ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಜಾರಿಗೆ 4 ತಿಂಗಳು ಕಲೆಯುತ್ತಿದೆ. ಸುಮಾರು ಮಹಿಳೆಯರಿಗೆ 3 ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಮೊದಲ 2 ಕಂತುಗಳ ಹಣ ಬಿಟ್ಟು ಇನ್ನೇನು ಬಂದಿಲ್ಲ ಎನ್ನುತ್ತಿದ್ದಾರೆ. ಇತ್ತ ಸರ್ಕಾರ ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ಸಮಸ್ಯೆ ಇರೋದಕ್ಕೆ ಹಣ ಬಂದಿಲ್ಲ ಎಂದು ಹೇಳುತ್ತಿದೆ.
ವಿಚಾರಿಸಲು ಆಹಾರ ಇಲಾಖೆಗೆ ಹೋದರೆ ಅವರಲ್ಲಿ ಮಾಹಿರಿ ಇಲ್ಲ, ಬ್ಯಾಂಕ್ ನಲ್ಲಿ ವಿಚಾರಿಸಿ ಎನ್ನುತ್ತಾರೆ, ಬ್ಯಾಂಕ್ ಗ್3 ಹೋದರೆ ನಮಗೆ ಗೊತ್ತಿಲ್ಲ ಆಹಾರ ಇಲಾಖೆಗೆ ಹೋಗಿ ಅಂತ ಹೇಳುತ್ತಾರ್3 ಎಂದು ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಇಲ್ವಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಮಹಿಳೆಯರು ಹೇಳುವ ಪ್ರಕಾರ ಅವರ ಬ್ಯಾಂಕ್ ಅಕೌಂಟ್ ಸರಿಯಾಗಿಯೇ ಇದೆ, ಸರ್ಕಾರದ ಸಮಸ್ಯೆ ಇಂದಲೇ ಹಣ ಬಂದಿಲ್ಲ. ಹೀಗಾಗಿ ಇದು ಸರ್ಕಾರದ ತೊಂದರೆಯೇ ಎಂದು ಗೊತ್ತಾಗುತ್ತಿದೆ.
ಹಲವು ಮಹಿಳೆಯರಿಗೆ ಒಂದು ಕಂತಿನ ಹಣವು ಬಂದಿಲ್ಲದೇ ಇರುವುದು ಅವರ ಆತಂಕ ಹೆಚ್ಚಿಸಿದೆ. ಆದರೆ ಇಂಥ ಸಮಸ್ಯೆ ಇದ್ದ ಮಹಿಳೆಯರಿಗೆ ಸರ್ಕಾರವು ಗೃಹಲಕ್ಷ್ಮಿ ಅದಾಲತ್ ಹಾಗೂ ಗೃಹಲಕ್ಷ್ಮಿ ಕ್ಯಾಂಪ್ ಎಲ್ಲವನ್ನು ನಡೆಸಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವ ಹಾಗೆ ಮಾಡಿದೆ. ಒಂದು ವೇಳೆ ಬೇರೆ ಬೇರೆ ಸಮಸ್ಯೆಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ, ಅಂಥವರು ಹಾಗೂ ಇನ್ನು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡದೆ ಇರುವವರಿಗೆ ಈಗ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡುವ ಅವಕಾಶ ನೀಡಿದೆ ಸರ್ಕಾರ.
ಈ ವೇಳೆ ಸರ್ಕಾರವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕು ಎಂದರೆ, ಈ ಒಂದು ಕೆಲಸವನ್ನು ಮಾಡಲೇಬೇಕು ಎಂದು ಸರ್ಕಾರ ತಿಳಿಸಿದೆ. ಅದು ಏನು ಎಂದರೆ, ಎಲ್ಲಾ ಮಹಿಳೆಯರು ಕೂಡ ಇಕೆವೈಸಿ ಮಾಡಿಸಿರಬೇಕು. ಈ ಒಂದು ಕೆಲಸ ಆಗಿದೆ ಎಂದರೆ ಮಾತ್ರ ಡಿಬಿಟಿ ಮೂಲಕ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತದೆ. ಇಲ್ಲವಾದರೆ ಬರದೇ ಇರುವ ಸಾಧ್ಯತೆ ಹೆಚ್ಚು, ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮನ್ನು ತಲುಪಬೇಕು ಎಂದರೆ, ಈ ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಿ.