಿರುವ ರೈತರಿಗೆ ರೇಷನ್ ವಿತರಣೆ ಮಾಡಲು ಇರುವ ಈ ಅಂಗಡಿಗಳು ಜನರಿಗೆ ಬಹಳ ಅವಶ್ಯಕವಾದದ್ದು. ಹೆಚ್ಚು ಜನರು ಇರುವ ಕಡೆ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಬಗ್ಗೆ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ನ್ಯಾಯಬೆಲೆ ಅಂಗಡಿ ತೆರೆಯಲು ಯಾವ ಪ್ರದೇಶದಲ್ಲಿ ಅವಕಾಶ ಸಿಕ್ಕಿದೆ ಎಂದು ನೋಡುವುದಾದರೆ.. ಅಂದರರಾಮೋಹಳ್ಳಿ ಗ್ರಾ.ಪಂಚಾಯಿತಿ ವ್ಯಾಪ್ತಿಯ ಭೀಮನಕುಪ್ಪೆ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600 ರಾಮೋಹಳ್ಳಿ ಗ್ರಾ.ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600, ತಾವರೇಕೆರೆ ಗ್ರಾ.ಪಂಚಾಯಿತಿ ವ್ಯಾಪ್ತಿಯ ತಾವರೇಕೆರೆ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 800 ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಿಗೆ, ಅಗರ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮೀಪುರ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600
ಅಗರ ಗ್ರಾ.ಪಂ ವ್ಯಾಪ್ತಿಯ ಬಂಜಾರಪಾಳ್ಯ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600, ವಾರ್ಡ್ 192 ಬೇಗೂರಿನಲ್ಲಿ ಒಟ್ಟು ಪಡಿತರ ಚೀಟಿ 800, ವಾರ್ಡ್ 187 ಪುಟ್ಟೇನಹಳ್ಳಿ ಒಟ್ಟು ಪಡಿತರ ಚೀಟಿ 800, ವಾರ್ಡ್ 190 ಮಂಗಮ್ಮನ ಪಾಳ್ಯದಲ್ಲಿ ಒಟ್ಟು ಪಡಿತರ ಚೀಟಿ 800, ವಾರ್ಡ್ 194 ಗೊಟ್ಟಿಗೆರೆ ಒಟ್ಟು ಪಡಿತರ ಚೀಟಿ 800. ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ, ತಾಲೂಕು ಕೃಷಿ ಪ್ರಾಥಮಿಕ ಪತ್ತಿನ ಮಾರಾಟ ಸರ್ಕಾರ ಸಂಘ, ಪ್ರಾಥಮಿಕ ಕೃಷಿ ಸಹಕಾರ ಸಂಘ, ವ್ಯವಸಾಯೋತ್ಪನ್ನ ಸಹಕಾರ ಸಂಘ, ತೋಟಗಾರಿಕೆ ಉತ್ಪನ್ನ ಬಳಕೆದಾರರ ಸಹಕಾರ ಸಂಘ..
ನೊಂದಾಯಿತ ಸಹಕಾರ ಸಂಘ, ನೊಂದಾಯಿತ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘ, ಬೃಹತ್ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು, ನೊಂದಾಯಿತ ನೇಕಾರರ ಸಹಕಾರ ಸಂಘಗಳು, ನೊಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳು, ನೊಂದಾಯಿತ ವಿವಿಧೋದ್ದೇಶ ಸಹಕಾರ ಸಂಘ, ವಿಕಲಚೇತನರ ಕಲ್ಯಾಣ ಸಹಕಾರ ಸಂಘಗಳು, ಬ್ಯಾಂಕ್ ನಡೆಸುತ್ತಿರುವ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್ ಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ನೊಂದಣಿ ಆಗಿರುವ ಸ್ತೀ ಶಕ್ತಿ ಸಂಘಗಳು ಮಹಿಳಾ ಸ್ವ ಸಹಾಯ ಸಂಘಗಳು, ವಿಕಲಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಇವರೆಲ್ಲರೂ ಅರ್ಜಿ ಸಲ್ಲಿಸಬಹುದು.
ಆಸಕ್ತಿ ಇರುವ ಎಲ್ಲರೂ ಕೂಡ..
ಉಪನಿರ್ದೇಶಕರು,
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ,
ಬೆಂಗಳೂರು ನಗರ ಜಿಲ್ಲೆ,
ಬೆಂಗಳೂರು.
ಈ ಅಡ್ರೆಸ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಪಡೆದು, ಅದನ್ನು ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ ಇದೇ ಅಡ್ರೆಸ್ ಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2024ರ ಫೆಬ್ರವರಿ 3, ಸಂಜೆ 5 ಗಂಟೆ.